Wednesday, August 12, 2026
Homeಕ್ರೈಮ್ಶೃಂಗೇರಿ: ಚಳ್ಳಕೆರೆಯಿಂದ ಪ್ರವಾಸಕ್ಕೆಂದು ಬಂದಿದ್ದ ಶಾಲಾ ಬಸ್‌ ಪಲ್ಟಿ: ವಿದ್ಯಾರ್ಥಿಗಳಿಗೆ ತೀವ್ರ ಗಾಯ!

ಶೃಂಗೇರಿ: ಚಳ್ಳಕೆರೆಯಿಂದ ಪ್ರವಾಸಕ್ಕೆಂದು ಬಂದಿದ್ದ ಶಾಲಾ ಬಸ್‌ ಪಲ್ಟಿ: ವಿದ್ಯಾರ್ಥಿಗಳಿಗೆ ತೀವ್ರ ಗಾಯ!

Telegram Group
Join Now

ಶೃಂಗೇರಿ: ಪ್ರವಾಸಕ್ಕೆಂದು ತೆರಳುತ್ತಿದ್ದಾಗ ಚಾಲಕನ ಅಜಾಗರೂಕತೆಯ ಚಾಲನೆಯಿಂದ ಕಾಲೇಜು ಬಸ್ಸೊಂದು ಪಲ್ಟಿಯಾಗಿ ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಶೃಂಗೇರಿ ಸಮೀಪ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ನಡೆದಿದೆ.

ಹೌದು .. ಚಳ್ಳಕೆರೆಯ ವಾಸವಿ ಪಿಯು ಕಾಲೇಜ್ ಉಪನ್ಯಾಸಕರು ಹಾಗೂ150 ವಿದ್ಯಾರ್ಥಿಗಳು ನಾಲ್ಕು ಬಸ್ಸಿನಲ್ಲಿ ಶೃಂಗೇರಿ ಪ್ರವಾಸ ಹೊರಟ್ಟಿದ್ದು ಬುಧವಾರ ರಾತ್ರಿ 11.15ರ ವೇಳೆಗೆ ಕೆ ಎ41ಎ7195 ರ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದು ಆದರೆ ಗುರುವಾರ ಬೆಳಗ್ಗಿನ ಜಾವ 5-30ಗಂಟೆಯ ಸಮಯದಲ್ಲಿ ಚಾಲಕನ ಅಜಾಗರೂಕತೆಯಿಂದ ಪಲ್ಟಿಯಾಗಿದ್ದು ಮೂರು ಜನ ಉಪನ್ಯಾಸಕರು ಹಾಗೂ 22 ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ.

ಬಸ್‌,ನಲ್ಲಿದ್ದ ವಿದ್ಯಾರ್ಥಿಗಳಾದ ನಕ್ಷತ್, ಪೃತ್ವೀರಾಜ್, ಸಂಜಯ್, ಶ್ರವಣ್, ಯತೀಶ್ ರವರಿಗೆ ತೀವ್ರ ಗಾಯಗಳಾಗಿದ್ದು ಇನ್ನೂ 10 ಜನರಿಗೆ ಸಣ್ಣ ಪುಟ್ಟ ಗಾಯವಾಗಿರುತ್ತೆ

ವಿಷಯ ತಿಳಿದು ತಕ್ಷಣ ಶೃಂಗೇರಿ ಪಿಎಸ್ಐ ಅಭಿಷೇಕ್ ಹಾಗೂ ಪೊಲೀಸರು ಗಾಯಾಳುಗಳನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನಾ ಸಂಬಂಧ ಶೃಂಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments