Friday, March 27, 2026
Homeಜಿಲ್ಲಾಸುದ್ದಿಶೃಂಗೇರಿ: ಕಾಡಾನೆ ದಾಳಿಯಿಂದ ಮೃತರಾದ ಕುಟುಂಬಕ್ಕೆ ನೆರವು: ಶ್ರೀ ಮಠದಿಂದ ಹಿರಿಯ ಆಡಳಿತ ವರ್ಗದವರು ಭೇಟಿ, ಸಾಂತ್ವನ

ಶೃಂಗೇರಿ: ಕಾಡಾನೆ ದಾಳಿಯಿಂದ ಮೃತರಾದ ಕುಟುಂಬಕ್ಕೆ ನೆರವು: ಶ್ರೀ ಮಠದಿಂದ ಹಿರಿಯ ಆಡಳಿತ ವರ್ಗದವರು ಭೇಟಿ, ಸಾಂತ್ವನ

ಶೃಂಗೇರಿ: ಅಕ್ಟೋಬರ್ ತಿಂಗಳಿನಲ್ಲಿ ಕಾಡಾನೆ ದಾಳಿಯಿಂದ ದುರಂತದಲ್ಲಿ ಸಾವನಪ್ಪಿದೆ ಎರಡು ಕುಟುಂಬಗಳಿಗೆ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರುಗಳ ನಿರ್ದೇಶನದ ಮೇರೆಗೆ ಮಠದ ಹಿರಿಯ ಆಡಳಿತ ವರ್ಗದವರು ಭೇಟಿ ನೀಡಿ ಸಾಂತ್ವನ ಹೇಳಿದರು.

ಶೃಂಗೇರಿ ತಾಲೂಕಿನ ಕೆರೆಕಟ್ಟೆಯ ಬಳಿ ಸಂಭವಿಸಿದ ಕಾಡಾನೆ ದಾಳಿಯಿಂದ ಸ್ಥಳೀಯ ರೈತರಾದ ಉಮೇಶ್ ಗೌಡ ಮತ್ತು ಹರೀಶ್ ಶೆಟ್ಟಿ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲಲು ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರುಗಳ ನಿರ್ದೇಶನದಂತೆ ಶ್ರೀ ಮಠದ ಹಿರಿಯ ಆಡಳಿತ ವರ್ಗದವರು ಮೃತರ ಕುಟುಂಬಸ್ಥರ ಮನೆಗಳಿಗೆ ತೆರಳಿ ಸಾಂತ್ವನವನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಜಗದ್ಗುರುಗಳ ಆಶೀರ್ವಾದದ ರೂಪದಲ್ಲಿ ಮೃತರ ಕುಟುಂಬಗಳಿಗೆ ಫಲ ಮಂತ್ರಾಕ್ಷತೆ ಮತ್ತು ಶ್ರೀ ಶಾರದಾ ಪ್ರಸಾದವನ್ನು ನೀಡಲಾಯಿತು. ಇದರ ಜೊತೆಗೆ ಮಠದವತಿಯಿಂದ ಎರಡು ಕುಟುಂಬಗಳಿಗೆ ತಲಾ ಎರಡೂವರೆ ಲಕ್ಷ ಒಟ್ಟು 5 ಲಕ್ಷ ರೂಪಾಯಿ ಸಹಾಯಧನವನ್ನು ಮುಖಾಂತರ ಹಸ್ತಾಂತರಿಸಲಾಯಿತು

ಆಪತ್ತಿನಲ್ಲಿರುವ ನೆರವಿಗೆ ಧಾವಿಸುವ ಮೂಲಕ ಶೃಂಗೇರಿ ಶ್ರೀ ಶಾರದಾ ಪೀಠವು ತನ್ನ ಮಾನವೀಯ ಮತ್ತು ಧಾರ್ಮಿಕ ಬದ್ಧತೆಯನ್ನು ಮತ್ತೊಮ್ಮೆ ಪ್ರದರ್ಶಿಸಿದೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!