Saturday, August 15, 2026
Homeಕ್ರೈಮ್ಚಿಕ್ಕಮಗಳೂರು: ಕಾಫಿನಾಡಲ್ಲಿ ಮುಂದುವರೆದ ಮಳೆ ಆರ್ಭಟ: ಹಳ್ಳದಲ್ಲಿ ಬಿದ್ದು ರೈತ ಸಾವು!

ಚಿಕ್ಕಮಗಳೂರು: ಕಾಫಿನಾಡಲ್ಲಿ ಮುಂದುವರೆದ ಮಳೆ ಆರ್ಭಟ: ಹಳ್ಳದಲ್ಲಿ ಬಿದ್ದು ರೈತ ಸಾವು!

Telegram Group
Join Now

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಮುಂದುವರಿದ ಮಳೆ ಅಬ್ಬರ ಜೋರಾಗಿದ್ದು 2025ರ ವರ್ಷಪೂರ್ತಿ ಮಳೆಗೆ ಕಾಫಿನಾಡಲ್ಲಿ ಈವರೆಗೆ ಐದು ಬಲಿಯನ್ನು ಪಡೆದುಕೊಂಡಿದೆ.

ಹೌದು .. ಚಿಕ್ಕಮಗಳೂರು ತಾಲೂಕಿನ ದೇವಗೊಂಡನಹಳ್ಳಿಯಲ್ಲಿ ಎಮ್ಮೆ ಮೇಯಿಸಲು ಹೋಗಿದ್ದ ರೈತ ಹಳ್ಳದಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಲಕ್ಷ್ಮಣ್ ಗೌಡ (45) ಮೃತ ದುರ್ದೈವಿಯಾಗಿದ್ದು ನಿನ್ನೆ ಸಂಜೆಯಿಂದ ನಾಪತ್ತೆಯಾಗಿದ್ದ ಹಳ್ಳ ದಾಟುವಾಗ ಕಾಲು ಜಾರಿ ಬಿದ್ದು ಸಾವನ್ನಪ್ಪಿರೋ ಶಂಕೆ‌ ವ್ಯಕ್ತವಾಗಿದೆ.

ನಿರಂತರ ಮಳೆಯಿಂದ ಅಪಾಯದ ಮಟ್ಡದಲ್ಲಿ ಹರಿಯುತ್ತಿರೋ ಹಳ್ಳ-ಕೊಳ್ಳಗಳು ನೀರು ಕಡಿಮೆಯಾದ ಬಳಿಕ ಮೃತದೇಹ‌ ಪತ್ತೆಯಾಗಬಹುದು ಆದರೆ ನಾಪತ್ತೆಯಾಗಿದ್ದ ಲಕ್ಷ್ಮಣ್ ಗೌಡನಿಗಾಗಿ ಪೋಷಕರಿಂದ ಹುಡುಕಾಟ ನಡೆಯುತ್ತಿದೆ.

ಘಟನೆ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments