ಮೂಡಿಗೆರೆ: ಬಿಜುವಳ್ಳಿ – ಮಾಕೋನಹಳ್ಳಿ ಮಾರ್ಗವಾಗಿ ಸಾಗುವ ರಸ್ತೆಯನ್ನು ದುರಸ್ತಿಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಭರತ್ ಕುನ್ನಹಳ್ಳಿ, ಮೂಡಿಗೆರೆ ನಗರದ ಬಿಜುವಳ್ಳಿ ಮಾಕೋನಹಳ್ಳಿ ಸಾಗುವ ರಸ್ತೆಯು ಸಂಪೂರ್ಣ ಗುಂಡಿಗಳಿಂದ ಕೂಡಿ ಹದಗೆಟ್ಟಿದೆ.
ವಾಹನಗಳು ತಿರುಗಾಡಲು ಯೋಗ್ಯವಾಗದೆ ಜನಸಾಮಾನ್ಯರು ಹಿಡಿ ಶಾಪ ಹಾಕಿಕೊಂಡು ತಿರುಗುತ್ತಿದ್ದಾರೆ ಈ ರಸ್ತೆ ದುರಸ್ತಿ ಗೊಳಿಸುವಂತೆ ಪಬ್ಲಿಕ್ ಇಂಪ್ಯಾಕ್ಟ್ ವಾಹಿನಿ ಮೂಲಕ ಜನಪ್ರಿಯ ಶಾಸಕರಲ್ಲಿ ಮನವಿ ಮಾಡಿಕೊಂಡರು.

ಹಾಗೆಯೇ ಮೂಡಿಗೆರೆ ಜನಪ್ರಿಯ ರಾಜಕಾರಿಣಿ ಎಂ. ಕೆ. ಪ್ರಾಣೇಶ್ ಅವರ ಮನೆಯು ಸಹ ಇದೆ ಮಾರ್ಗದಲ್ಲಿ ಇದ್ದು ಸ್ಥಳೀಯರ ಸಮಸ್ಯೆಗೆ ಸಹಕಾರ ಮಾಡಿಕೊಡಬೇಕು ಎಂದರು.
ದಯಮಾಡಿ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಿ ರಸ್ತೆ ಯಲ್ಲಿರುವ ದೊಡ್ಡ ದೊಡ್ಡ ಗುಂಡಿಗಳನ್ನು ಮುಚ್ಚಿಸಿ ಜೀವ ಬಲಿ ಆಗದಂತೆ ನೋಡಿಕೊಳ್ಳಿ ಎಂಬುದಾಗಿ ಆಗ್ರಹಿಸಿದರು.

ಪಟ್ಟಣದ ಪ್ರಸಿದ್ಧ ಸ್ಥಳ ಪೊಲೀಸ್ ರಾಣೆ ಮುಂಭಾಗದ ರಸ್ತೆಯಲ್ಲಿ ಗುಂಡಿ, ತಗ್ಗುಗಳು ಬಿದ್ದಿರುವದರಿಂದ ವಾಹನ ಸಂಚಾರ ಕಷ್ಟಕರವಾಗುತ್ತಿದೆ. ಅದಲ್ಲದೇ, ಪ್ರತಿದಿನ ಒಂದಲ್ಲ ಒಂದು ಬೈಕ್ ಸವರಾರು ಬೀಳುತ್ತಿದ್ದಾರೆ ಜನರು ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದಿಟ್ಟುಕೊಂಡು ಸಂಚರಿಸಬೇಕಾದ ಪರಿಸ್ಥಿತಿ ಬಂದಿದೆ ಎಂದು ಆರೋಪಿಸಿದರು.
ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಪ್ರವಾಸಿಗರೂ ಸಹಿತ ಈ ರಸ್ತೆಗಳನ್ನು ನೋಡಿ ಅಸಹ್ಯ ಪಡುತ್ತಿದ್ದಾರೆ. ಆದರಿಂದ ಈ ರಸ್ತೆ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡು, ರಸ್ತೆ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಬೇಕು ಎಂದು ಒತ್ತಾಯಿಸಿದರು.
ರಸ್ತೆ ದುರಸ್ತಿ ಕಾರ್ಯ ಶೀಘ್ರ ಆರಂಭಿಸಬೇಕು, ಇಲ್ಲವಾದಲ್ಲಿ ಉಗ್ರಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವರದಿ : ಪುನೀತ್ ಕಡಿದಾಳ್
9483811948
