Wednesday, March 25, 2026
Homeಕ್ರೈಮ್ಮೂಡಿಗೆರೆ : ಮಳೆ ರೌದ್ರವತಾರ : ಹುಲ್ಲೆಮನೆ - ಕುಂದೂರು ರಸ್ತೆ ಸಂಪೂರ್ಣ ಜಲಾವೃತ!

ಮೂಡಿಗೆರೆ : ಮಳೆ ರೌದ್ರವತಾರ : ಹುಲ್ಲೆಮನೆ – ಕುಂದೂರು ರಸ್ತೆ ಸಂಪೂರ್ಣ ಜಲಾವೃತ!

ಮೂಡಿಗೆರೆ: ತಾಲೂಕಿನಲ್ಲಿ ಮಳೆ ಆರ್ಭಟಕ್ಕೆ ಹುಲ್ಲೆಮನೆ – ಕುಂದೂರು ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು ಗ್ರಾಮಸ್ಥರು ಪರದಾಡುವಂತ ಸ್ಥಿತಿ ಒದಗಿಬಂದಿದೆ.

ಹೌದು .. ಈ ಕುರಿತು ಮಾತನಾಡಿದ ಪ್ರಸಾದ್ ಗೌಡ ಹುಲ್ಲೆಮನೆ, ತಾಲೂಕಿನ ಸುತ್ತಮುತ್ತಲು ಮಳೆ ಆರ್ಭಟ ಮುಂದುವರೆದಿದ್ದು ರಸ್ತೆ ಸಂಪೂರ್ಣ ಮುಳುಗಿದ್ದು ರಸ್ತೆಗೂ ಹಳ್ಳಕ್ಕೂ ವ್ಯತ್ಯಾಸ ಗೊತ್ತಾಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ

ಮೂಡಿಗೆರೆ ತಾಲ್ಲೂಕಿನ ತತ್ಕೋಳ – ಕೂದೂರು ಗ್ರಾಮದಲ್ಲಿ ನಿರ್ಮಿಸಿದ ಕಾಂಕ್ರೀಟ್ ರಸ್ತೆ ಮಳೆ ಬಿದ್ದಾಗಲೆಲ್ಲಾ ನೀರಿನಲ್ಲಿ ಮುಳುಗಿ ಸಂಚಾರಕ್ಕೆ ಅಡಚಣೆ ಉಂಟುಮಾಡುತ್ತಿದೆ. ಬಾಕ್ಸ್ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಈ ತೊಂದರೆಗೆ ಕಾರಣವೆಂದು ಆರೋಪ ಮಾಡಿದ್ದಾರೆ

ಮಳೆ ಬಂದ ತಕ್ಷಣ ರಸ್ತೆ ಮೇಲೆ ನೀರು ನಿಂತು ದ್ವಿಚಕ್ರ ಸವಾರರು ಸಂಚಾರ ಕಷ್ಟವಾಗುತ್ತಿದೆ. ನೀರಿನ ಹರಿವು ನಿಯಂತ್ರಣವಿಲ್ಲದೆ ನುಗುತ್ತಿದ್ದೂ ಸೂಕ್ತ ಚರಂಡಿ ಇಲ್ಲದೆ , ಕೆಲ ಮನೆಗಳಿಗೆ ನೀರು ಬರುತ್ತಿದೆ ಎಂದರು.

ಇದೆ ಊರಿನಲ್ಲಿ ಶಾಸಕಿ ನಯನ ಮೋಟಮ್ಮ ಅವರ ಕಾಫಿ ತೋಟ ಹಾಗೂ ತೋಟದ ಮನೆ ಇದ್ದು ಹಾಗೂ ಬಿ ಎಲ್. ಶಂಕರ್ ಅವರ ತೋಟ ಮನೆ ಇದ್ದು ಯಾವುದೇ ರೀತಿಯ ಅಭಿವೃದ್ಧಿ ಇಲ್ಲದಿರುವುದು ಬೇಸರದ ವಿಷಯ
ಅದಲ್ಲದೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮನೆ ಇದೆ ಊರಿನಲ್ಲಿದ್ದು ಯಾವುದೇ ರೀತಿಯ ಕೆಲಸ ಆಗದೆ ಇದ್ದದ್ದು ಹುಲ್ಲೆಮನೆ ಕುಂದೂರಿನ ಗ್ರಾಮಸ್ಥರಿಗೆ ಅತೀವ ಬೇಸರ ಉಂಟಾಗಿದೆ ಎಂದರು.

ಸಾರಗೋಡು, ಹುಲ್ಲೆಮನೆ ಮುಂತಾದ ಗ್ರಾಮಗಳಿಗೆ ಸಾಗುವ ರಸ್ತೆ ಇದಾಗಿದ್ದು ಸಮಸ್ಯೆಯನ್ನು ಬಗೆ ಹರಿಸುವಂತೆ ಮನವಿ ಮಾಡಿದರು. ಸಂಬಂಧ ಪಟ್ಟ ಇಲಾಖೆ ಚರಂಡಿ ನಿರ್ಮಾಣ ಮಾಡಿದರೆ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗುತ್ತದೆ ಎಂದು ತಿಳಿಸಿದರು. ಹಾಗೆ ಓಡಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಲು ಪಂಚಾಯಿತಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ವರದಿ : ಪುನೀತ್ ಕಡಿದಾಳು 
9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!