Tuesday, August 11, 2026
Homeಕ್ರೈಮ್ಕೊಪ್ಪ: ಪ್ರೀತಿ ವಿಚಾರಕ್ಕೆ ವಿರೋಧ: ಸ್ವಂತ ಭಾವನನ್ನೇ ಕೊಲೆಗೈದ ಕಿರಾತಕ!

ಕೊಪ್ಪ: ಪ್ರೀತಿ ವಿಚಾರಕ್ಕೆ ವಿರೋಧ: ಸ್ವಂತ ಭಾವನನ್ನೇ ಕೊಲೆಗೈದ ಕಿರಾತಕ!

Telegram Group
Join Now

ಕೊಪ್ಪ: ಪ್ರೀತಿ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿದ ಭಾವನಿಗೆ ಪಾಗಲ್‌ ಪ್ರೇಮಿ ಚಾಕು ಇರಿದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ತೆಂಗಿನಮನೆ ಸಮೀಪದ ಕಲ್ಕೆರೆಯಲ್ಲಿ ನಡೆದಿದೆ.

ರಾಜೇಶ್(27) ಚಾಕು ಇರಿತದಿಂದ ಕೊಲೆಯಾದ ವ್ಯಕ್ತಿ. ಶಿವಮೊಗ್ಗ ಜಿಲ್ಲೆಯ ಮಂಡಗದ್ದೆ ಗ್ರಾಮದ ವರುಣ್ ಎಂಬಾತನಿಂದ ಕೃತ್ಯ ನಡೆದಿದೆ.

ಬಾಳೆಹೊನ್ನೂರು ಸಮೀಪದ ಬಸಾಪುರ ನಿವಾಸಿಯಾದ ರಾಜೇಶ್ ಅವರ ಹೆಂಡತಿಯ ತಂಗಿಯನ್ನ ಪ್ರೀತಿಸುತ್ತಿದ್ದ. ಈ ವಿಚಾರವಾಗಿ ಇಂದು ತೆಂಗಿನಮನೆ ಗ್ರಾಮದ ಸುರೇಶ್ ಎನ್ನುವವರ ಮಾವನ ಮನೆಗೆ ಬಂದಿದ್ದ. ವರುಣ್ ಮನೆಗೆ ಬಂದಿರುವ ವಿಷಯವನ್ನು ಸುರೇಶ್ ಅಳಿಯ ರಾಜೇಶ್ ಗೆ ತಿಳಿಸಿದ್ದ. ಈ ವೇಳೆ ವರುಣ್ ನಾದಿನಿಯೊಂದಿಗೆ ಮದುವೆ ಮಾಡುವಂತೆ ಪಟ್ಟು ಹಿಡಿದಿದ್ದ. ಇದಕ್ಕೆ ಒಪ್ಪದ ರಾಜೇಶ್ ನನ್ನು ವರುಣ್ ಚಾಕು ಇರಿದು ಕೊಲೆ ಮಾಡಿದ್ದಾನೆ.

ಘಟನೆ ಸಂಬಂದ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಸ್ಕೇಪ್‌ ಆಗಿರುವ ಕೊಲೆಗಾರನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments