ಮೂಡಿಗೆರೆ: ವಿಜಯ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹ್ಯಾಂಡ್ ಪೋಸ್ಟ್ ವೃತ್ತದಲ್ಲಿ ಆಚರಿಸಲಾಗಿದ್ದು ಕನಕದಾಸ ಹಾಗೂ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅದ್ದೂರಿಯಾಗಿ ಚಾಲನೆ ನೀಡಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಧರ್ಮಸ್ಥಳ ಸೌಜನ್ಯ ಪರ ಹೋರಾಟಗಾರ ಗಿರೀಶ್ ಮಟ್ಟಣ್ಣ ನವರ್ ಮೂಡಿಗೆರೆ ಪ್ರದೇಶವು ಹಿಂದಿನಿಂದಲೂ ಅನೇಕ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದು ಹುಟ್ಟು ಹೋರಾಟದ ಭೂಮಿಯಾಗಿದೆ ಎಂದರು. ಸಾಮಾಜಿಕ ಹೋರಾಟಗಳಲ್ಲಿ ಇಟ್ಟ ಹೆಜ್ಜೆ ಹಿಂದೆ ತೆಗೆಯದೆ ನ್ಯಾಯಯುತ ಹೋರಾಟಗಳಲ್ಲಿ ನಮ್ಮನ್ನು ನಾವು ತೊಡಗಿಸಿಕ್ಕೊಳ್ಳಬೇಕು,ರೈತರಿಂದಲೇ ನಾವೆಲ್ಲ ಬದುಕಿದ್ದು ರೈತರ ಹೋರಾಟಗಳಲ್ಲಿ ಸಂಘಟನೆಗಳು ಸಹಕಾರ ನಿಡಬೇಕು. ಜಾತಿ ಭೇದ ದೂರವಿಟ್ಟು ನಾವೆಲ್ಲರೂ ಒಂದಾಗಿ ಬಾಳಬೇಕು ಎಂದರು
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಂಚಾಲಕಿ ಅನಿತಾ ಜಗದೀಪ್ ಮಾತನಾಡಿ ನವೆಂಬರ್ ತಿಂಗಳಲ್ಲಿ ಮಾತ್ರವಲ್ಲದೆ ಜೀವನದಲ್ಲಿ ಕನ್ನಡ ಅಳವಡಿಸಿಕೊಂಡು ಕನ್ನಡ ಭಾಷೆ ಉಳಿಸಿ ಬೆಳೆಸಿಕೊಂಡು ಹೋಗಬೇಕು, ವ್ಯಾಪಾರ ಕ್ಷೇತ್ರದಲ್ಲಿ ಕನ್ನಡ ಭಾಷೆಯಲ್ಲಿ ವ್ಯವಹರಿಸಬೇಕು ಎಂದರು.
ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಹಕೀಮ್ ಮಾತನಾಡಿ, ಕರ್ನಾಟಕವು ಜ್ಞಾನ, ಕಲೆ ಸಂಪದ್ಭರಿತ ಭೂಮಿಯಾಗಿದ್ದು, ತನ್ನ ಕಾಲಾತೀತ ಸಂಪ್ರದಾಯಗಳು ಮತ್ತು ಪ್ರಗತಿಪರ ದೃಷ್ಟಿಕೋನದ ಮೂಲಕ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದು ಅವರು ಹೇಳಿದರು.
ದಾವೂದ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಮುತ್ತಿಗೆಪುರ ಸರ್ಕಾರಿ ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಂಚಾಲಕ ಶಾಂತ ಕುಮಾರ್, ಸಾಮಾಜಿಕ ಹೋರಾಟಗಾರ ಜಗದೀಶ್ ಚಕ್ರವರ್ತಿ, ಸಮಾಜ ಸೇವಕ ಹಕೀಮ್ ಹಾಜಿ, ಕ.ಸಾ.ಪ. ಸಂಯೋಜಕರು ಆನಂದ್ ,ಹಳೇ ಮೂಡಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಂಜಿತಾ, ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ವಿನೋದ್ ಬಿದರಹಳ್ಳಿ ಸಿಯಾದ್ದಿನ್ ಸೇರಿದಂತೆ ಕನ್ನಡಭಿಮಾನಿಗಳು ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಪಧಾಧಿಕಾರಿಗಳು ಉಪಸ್ಥಿತರಿದ್ದರು
