Tuesday, February 10, 2026
Homeಜಿಲ್ಲಾಸುದ್ದಿಮೂಡಿಗೆರೆ: ವಾರದ ಸಂತೆ ಸ್ಥಳಾಂತರಿಸುವಂತೆ ABVP ಆಗ್ರಹ

ಮೂಡಿಗೆರೆ: ವಾರದ ಸಂತೆ ಸ್ಥಳಾಂತರಿಸುವಂತೆ ABVP ಆಗ್ರಹ

ಮೂಡಿಗೆರೆ: ವಾರದ ಸಂತೆ ಜಾಗವನ್ನು ಬೇರೆಡೆಗೆ ಸ್ಥಳಾಂತರಗೊಳಿಸಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಡಿಗೆರೆ ಘಟಕದ ಕಾರ್ಯಕರ್ತರು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ABVP ತಾಲೂಕು ಅಧ್ಯಕ್ಷ ಯಶವಂತ್ ನಗರದ ಡಿಎಸ್ ಬಿಜಿ ಕಾಲೇಜಿನ ಮುಂಭಾಗದಲ್ಲಿ ನಡೆಯುವ ವಾರದ ಸಂತೆಯನ್ನು ಬೇರೆಡೆಗೆ ಸ್ಥಳಾಂತರಿಸಿ ಅಥವಾ ಶುಚಿತ್ವವನ್ನು ಕಾಪಾಡಲು ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದರು.

ವಾರದ ಸಂತೆಯಾದ ಶುಕ್ರವಾರದಂದು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ತೊಂದರೆಯಾಗುತ್ತಿದೆ, ಸಂತೆ ಮರುದಿನ ಇಲ್ಲಿನ ತ್ಯಾಜ್ಯ ವಿಲೇವಾರಿ ಮಾಡಲು ತಾರತಮ್ಯ ತೋರುತ್ತಿದ್ದು ದುರ್ವಾಸನೆಯಿಂದ ಮೂಗು ಮುಚ್ಚಿ ಕಾಲೇಜು ಪ್ರವೇಶಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾಲೇಜು ಪರಿಸರ ಶೈಕ್ಷಣಿಕ ವಾತಾವರಣ ಹಾಳಾಗುತ್ತಿದೆ ವಿದ್ಯಾರ್ಥಿಗಳೇ ಭವಿಷ್ಯದ ನಾಯಕರು ಎಂಬುವ ಸರ್ಕಾರಗಳು ಶೈಕ್ಷಣಿಕ ಸಮಸ್ಯೆಗಳಿಗೆ ತಳ್ಳುತ್ತಿರುವುದು ಸರಿಯಲ್ಲ ಎಂದರು.

ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಪ್ರತಿಭಟನೆ ಮುಂದಾಗುವ ಎಚ್ಚರಿಕೆ ನೀಡಿದರು

ಈ ಸಂದರ್ಭದಲ್ಲಿ DSBG ಕಾಲೇಜು ಘಟಕದ ಅಧ್ಯಕ್ಷ ಅಂಕುಶ ಕೆ ಸಿ, ಉಪಾಧ್ಯಕ್ಷ ಸಾತ್ವಿಕ್ ವಿ. ಎಸ್, ನಗರ ಕಾರ್ಯದರ್ಶಿ ಶ್ರವಣ್ ಹಾಲೂರು, ಸಾಮಾಜಿಕ ಜಾಲತಾಣ ಪ್ರಮುಖ್ ಹರ್ಷಿತ್ ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!