Thursday, March 26, 2026
Homeಉದ್ಯೋಗಹಾಸನ: ಉಚಿತ ಕುರಿ, ಆಡು, ಮೇಕೆ ಸಾಕಾಣಿಕೆ, ಹೈನುಗಾರಿಕೆ ಮತ್ತು ಕೃಷಿ ತರಬೇತಿ

ಹಾಸನ: ಉಚಿತ ಕುರಿ, ಆಡು, ಮೇಕೆ ಸಾಕಾಣಿಕೆ, ಹೈನುಗಾರಿಕೆ ಮತ್ತು ಕೃಷಿ ತರಬೇತಿ

ಹಾಸನ ನಗರದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉ.ದ್ಯೋ.ಗ ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗ ಯುವಕ-ಯುವತಿಯರಿಗಾಗಿ  ಡಿಸೆಂಬರ್‌ 8ರಿಂದ 13 ದಿನಗಳ ಕಾಲ ಉಚಿತವಾಗಿ ಕುರಿ ಸಾಕಾಣಿಕೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ ಎರೆಹುಳು ಗೊಬ್ಬರ ತಯಾರಿಕೆ, ಹಸಿಮೇವು, ಒಣ ಮೇವು, ರಸ ಮೇವು ತಯಾರಿಕೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. 

ಇದರ ಜೊತೆಗೆ ಮೇಕೆ ಸಾಕಾಣಿಕೆಯ ಬಗ್ಗೆಯೂ ಹೇಳಿಕೊಡಲಾಗುತ್ತದೆ. ಈ ತರಬೇತಿಯ ಸಂದರ್ಭದಲ್ಲಿ ತಳಿ, ಮೇವು, ಖಾಯಿಲೆ ಚಿಕಿತ್ಸಾ ಕ್ರಮಗಳು ಹಾಗೂ ಕೊಟ್ಟಿಗೆ ನಿರ್ಮಾಣದ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ತರಬೇತಿಯನ್ನು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಮಾಡಿಸಲಾಗುವುದು.  ಹಾಗೂ ಶಿಬಿರಾರ್ಥಿಗಳಿಗೆ ಉಚಿತವಾಗಿ ತರಬೇತಿ, ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ.


ತರಬೇತಿ ಸಮಯದಲ್ಲಿ ಕುರಿ ಸಾಕಾಣಿಕೆ ಮಹತ್ವ, ಹೈನುಗಾರಿಕೆ, ಎರೆಹುಳು ಗೊಬ್ಬರ ತಯಾರಿಕೆ,ಕುರಿ ಆಡು ಗಳ ಮಾರ್ಕೆಟಿಂಗ್, ಮೇವು ವ್ಯವಸ್ಥಾಪನೆ, ಶೆಡ್ ಕಟ್ಟುವ ಪದ್ಧತಿ, ಕಾಯಲೇ & ಚಿಕಿತ್ಸೆ ಪದ್ಧತಿ ಮುಂತಾದ ವಿಷಯ ಗಳನ್ನು ಪಶು ವೈದ್ಯರು ನೀಡುತ್ತಾರೆ. PMEGP, MUDRA, ಇನ್ನಿತರ ಸರ್ಕಾರಿ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಗವುದು. 

PROJECT REPORT ತಯಾರಿಕೆ ಬಗ್ಗೆ ಮಾಹಿತಿ ಹಾಗೂ ಮಾರ್ಗದರ್ಶನ ಸಿಗುತ್ತದೆ. ತರಬೇತಿ ಮುಗಿದ ನಂತರ ಬ್ಯಾಂಕ್ ಪ್ರಮಾಣಪತ್ರ ಹಾಗೂ ಕೇಂದ್ರ ಸರ್ಕಾರ ಅನುಮೋದಿತಾ MORD ಪ್ರಮಾಣಪತ್ರ ಸಿಗುತ್ತದೆ)
ಆಸಕ್ತ 18 ವರ್ಷ ಮೇಲ್ಪಟ್ಟ 50ವರ್ಷದೊಳಗಿನ ನಿರುದ್ಯೋಗ ಯುವಕ-ಯುವತಿಯರು  ತರಬೇತಿ ಸಂಸ್ಥೆ ಕಚೇರಿಯಲ್ಲಿ  ಅಥವಾ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.


ಹೆಚ್ಚಿನ ಮಾಹಿತಿಗಾಗಿ 08172-297013, 7353654000, 8147903497,  63602 14296, ಸಂಪರ್ಕಿಸಬಹುದಾಗಿದೆ. 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!