ಹಾಸನ : ಆಲೂರು ತಾಲೂಕು ಕ್ರೀಡಾಂಗಣವನ್ನು ಸರಿಯಾಗಿ ನಿರ್ವಹಣೆ ಮಾಡದ ಪರಿಣಾಮ, ಕ್ರೀಡಾಂಗಣದಲ್ಲಿ ಗಿಡಗಂಟಿಗಳು ಬೆಳೆದಿದ್ದು, ಕ್ರೀಡಾ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ. ಸ್ಥಳೀಯ ಕ್ರೀಡಾ ಅಭಿಮಾನಿಗಳು ಹಾಗೂ ಯುವಕರು ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕು ಮಟ್ಟದ ಮತ್ತು ಜಿಲ್ಲೆಯ ಮಟ್ಟದ ಅನೇಕ ಕ್ರೀಡಾ ಸ್ಪರ್ಧೆಗಳು ಇಲ್ಲಿ ನಡೆಯುತ್ತವೆ. ಆದರೆ ಕಳೆದ ಕೆಲವು ತಿಂಗಳಿನಿಂದ ಕ್ರೀಡಾಂಗಣದ ಪರಿಸರ ಸಂಪೂರ್ಣ ಅಸಮರ್ಪಕವಾಗಿದೆ. ಗಿಡಗಂಟಿ, ಕಸದ ಗುಡ್ಡಗಳು ಹಾಗೂ ನಿರ್ಲಕ್ಷ್ಯದಿಂದ ಕ್ರೀಡಾಂಗಣದ ಸೌಂದರ್ಯ ಹಾಳಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕ್ರೀಡಾ ಪ್ರೇಮಿಗಳು ಅಧಿಕಾರಿಗಳಿಂದ ತಕ್ಷಣ ಕ್ರಮ ಕೈಗೊಂಡು ಕ್ರೀಡಾಂಗಣವನ್ನು ಸ್ವಚ್ಛಗೊಳಿಸಿ, ಸರಿಯಾದ ನಿರ್ವಹಣೆ ಮಾಡಲು ಮನವಿ ಮಾಡಿದ್ದಾರೆ. ಅವರು ಯುವಕರ ಶಾರೀರಿಕ ಹಾಗೂ ಮಾನಸಿಕ ಅಭಿವೃದ್ಧಿಗೆ ಕ್ರೀಡೆ ಅತ್ಯಂತ ಅಗತ್ಯ. ಈ ರೀತಿಯ ನಿರ್ಲಕ್ಷ್ಯ ಕ್ರೀಡಾ ಸಂಸ್ಕೃತಿಗೆ ಧಕ್ಕೆಯಾಗಿದೆ ಎಂದು ತಿಳಿಸಿದ್ದಾರೆ.
