Wednesday, March 25, 2026
Homeಜಿಲ್ಲಾಸುದ್ದಿಮೂಡಿಗೆರೆ: ನಾನು ಹೆಸರಿಗೆ ಶಾಸಕಿ, ನೈಜ ಶಾಸಕಿ ಕಾರ್ಯಕರ್ತರೇ: ನಯನಾ ಮೋಟಮ್ಮ

ಮೂಡಿಗೆರೆ: ನಾನು ಹೆಸರಿಗೆ ಶಾಸಕಿ, ನೈಜ ಶಾಸಕಿ ಕಾರ್ಯಕರ್ತರೇ: ನಯನಾ ಮೋಟಮ್ಮ

ಮೂಡಿಗೆರೆ: ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಂವಾದ ಕಾರ್ಯಕ್ರಮ ಪಟ್ಟಣದ ರೈತ ಭವನದಲ್ಲಿ ಶಾಸಕಿ ನಯನಾ ಮೋಟಮ್ಮ ಅವರ ನೇತೃತ್ವದಲ್ಲಿ ನಡೆಯಿತು.

‎ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಎಲ್ಲಾ ಕಾರ್ಯಕರ್ತರ ಮಧ್ಯೆ ನಾನು ಒಬ್ಬಳು ಸಮಾನತೆಯೇ ಅತೀ ಮುಖ್ಯ ಜವಾಬ್ದಾರಿ ಎಂದು ಹೇಳಿದರು. ಹಾಗೆ ಈ ಸಂವಾದ ಕಾರ್ಯಕ್ರಮ ಶಾಸಕಿ ನಯನ ಮೋಟಮ್ಮ ಹೆಸರಿಗೆ ಇದ್ದಿದ್ದು ಆದರೆ ನಿಜವಾದ ಶಾಸಕಿ ಕಾರ್ಯಕರ್ತರು ಎಂದು ಹೇಳಿದರು.

‎ಹಾಗೆ ಕಾರ್ಯಕರ್ತರ ಅಹವಾಲು ಆಲಿಸಿ ತಾಳ್ಮೆಯಿಂದ ಪ್ರೀತಿಯಿಂದ ಪ್ರತಿಯೊಬ್ಬ ಕಾರ್ಯಕರ್ತರ ಸಮಸ್ಯೆಗಳಿಗೆ ಶೀಘ್ರದಲ್ಲಿ ಪರಿಹಾರ ನೀಡುವ ಭರವಸೆ ನೀಡಿದರು.

ಶಾಸಕಿಯಾಗಿ ಸುಮಾರು ಮುನ್ನೂರು ಕೋಟಿ ಅನುದಾನ ತಂದಿದ್ದೇನೆ, ಆ ಅನುದಾನವನ್ನು ಕಳಸ, ಮೂಡಿಗೆರೆ ಮತ್ತು ಆಲ್ದೂರ್ ಬ್ಲಾಕ್ ಗಳಿಗೆ ಸಮನಾಗಿ ಹಂಚಿಕೆ ಮಾಡಿ ಅಭಿವೃದ್ಧಿ ಕಾರ್ಯಗಳಿಗೆ ಬಳಸಿದ್ದೇನೆ ಎಂಬುದಾಗಿ ತಿಳಿಸಿದರು. ಅದೇ ರೀತಿ ಎಲ್ಲಾ ಭಾಗದ ಮುಖಂಡರ ವಿಶ್ವಾಸಕ್ಕೆ ಪಡೆದು ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆ ಮಾಡಿದ್ದೇನೆ.

ನಿಮ್ಮೆಲ್ಲರ ಪರಿಶ್ರಮದಿಂದ ಇಂದು ನಾವು ಆಳ್ವಿಕೆ ಮಾಡುತ್ತಾ ಇದ್ದೇವೆ, ತಮಗೆಲ್ಲರಿಗೆ ವೈಯಕ್ತಿಕವಾಗಿ ಧನ್ಯವಾದಗಳು ಎಂದು ಹೇಳಿದರು.

ಶಾಸಕರ ನಡೆ ಸರಿ ಇಲ್ಲಾ, ಯಾರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲಾ ಎಂದು ಕೆಲವು ವಿರೋಧಿಗಳು ಟೀಕೆ ಮಾಡುತ್ತಿದ್ದು ಅದಕ್ಕೆಲ್ಲ ತಲೆಕೆಡಿಸುಕೊಳ್ಳುವ ವ್ಯಕ್ತಿ ನಾನಲ್ಲ. ನನ್ನ ಆಲೋಚನೆ ಮೂಡಿಗೆರೆ ಅಭಿವೃದ್ಧಿಯಾಗಬೇಕೆಂದು ಅಷ್ಟೇ. ನಾನು ನಿಮ್ಮೊಂದಿಗೆ ಸದಾ ಸಂಪರ್ಕದಲ್ಲಿ ಇದ್ದೇನೆ ನನಗೆ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನು ಸಮಾನರು ಈ ನನ್ನ ಉದ್ದೇಶ ಕೆಲವರಿಗೆ ತಪ್ಪಾಗಿ ಕಾಣುತ್ತ ಇದೆ, ಆದರೆ ನಾನು ಅಭಿವೃದ್ಧಿ ವಿಚಾರವಾಗಿ ಹಲವಾರು ಯೋಜನೆಗಳಿದ್ದು ಸಾಕಾರಗೊಳ್ಳಲು ತಾವೆಲ್ಲರೂ ಜೊತೆಗೆ ಇರಬೇಕು ಎಂದರು.

‎ಈ ಸಂದರ್ಭದಲ್ಲಿ ಕಳಸ ಬ್ಲಾಕ್ ಅಧ್ಯಕ್ಷ ಶ್ರೇಣಿಕ್, ಆಲ್ದೂರು ಬ್ಲಾಕ್ ಅಧ್ಯಕ್ಷ ಮುದಾಫಿರ್, ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಮೂಡಿಗೆರೆ ಪಟ್ಟಣ ಪಂಚಾಯತ್ ಅಧ್ಯಕ್ಷ ವೆಂಕಟೇಶ್, ಶಂಕರ್ ಚಿಕ್ಕಳ, ದೀಪಕ್ ಕಡಿದಾಳ್, ಜಗದೀಶ್ ಸೇರಿದಂತೆ ಹೋಬಳಿ ಅಧ್ಯಕ್ಷರು, ಪಧಾಧಿಕಾರಿಗಳು, ಬೂತ್ ಅಧ್ಯಕ್ಷರು, ಕಾಂಗ್ರೆಸ್ ಯುವ ಮುಖಂಡರು, ಮಹಿಳಾ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಸಂವಾದ ಸಭೆಯಲ್ಲಿ ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!