Wednesday, August 12, 2026
Homeಜಿಲ್ಲಾಸುದ್ದಿಕೊಪ್ಪ: ಕಾಡುಕೋಣಕ್ಕೆ ವಿದ್ಯುತ್ ತಂತಿ ಸ್ಪರ್ಶ, ಸ್ಥಳದಲ್ಲೇ ಸಾವು

ಕೊಪ್ಪ: ಕಾಡುಕೋಣಕ್ಕೆ ವಿದ್ಯುತ್ ತಂತಿ ಸ್ಪರ್ಶ, ಸ್ಥಳದಲ್ಲೇ ಸಾವು

Telegram Group
Join Now

ಕೊಪ್ಪ: ಕಾಡುಕೋಣಕ್ಕೆ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಅತ್ತಿಕುಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ನೇರಳಕಟ್ಟೆ ಬಳಿ ನಡೆದಿದೆ.

ಬಸರೀಕಟ್ಟೆಯಿಂದ ನೇರಳಕಟ್ಟೆ ಹೋಗುವ ರಸ್ತೆಯ ಬದಿ ಧರೆಯ ಮೇಲೆ ವಿದ್ಯುತ್ ತಂತಿ ಇದ್ದು ಅಲ್ಲಿ ಕಾಡುಕೋಣಕ್ಕೆ ವಿದ್ಯುತ್ ಸ್ಪರ್ಶವಾಗಿ ರಸ್ತೆಗೆ ಬಿದ್ದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಈ ರಸ್ತೆಯಲ್ಲಿ ಈ ಹಿಂದೆಯೂ ವಿದ್ಯುತ್ ಸ್ಪರ್ಶಿಸಿ ಎರಡು ಕಾಡುಕೋಣ ಮೃತಪಟ್ಟ ಘಟನೆ ನಡೆದಿತ್ತು ಎಂಬ ಮಾಹಿತಿ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments