Friday, March 27, 2026
Homeಜಿಲ್ಲಾಸುದ್ದಿಮಂಗಳೂರು: BPS (ಬಲೆ ಪರ್ಕ ಸೇನೆ) ವಾಟ್ಸಪ್ ಗ್ರೂಪ್ ನಿಂದ ನಗುವಿನ ಒಡೆಯ "ರಾಕೇಶ್ ಪೂಜಾರಿ"...

ಮಂಗಳೂರು: BPS (ಬಲೆ ಪರ್ಕ ಸೇನೆ) ವಾಟ್ಸಪ್ ಗ್ರೂಪ್ ನಿಂದ ನಗುವಿನ ಒಡೆಯ “ರಾಕೇಶ್ ಪೂಜಾರಿ” ಯವರ ಜನ್ಮ ದಿನ ಆಚರಣೆ

ಮಂಗಳೂರು: ಕಾಮಿಡಿ ಕಿಲಾಡಿ ಹಾಗೂ ಸಿನಿಮಾ ನಟ ರಾಕೇಶ್ ಪೂಜಾರಿ ಅವರ ಜನ್ಮದಿನವನ್ನು  BPS (ಬಲೆ ಪರ್ಕ ಸೇನೆ) ಸ್ನೇಹಿತರು ಮಂಗಳೂರಿನ ಸ್ನೇಹ ದೀಪ ಸಂಸ್ಥೆಯ ಮಕ್ಕಳೊಂದಿಗೆ ಆಚರಿಸುವುದರ ಜೊತೆಗೆ ಸಂಸ್ಥೆಯ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಸಂಸ್ಥೆಗೆ ಅಗತ್ಯ ವಸ್ತುಗಳು, ಸಂಸ್ಥೆಗೆ ಆರ್ಥಿಕ ಸಹಕಾರವನ್ನು ಮಾಡಲಾಯಿತು.

BPS (ಬಲೆ ಪರ್ಕ ಸೇನೆ)ಯು ರಾಕೇಶ್ ಪೂಜಾರಿ ಅವರನ್ನು ಒಳಗೊಂಡು ಹೆಸರಿಗೆ ತಕ್ಕಂತೆ ತಮಾಷೆಗಾಗಿ ಶುರುವಾದ ವಾಟ್ಸಪ್ ಗ್ರೂಪ್ . ತಮಾಷೆಯಿಂದ ಸಮಾಜಮುಖಿ ಕೆಲಸವನ್ನು ಮಾಡಿ  ಈಗ ತನ್ನ ತಂಡದವರ ಕಷ್ಟಗಳಿಗೆ ಸ್ಪಂದಿಸುತ್ತಾ, ರಕ್ತ ಸಂಬಂಧಕ್ಕಿಂತ ಮಿಗಿಲಾದ ಬಂಧವನ್ನು ಬೆಸೆದಿದೆ. ಈ ಗ್ರೂಪಲ್ಲಿ  “ನಮ್ಮ ರಾಕಿಯು” ಒಬ್ಬ ಎಲ್ಲರಿಗೂ ಅಚ್ಚುಮೆಚ್ಚಿನ ಸದಸ್ಯ.ಸದಾ ನಗು ಮುಖದ, ಮಗು ಮನಸ್ಸಿನ ಗೆಳೆಯನ ಜನ್ಮದಿನವನ್ನು ಸ್ನೇಹ ದೀಪ  ಸಂಸ್ಥೆಯ ಮಕ್ಕಳೊಂದಿಗೆ ಆಚರಿಸಿದೆವು.ಅಲ್ಲಿನ ಮಕ್ಕಳಿಗೆ ಪುಸ್ತಕ ಹಾಗೂ ಸಂಸ್ಥೆ ಗೆ ಬೇಕಾದ ಅಗತ್ಯ ವಸ್ತು ಹಾಗೂ ಊಟದ ಖರ್ಚುಗೆ ಬೇಕಾದ ಆರ್ಥಿಕ ಸಹಾಯವನ್ನು  ಮಾಡಿದೆವು. ರಾಕಿ ನಮ್ಮೊಳಗೆ ಸದಾ ಜೀವಂತವಾಗಿದ್ದಾನೆ ಆತನ ಜನ್ಮದಿನವನ್ನು ಪ್ರತಿ ವರ್ಷವೂ ಆಚರಿಸಲಾಗುತ್ತದೆ ಎಂದು ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್ ಕಾಪಿನಡ್ಕ ತಿಳಿಸಿದರು.

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!