Wednesday, August 12, 2026
Homeಕ್ರೈಮ್ಚಿಕ್ಕಮಗಳೂರು: ಮಳೆ ಆರ್ಭಟ, ಕೊಟ್ಟಿಗೆ ಕುಸಿತ: ಒಂದು ಹಸು ಸಾವು, ಮತ್ತೊಂದಕ್ಕೆ ತೀವ್ರ ಗಾಯ

ಚಿಕ್ಕಮಗಳೂರು: ಮಳೆ ಆರ್ಭಟ, ಕೊಟ್ಟಿಗೆ ಕುಸಿತ: ಒಂದು ಹಸು ಸಾವು, ಮತ್ತೊಂದಕ್ಕೆ ತೀವ್ರ ಗಾಯ

Telegram Group
Join Now

ಚಿಕ್ಕಮಗಳೂರು: ಮಲೆನಾಡಿನ ತಾಲ್ಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಮಳೆಯ ಅವಾಂತರಕ್ಕೆ ಕೊಟ್ಟಿಗೆ ಕುಸಿದಿರುವುದರಿಂದ ಹಸು ಸಾವನಪ್ಪಿರುವ ಘಟನೆ ತರೀಕೆರೆ ತಾಲೂಕು ಲಕ್ಕವಳ್ಳಿ ಹೋಬಳಿ ಮಾಳಿಕೊಪ್ಪ ಗ್ರಾಮದಲ್ಲಿ ನಡೆದಿದೆ.

ಹಸುವಿನ ಮಾಲೀಕ ಚಂದ್ರಪ್ಪ ಎಂಬ ರೈತನ ಕೊಟ್ಟಿಗೆ ಭಾರೀ ಮಳೆಯಿಂದ ಸಂಪೂರ್ಣ ಕುಸಿದು ಬಿದ್ದು, ಹಾಲು ಕೊಡುವ ಒಂದು ಜಾನುವಾರು ಮೃತಪಟ್ಟಿದೆ. ಮತ್ತೊಂದು ಜಾನುವಾರು ಮೇಲೆ ಚಪ್ಪಡಿ ಕಲ್ಲು ಬಿದ್ದು ತೀವ್ರ ಗಾಯಗೊಂಡಿದೆ.

ಈ ಘಟನೆಯಿಂದ ರೈತನ ಕುಟುಂಬಕ್ಕೆ ಹಾಲು ಕೊಡುವ ಜಾನುವಾರು ಮೃತಪಟ್ಟಿದ ಪರಿಣಾಮ ಆದಾಯಕ್ಕೆ ತೊಂದರೆಯಾಗಿದ್ದು, ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿ ಎಂದು ಹಸುವಿನ ಮಾಲೀಕ ತಿಳಿಸಿದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments