Tuesday, February 10, 2026
Homeಜಿಲ್ಲಾಸುದ್ದಿಮೂಡಿಗೆರೆ: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನ: ಏಕತಾ ನಡಿಗೆ ಆಯೋಜನೆ

ಮೂಡಿಗೆರೆ: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನ: ಏಕತಾ ನಡಿಗೆ ಆಯೋಜನೆ

ಮೂಡಿಗೆರೆ: ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲಾ ಆಡಳಿತ ಹಾಗೂ ತಾಲ್ಲೂಕು ಆಡಳಿತ ಸಂಯುಕ್ತ ಆಶ್ರಯದಲ್ಲಿ ಏಕತಾ ನಡಿಗೆ ಕಾರ್ಯಕ್ರಮವು ಪಟ್ಟಣದಲ್ಲಿ ಯಶಸ್ವಿಯಾಗಿ ಸುಖಾಂತ್ಯ ಗೊಂಡಿತು.

ಈ ಏಕತಾ ನಡಿಗೆಯನ್ನು ಪಟ್ಟಣದ ತಾಲೂಕು ಆಸ್ಪತ್ರೆ ಆವರಣದಿಂದ ಅಮರ್ ಜವಾನ್ ವೃತ್ತದವರೆಗೂ ಆಯೋಜಿಸಲಾಗಿದ್ದು. ಪಟೇಲರ ಅನುಯಾಯಿಗಳು, ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಸರ್ಕಾರಿ ನೌಕರರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಅಮರ್ ಜವಾನ್ ವೃತ್ತದಲ್ಲಿ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಉಡುಪಿ – ಚಿಕ್ಕಮಗಳೂರು ಲೋಕಸಭಾ ಸದಸ್ಯರಾದ ಶ್ರೀಯುತ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಸರ್ದಾರ್ ವಲ್ಲಭ ಭಾಯಿ ಪಟೇಲ್ ದೇಶದ ಉಪ ಪ್ರಧಾನಿಯಾಗಿ ಮಹತ್ವದ ಕಾರ್ಯ ಮಾಡಿದ್ದಾರೆ.ಸ್ವಾಂತತ್ರ್ಯ ಪೂರ್ವದಲ್ಲಿ ಹಾಗೂ ಸ್ವಾಂತತ್ರ್ಯ ನಂತರ ದೇಶ ವನ್ನು ಅರ್ಥ ಮಾಡಿಕೊಂಡ ಮಹಾನ್ ಪುರುಷ ಇವರಾಗಿದ್ದಾರೆ. ದೇಶ ಬ್ರಿಟಿಷರ ಆಳ್ವಿಕೆಯಲ್ಲಿ ಕೈ ವಶ ಆಗಿದ್ದಾಗ ಇವರ ಅಪ್ರತಿಮ ಹೋರಾಟ ನಾವೆಂದು ಮರೆಯಲಾಗದು ಹಾಗೆ ಶಂಕನಾದ ಮೂಲಕ ಸ್ವಾಂತತ್ರ್ಯ ಪಡೆಯುವಲ್ಲಿ ಇವರ ಕೊಡುಗೆ ಆಪಾರ ಎಂದರು

ಏಕತಾ ನಡಿಗೆಗೆ ಹಸಿರು ನಿಶಾನೆ ತೋರಿ ಚಾಲನೆ ನೀಡಿ ಮಾತನಾಡಿದ ಮಾನ್ಯ ಉಪಾಸಭಾಪತಿಗಳಾದ ಶ್ರೀಯುತ ಎಂ ಕೆ ಪ್ರಾಣೇಶ್ ಮಾತನಾಡಿ, ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ 150ನೇ ಜನ್ಮದಿನಾಚರಣೆ ಅಂಗವಾಗಿ ಅವರ ಕೊಡುಗೆಗಳನ್ನು ಸ್ಮರಿಸಿ, ಗೌರವಿಸಲು ಹೆಮ್ಮೆಯಾಗುತ್ತದೆ., ದೇಶದ ಯುವ ಸಮೂಹ ಇವರ ಸಾಧನೆ ಮೈ ರೂಡಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು

‘ಪ್ರಪಂಚದ ಅತ್ಯಂತ ದೃಢವಾದ ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣದ ಹಿಂದಿನ ದೂರದೃಷ್ಟಿಯುಳ್ಳ ಚಿಂತಕ ಸರ್ದಾರ್‌ ಪಟೇಲ್‌ ಅವರ ಕೊಡುಗೆ ಮತ್ತು ಲಕ್ಷದ್ವೀಪದಿಂದ ಕಾಶ್ಮೀರದವರೆಗೆ ಭಾರತದ ಏಕೀಕರಣದಲ್ಲಿ ಅವರು ವಹಿಸಿದ ಪಾತ್ರ ಅಮರವಾಗಿದೆ ಎಂದರು

ಭಾರತದ ಮೊದಲ ಗೃಹ ಸಚಿವ ಹಾಗೂ ಉಪಪ್ರಧಾನಿಯಾಗಿ 550ಕ್ಕೂ ಹೆಚ್ಚು ಸಂಸ್ಥಾನಗಳನ್ನು ಭಾರತದ ಒಕ್ಕೂಟದೊಂದಿಗೆ ವಿಲೀನಗೊಳಿಸಿದ ಕೀರ್ತಿ ಪಟೇಲ್‌ ಅವರಿಗೆ ಸಲ್ಲುತ್ತದೆ. ಎಂದರು

ಈ ಕಾರ್ಯಕ್ರಮದಲ್ಲಿ ಭಾರತೀಯ ಕಾಫಿ ಮಂಡಳಿಯ ಅಧ್ಯಕ್ಷರು ಶ್ರೀಯುತ ದಿನೇಶ್ ದೇವೃಂದ, ದಿಶಾ ಕಮಿಟಿ ಅಧ್ಯಕ್ಷರಾದ ಶ್ರೀಯುತ ಕಲ್ಮುರುಡಪ್ಪ, ತಹಸೀಲ್ದಾರ್ ಶ್ರೀಮತಿ ಅಶ್ವಿನಿ , BEO ಮೀನಾಕ್ಷಿ, ದಿಶಾ ಕಮಿಟಿ ಸದಸ್ಯರಾದ ಶ್ರೀಯುತ ಮನೋಜ್ ಹಳೇಕೋಟೆ, ಬಿಜೆಪಿ ಮುಖಂಡರಾದ ದೀಪಕ್ ದೊಡ್ಡಯ್ಯ, ಮಂಡಲ ಅಧ್ಯಕ್ಷ ಗಜೇಂದ್ರ ಟಿ ಎಂ, ಪ್ರಶಾಂತ್ ಬಿಳಗುಳ,ಸುನಿಲ್ ಮಣ್ಣಿಕೆರೆ, ಸಂದೀಪ್ ಕೆಲ್ಲೂರು, ರಂಗನಾಥ್ ಮೂಡಿಗೆರೆ, ಸಚಿನ್ ಬಾನಳ್ಳಿ, ಪರೀಕ್ಷಿತ್ ಜಾವಳಿ, ಆದರ್ಶ್ ಕನ್ನೇಹಳ್ಳಿ,ಸಾಗರ್, ಸೇರಿದಂತೆ ಶಾಲಾ ವಿದ್ಯಾರ್ಥಿಗಳು, ತಾಲೂಕು ಆಡಳಿತ ಸಿಬ್ಬಂದಿಗಳು ಮತ್ತು ಪ್ರಮುಖರುಗಳು ನಡಿಗೆಯಲ್ಲಿ ಭಾಗವಹಿಸಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!