Tuesday, February 10, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಬೈಗೂರಿನಲ್ಲಿ ಹೊಯ್ಸಳರ ಕಾಲದ ವೀರಗಲ್ಲು ಶಾಸನ ಪತ್ತೆ

ಚಿಕ್ಕಮಗಳೂರು: ಬೈಗೂರಿನಲ್ಲಿ ಹೊಯ್ಸಳರ ಕಾಲದ ವೀರಗಲ್ಲು ಶಾಸನ ಪತ್ತೆ

ಚಿಕ್ಕಮಗಳೂರು: ತಾಲೂಕು, ಬೈಗೂರು ಗ್ರಾಮದ ನಿವೇದನ್‌ಗೆ ಸೇರಿದ ಜಮೀನಿನಲ್ಲಿ ಬೈಗೂರು ಗ್ರಾಮ ಪಂಚಾಯಿತಿ ಪಿಡಿಒ ಶರತ್ ಕುಮಾರ್ ಪಿ.ಡಿ. ಇವರ ಸೂಚನೆಯ ಮೇರೆಗೆ ಶಾಸನ ಸಂಶೋಧಕರಾದ ಮೇಕನಗದ್ದೆ ಲಕ್ಷ್ಮಣಗೌಡರು 12ನೇ ಶತಮಾನಕ್ಕೆ ಸೇರಿದ ಹೊಯ್ಸಳರ ಕಾಲದ ವೀರಗಲ್ಲು ಶಾಸನವನ್ನು ಪತ್ತೆ ಹಚ್ಚಿದ್ದಾರೆ.

ಶಾಸನವು ನಾಲ್ಕು ಅಡಿ ಎತ್ತರವಿದ್ದು ಎರಡು ಅಡಿ ಅಗಲವಿದೆ. ಮೂರು ಹಂತಗಳಲ್ಲಿ ಆಕರ್ಷಕ ಶಿಲ್ಪಗಳ ಕೆತ್ತನೆಗಳಿದ್ದು ನಡುವಿನ ಎರಡು ಪಟ್ಟಿಗಳಲ್ಲಿ ಮತ್ತು ಆಚೀಚೆಯ ಎರಡು ಬದಿಗಳಲ್ಲಿ ಬರವಣಿಗೆ ಇದೆ. ಒಟ್ಟು ೮ ಸಾಲುಗಳಿರುವ ಈ ಶಾಸನದಲ್ಲಿ ಮೊದಲ ಹಂತದಲ್ಲಿರುವ ಕೆತ್ತನೆ ಹಾಗೂ ಒಂದಷ್ಟು ವಿವರಗಳು ಸವೆದು ಹೋಗಿವೆ. ಈ ಶಾಸನವು ಹೊಯ್ಸಳ ಆಳ್ವಿಕೆಯ ಕಾಲಕ್ಕೆ ಸಂಬಂಧಿಸಿದ ಕೆಲವು ಅಪರೂಪದ ಮಾಹಿತಿಗಳನ್ನು ತಿಳಿಸುತ್ತದೆ ಎಂದು ಶಾಸನವನ್ನು ಓದಿ ಪಠ್ಯ ತಯಾರಿಸಿರುವ ಮೈಸೂರಿನ ಶಾಸನ ತಜ್ಞರಾದ ಎಚ್. ಎಂ. ನಾಗರಾಜ್ ರಾವ್ ತಿಳಿಸಿದರು

ಅದೇ ರೀತಿ ಉದಯಾದಿತ್ಯನ ಮಗಳು ಏಚಲ ದೇವಿಯವರು ನಿಧನವಾದಾಗ ಸಹ ಹಲವರು ವೇಳೆಯಾಗಿ ಮರಣ ಹೊಂದಿದ ಉಲ್ಲೇಖವೂ ಇತರ ಶಾಸನಗಳಲ್ಲಿ ಕಂಡು ಬರುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!