ಮೂಡಿಗೆರೆ : ಬಸ್ ನಿಲ್ದಾಣದ ಸಮೀಪವಿರುವ ಪಟ್ಟಪಂಚಾಯತಿಯ ವಾಣಿಜ್ಯ ಮಳಿಗೆಗ ಎರಡು ಅಂತಸ್ಥಿನ ಕಟ್ಟಡ ಶಿಥಿಲಗೊಂಡಿದ್ದು ಯಾವಗ ಬೇಕಾದರೂ ಬೀಳುವ ಹಂತದಲ್ಲಿದ್ದು ನೂರಾರು ಅಮಾಯಕರನ್ನು ಬಲಿತೆಗೆದುಕೊಳ್ಳುವ ಸಾಧ್ಯತೆಗಳೆ ಅಧಿಕವಾಗಿದೆ.

ಹೌದು ಮೂಡಿಗೆರೆ ಪಟ್ಟಣ ಪಂಚಾಯತಿ 1996-97 ನೇ ಸಾಲಿನಲ್ಲಿ ಮೂಡಿಗೆರೆ -ತತ್ಕೊಳ -ಅಲ್ದೂರು ಸಂಪರ್ಕ ಕಲ್ಪಿಸುವ ಜಿಲ್ಲಾ ಮುಖ್ಯ ರಸ್ತೆ ಯನ್ನೆ ಒತ್ತುವರಿ ಮಾಡಿ 10 ನೇ ಹಣ ಕಾಸಿನ ಯೋಜನೆಯಡಿಯಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಿ 2000ನೇ ಇಸವಿಯಲ್ಲಿ ವ್ಯಾಪಾರಿಗಳಿಗೆ ಹರಾಜು ಮೂಲಕ ಕೊಟ್ಟು ಬಾಡಿಗೆ ವಸೂಲಿ ಮಾಡುತಿತ್ತು.
ಆದರೆ ಕಟ್ಟಡ ಶಿಥಿಲಗೊಂಡಿದ್ದು ಮೇಲ್ಪದರಗಳು ಉದುರಲು ಪ್ರಾರಭವಾಗಿದೆ. ಕಟ್ಟಡದ ವ್ಯಾಪಾರಿಗಳು ದುರಸ್ತಿ ಮಾಡುವಂತೆ ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.ಒಂದೆಡೆ ರಸ್ತೆಗೆ ಒತ್ತುವರಿ ಮಾಡಿ ಕಟ್ಟಿರುವ ಕಾರಣ ಸಾರ್ವಜನಿಕರು ತಮ್ಮ ವಾಹನಗಳನ್ಮ್ನ ಕಟ್ಟಡದ ಕೆಳಗಡೆ ನಿಲ್ಲಿಸುತ್ತಿದ್ದು. ಬಸ್ಸು ಹಾಗೂ ಬೇರೆ ವಾಹನಗಳು ಕಟ್ಟಡದ ಅಕ್ಕ ಪಕ್ಕದಲ್ಲಿ ಎಡೆಬಿಡದೆ ಓಡಾಡುತ್ತಿವೆ. ಗ್ರಾಮೀಣಾ ಪ್ರದೇಶಕ್ಕೆ ಖಾಸಗಿ ವಾಹನಗಳಿಗೆ ಹೋಗಲು ಕೂಲಿ ಕಾರ್ಮಿಕರು ,ವಿಧ್ಯಾರ್ಥಿಗಳು ಈ ಕಟ್ಟಡದ ಕೆಳಗೆ ನಿಲ್ಲುತ್ತಿದ್ದಾರೆ ಶಿಥಿಲಾವಸ್ಥೆಯಲ್ಲಿರುವ ಕಟ್ಟಡ ಯಾವಕ್ಷಣದಲ್ಲಾದರೂ ಕುಸಿದರೆ ಹಲವರ ಜೀವಗಳು ಹೋಗುವುದಂತು ಗ್ಯಾರಂಟಿ. ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಬಾಡಿಗೆ ಮುಖ್ಯವೆ ಹೊರತು ಜನರ ಜೀವ ಮುಖ್ಯವಲ್ಲಾ ಎನ್ನುವಂತೆ ವರ್ತಿಸುತ್ತಿದ್ದಾರೆ.
ಒಂದಡೆ ಜಿಲ್ಲಾ ರಸ್ತೆಯನ್ನೆ ಒತ್ತುವರಿ ಮಾಡಿ ಅಕ್ರಮವಾಗಿ ವಾಣಿಜ್ಯ ಕಟ್ಟಡ ನಿರ್ಮಿಸಿದ್ದು ಬೇಲಿಯೇ ಎದ್ದು ಹೊಲ ಮೆಯ್ದಂತಾಗಿದೆ. ವಾಹನ ಮತ್ತು ಸಾರ್ವಜನಿಕರ ಓಡಾಟಕ್ಕೆ ಅನಾನುಕೂಲ ವಾಗುವುದರೊಂದಿಗೆ ಸಾರ್ವಜನಿಕರ ಜೀವ ತೆಗೆಯಲು ಸಿದ್ದವಾಗಿರುವ ಕಟ್ಟಡಕ್ಕೆ ಮುಕ್ತಿ ದೊರೆಯುವುದೆಂದು ಎನ್ನುವುದು ಸಾರ್ವಜನಿಕ ವಲಯದಲ್ಲಿ ಪ್ರಶ್ನೆ ಮೂಡಿದೆ
