Thursday, March 26, 2026
Homeಜಿಲ್ಲಾಸುದ್ದಿಮೂಡಿಗೆರೆ: ಅನಾಥರಿಗೆ ದಾನ ಧರ್ಮ ಮಾಡಿದ್ರೆ ಭಗವಂತನ ಆಶೀರ್ವಾದ ಸಿಗುತ್ತೆ ': ಸಿಸ್ಟರ್ ಹಿಲ್ಡಾ...

ಮೂಡಿಗೆರೆ: ಅನಾಥರಿಗೆ ದಾನ ಧರ್ಮ ಮಾಡಿದ್ರೆ ಭಗವಂತನ ಆಶೀರ್ವಾದ ಸಿಗುತ್ತೆ ‘: ಸಿಸ್ಟರ್ ಹಿಲ್ಡಾ ಲೋಬೊ

ಮೂಡಿಗೆರೆ: ತಾಲೂಕಿನ ಬಣಕಲ್ ನಜರೆತ್ ಶಾಲೆಯ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಬಣಕಲ್ ಸಮೀಪದ ಚಕ್ಕಮಕ್ಕಿ ಖಲಂದರಿಯ ಅನಾಥಾಶ್ರಮಕ್ಕೆ ಆಹಾರಧಾನ್ಯದ ಕಿಟ್, ಆಟಿಕೆಯ ಸಾಮಾನುಗಳನ್ನು ವಿತರಿಸಲಾಯಿತು.

ನಜರೆತ್ ಶಾಲೆಯ ಪ್ರಾಂಶುಪಾಲರಾದ ಸಿಸ್ಟರ್ ಹಿಲ್ಡಾ ಲೋಬೊ ಅನಾಥಾಶ್ರಮದ ಮಕ್ಕಳಿಗೆ ಆಹಾರಧಾನ್ಯದ ಕಿಟ್ ನೀಡಿ ಮಾತನಾಡಿ’ದೀಪಾವಳಿ ಹಬ್ಬದ ಪ್ರಯುಕ್ತ ನಜರೆತ್ ಶಾಲೆಯ ವತಿಯಿಂದ ಅನಾಥಾಶ್ರಮಗಳಿಗೆ ಆಹಾರಧಾನ್ಯ ವಿತರಣೆ ಮಾಡುತ್ತಿದ್ದೇವೆ.ಕಕ್ಕಿಂಜೆಯ ಸಿಯೋನ್ ಅನಾಥಾಶ್ರಮ, ಚಿಕ್ಕಮಗಳೂರಿನ ರಾಂಪುರದಲ್ಲಿರುವ ವೃದ್ಧಾಶ್ರಮಕ್ಕೆ ಆಹಾರಧಾನ್ಯ ವಿತರಿಸಲಿದ್ದೇವೆ.

ಬಡವರಿಗೆ ಅನಾಥರಿಗೆ ನೆರವು ನೀಡುವ ಮೂಲಕ ಹಬ್ಬದ ಸಂಭ್ರಮದ ಬೆಳಕನ್ನು ನಾವು ಕಾಣಬೇಕು ಎಂದರು.

ಬಡವರಿಗೆ ದಾನ ದರ್ಮ ಮಾಡುವುದರಿಂದ ದೇವರು ನಮಗೂ ಆಶೀರ್ವದಿಸುತ್ತಾನೆ.

ಇಂತಹ ಸಾಮಾಜಿಕ ಕಳಕಳಿಯ ಕಾರ್ಯಗಳು ನಿತ್ಯ ನಡೆಯುವಂತಾಗಬೇಕು.
ಮಾನವೀಯ ಗುಣಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ನಡೆಯಬೇಕಿದೆ ಎಂದರು.

ಚಕ್ಕಮಕ್ಕಿಯ ಖಲಂದರಿಯ ಅನಾಥಾಶ್ರಮಕ್ಕೆ ಆಹಾರಧಾನ್ಯದ ಕಿಟ್ ಹಾಗೂ ಮಕ್ಕಳ ಆಟಿಕೆಯ ಸಾಮಾನುಗಳನ್ನು ಅನಾಥಾಶ್ರಮದ ದರ್ಮಗುರು ಉಸ್ತಾದ್ ಸಿನಾನ್ ಪೈಝೀ ಅವರಿಗೆ ನಜರೆತ್ ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ಹಿಲ್ಡಾ ಲೋಬೊ ವಿತರಿಸಿದರು.

ಈ ಸಂದರ್ಭದಲ್ಲಿ ನಜರೆತ್ ಶಾಲಾ ಶಿಕ್ಷಕಿಯರಾದ ಸಿಸ್ಟರ್ ಜೆನ್ಸಿ,ಯಾಸ್ಮೀನ್,ಪ್ರೆಸಿಲ್ಲಾ ಡಿಸೋಜ,ಆಲ್ವಿನ್ ರೊಡ್ರಿಗಸ್,ಮುಖಂಡರಾದ ಆತೀಫ್,ಮಜೀದ್,ನಜರೆತ್ ಶಾಲೆಯ ವಿದ್ಯಾರ್ಥಿಗಳು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!