Tuesday, February 10, 2026
Homeಜಿಲ್ಲಾಸುದ್ದಿಮೂಡಿಗೆರೆ : ಸಬ್ಲೀ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಸಂಪನ್ಮೂಲ ಕೇಂದ್ರ ಅರ್ಪಣೆ

ಮೂಡಿಗೆರೆ : ಸಬ್ಲೀ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಸಂಪನ್ಮೂಲ ಕೇಂದ್ರ ಅರ್ಪಣೆ

ಮೂಡಿಗೆರೆ : ವಿಮುಕ್ತಿ ಚಾರಿಟೇಬಲ್ ಟ್ರಸ್ಟ್ ರಿ. ಬಣಕಲ್ ವತಿಯಿಂದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಸಬ್ಲಿ ಶಾಲೆಗೆ ಮಕ್ಕಳ ಸಂಪನ್ಮೂಲ ಕೇಂದ್ರವನ್ನು ಅರ್ಪಿಸಲಾಯಿತು

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಮುಕ್ತಿ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕರಾದ ಫಾದರ್ ಅರುಣ್ ಲೋಬೋ ಸಂಸ್ಥೆಯು ಮಹಿಳೆ, ಮಕ್ಕಳು ಮತ್ತು ದುರ್ಬಲ ವರ್ಗದವರ ಪರವಾಗಿ ಕೆಲಸಗಳನ್ನು ಮಾಡಲಾಗುತ್ತಿದ್ದು ವಿಶೇಷವಾಗಿ ಆರೋಗ್ಯ, ಶಿಕ್ಷಣ ಮತ್ತು ನಾಯಕತ್ವ ಇಂತಹ ವಿಚಾರಗಳಲ್ಲಿ ಹೆಚ್ಚು ಮಹತ್ವವನ್ನ ಸಂಸ್ಥೆ ನೀಡುತ್ತದೆ ಎಂದು ತಿಳಿಸಿದರು.

ಈ ನಿಟ್ಟಿನಲ್ಲಿ, ಮಕ್ಕಳ ಸಂಪನ್ಮೂಲ ಕೇಂದ್ರವು, ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸುವುದು ಹಾಗೂ ಬೆಳೆಸುವುದು ಅಂತಯೇ ಪಠ್ಯ ಮತ್ತು ಪಠ್ಯೇತರ ಚಟುವಟಿಕೆ, ಕಲಿಕೆ, ಬರವಣಿಗೆ, ಓದು, ಆಟ, ಮತ್ತು ಕಲೆ ಎಲ್ಲಾ ಅಂಶಗಳನ್ನು ಅರ್ಥೈಸಿಕೊಂಡು, ಇದಕ್ಕೆ ಪೂರಕವಾಗಿರುವಂತಹ ಪುಸ್ತಕಗಳು, ಕಂಪ್ಯೂಟರ್ ಶಿಕ್ಷಣ, ಹೊರಾಂಗಣ ಮತ್ತು ಒಳಾಂಗಣ ಆಟಗಳು, ಮತ್ತು ಇತರ ಚಟುವಟಿಕ ಸಾಮಗ್ರಿಗಳನ್ನು ಮಕ್ಕಳ ಸಂಪನ್ಮೂಲ ಕೇಂದ್ರದಲ್ಲಿ ನೀಡಲಾಗಿದ್ದು, ಇದರ ಸದ್ಬಳಕೆಯನ್ನು ಗ್ರಾಮದಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಕಲಿಕೆಯನ್ನು ಮಾಡಲು ಇಚ್ಚಿಸುವ ಎಲ್ಲಾ ಮಹಿಳೆಯರು ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಮರುಳ ಸಿದ್ದಪ್ಪ ಮಾತನಾಡಿ, ನಮ್ಮ ಶಾಲೆಯನ್ನ ಗುರುತಿಸಿ ಈ ಶಾಲೆಗೆ ಮಕ್ಕಳ ಸಂಪನ್ಮೂಲ ಕೇಂದ್ರವನ್ನ ಮಾಡಿ ಅಗತ್ಯ ಪಠ್ಯಪುಸ್ತಕಗಳು ಮತ್ತು ಪಠ್ಯೇತರ ಚಟುವಟಿಕೆಗಳನ್ನು ನೀಡಿರುವ ಸಂಸ್ಥೆಗೆ ನಾವು ಆಭಾರಿಯಾಗಿದ್ದೇವೆ ಎಂದು ತಿಳಿಸಿದರು

ಸಂಪನ್ಮೂಲ ವ್ಯಕ್ತಿಯಾದ ನವೀನ್ ಆನೆದಿಬ್ಬ ಮಾತನಾಡಿ ಮಕ್ಕಳ ಸಂಪನ್ಮೂಲ ಕೇಂದ್ರಕ್ಕೆ ನೀಡಿರುವ ಪ್ರತಿಯೊಂದು ವಸ್ತುಗಳನ್ನು ಸದ್ಬಳಕೆ ಮಾಡಿಕೊಂಡು ಅವುಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕು

ಅದೇ ರೀತಿಯಲ್ಲಿ ಇದರ ಜವಾಬ್ದಾರಿ ಶಾಲಾ ಶಿಕ್ಷಕರು ಮತ್ತು ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಎಲ್ಲಾ ಪೋಷಕರ ಜವಾಬ್ದಾರಿ ಆಗಿರುತ್ತದೆ ಇದನ್ನು ಹಾಳಾಗದಂತೆ ಉಳಿಸಿಕೊಂಡು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಬೇಕು ಎಂದು ತಿಳಿಸಿದರು

ವಿಮುಕ್ತಿ ಸ್ವ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಆರ್ಥಿಕ ಭಾನು ಮಾತನಾಡಿ ಇಂತಹ ಕಾರ್ಯಕ್ರಮ ಸಂಸ್ಥೆಯಿಂದ ಮಾಡುತ್ತಿರುವುದು ಶ್ಲಾಘನೀಯ ಎಲ್ಲರೂ ಇದನ್ನೂ ಬಳಸಿಕೊಳ್ಳೋಣ ಎಂದರು

ಕಾರ್ಯಕ್ರಮದಲ್ಲಿ ಸಂಸ್ಥೆಯ ಡ್ಯಾನಿಯಲ್, ಬರ್ನಾದೇತ್, ವಿಮುಕ್ತಿ ಸಂಸ್ಥೆಯ ವಿಂದ್ಯಾ ಯೋಗೇಶ್, ಶಾಲೆಯ ಸಹ ಶಿಕ್ಷಕಿ ಸುದರ್ಶನಿ ವಿಮಕ್ತಿ ಸಂಸ್ಥೆಯಲ್ಲಿ ವಿವಿಧ ವಿಭಾಗಗಳಲ್ಲಿ ಶಿಕ್ಷಕಿಯರಾಗಿ ಕಾರ್ಯ ನಿರ್ವಹಿಸುತ್ತಿರುವ ಗೀತಾ ಕೆ ಆರ್, ಪ್ರಶಾಂತಿ, ರಮ್ಯಾ, ಶಶಿಕಲಾ, ಕವಿತಾ, ಗ್ರಾಮ ಪಂಚಾಯಿತಿ ಸದಸ್ಯರಾದ ಸರೋಜಾ ವಿಮುಕ್ತಿ ಸ್ವಸಹಾಯ ಸಂಘದ ಪದಾಧಿಕಾರಿಗಳು ಮತ್ತು ಮಹಿಳೆಯರು.ಪೋಷಕರು, ಎಸ್ ಡಿ ಎಂ ಸಿ ಅಧ್ಯಕ್ಷರಾದ ಹರೀಶ್ ಹಾಗೂ ಪದಾಧಿಕಾರಿಗಳು ಸೇರಿದಂತೆ ಶಾಲಾ ಮಕ್ಕಳು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!