Tuesday, February 10, 2026
Homeಕ್ರೈಮ್ಶಿವಮೊಗ್ಗ: ತುಂಗಾ ನದಿಯಲ್ಲಿ ಸ್ಫೋಟ ಕೇಸ್: ಇಬ್ಬರು ಉಗ್ರರಿಗೆ 6 ವರ್ಷ ಜೈಲು

ಶಿವಮೊಗ್ಗ: ತುಂಗಾ ನದಿಯಲ್ಲಿ ಸ್ಫೋಟ ಕೇಸ್: ಇಬ್ಬರು ಉಗ್ರರಿಗೆ 6 ವರ್ಷ ಜೈಲು

ಶಿವಮೊಗ್ಗ: ತುಂಗಾ ನದಿ ದಂಡೆ ಮೇಲೆ ಪ್ರಾಯೋಗಿಕ ಸ್ಫೋಟ ಮತ್ತು ಹಿಂದೂ ಯುವಕನಿಗೆ ಚಾಕು ಇರಿದ ಪ್ರಕರಣ ಸಂಬಂಧ ಐಸಿಸ್‌ ಉಗ್ರ ಸಂಘಟನೆಯ ಇಬ್ಬರು ಸದಸ್ಯರಿಗೆ ಎನ್‌ಐಎ ಕೋರ್ಟ್‌ 6 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಶಿವಮೊಗ್ಗ ಮೂಲದ ಜಬೀವುಲ್ಲಾ ಹಾಗೂ ನದೀಂ ಫೈಜಲ್‌ ಶಿಕ್ಷೆಗೊಳಗಾದವರು. ಆರೋಪಿಗಳಿಗೆ ತಲಾ 59,000 ರೂ. ದಂಡ ಕೂಡ ವಿಧಿಸಲಾಗಿದೆ.

4 ವರ್ಷಗಳ ಹಿಂದೆ ಆರೋಪಿಗಳು ಪ್ರಾಯೋಗಿಕ ಸ್ಫೋಟ ನಡೆಸಿದ್ದರು. ಸ್ವಾತಂತ್ರ್ಯ ದಿನಾಚರಣೆ ದಿನ ಹಿಂದೂ ಯುವಕನಿಗೆ ಚಾಕುವಿನಿಂದ ಇರಿದಿದ್ದರು.

2022ರ ಆ.15 ರಂದು ರಾಜಸ್ಥಾನ ಮೂಲದ ಪ್ರೇಮ್‌ ಸಿಂಗ್‌ ಎಂಬಾತನಿಗೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ್ದರು. ಪೊಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದರು. ಈ ಹಿನ್ನೆಲೆ ಆರೋಪಿಗಳಿಗೆ ಎನ್‌ಐಎ ವಿಶೇಷ ನ್ಯಾಯಾಲಯ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!