ಕಡೂರು: ತಾಲ್ಲೂಕಿನ ಕುಪ್ಪಾಳು ವಲಯದ ಸ.ನಂ 90/2ರ ವಲಯದಲ್ಲಿ ಚಿರತೆಯೊಂದು ಸಾವಿಗೀಡಾಗಿದೆ.
ಸುಮಾರು 8ರಿಂದ 10ರ ವಯೋಮಾನದ ಚಿರತೆಯು ಮತ್ತೊಂದು ಚಿರತೆ ಜತೆ ಕಾದಾಟದ ವೇಳೆ ಬೆನ್ನು, ಮುಖದ ಮೇಲೆ ಗಾಯ ಮತ್ತು ಹಲ್ಲಿನ ಗುರುತುಗಳು ಮೂಡಿದ್ದು ಸೋಂಕಿನಿಂದ ನಿತ್ರಾಣಗೊಂಡಿತ್ತು.
ಗ್ರಾಮಸ್ಥರ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ಸ್ಥಳಕ್ಕ ತೆರಳುವ ವೇಳೆಗೆ ಮೃತಪಟ್ಟಿತ್ತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿ ಕಳೇಬರವನ್ನು ಸುಟ್ಟುಹಾಕ ಲಾಯಿತು ಎಂದು ಇಲಾಖೆ ಮೂಲಗಳು ತಿಳಿಸಿವೆ.
ಈ ವೇಳೆ ಎಸಿಎಫ್ ಮೋಹನ್ ನಾಯ್ಕ, ಆರ್‌ಎಫ್‌ಒ ಹರೀಶ್, ತಂಗಲಿ ಉಪವಲಯ ಅರಣ್ಯಾಧಿಕಾರಿ ವೆಂಕಪ್ಪ ಗೋವಣ್ಣನವರ ಉಪಸ್ಥಿತರಿದ್ದರು.
