Tuesday, February 10, 2026
Homeಜಿಲ್ಲಾಸುದ್ದಿಮೂಡಿಗೆರೆ :ಶ್ರಮದ ಬದುಕಿಗೆ ತಾಲೂಕಿನ ಪ್ರಥಮ ಆಟೋ ಚಾಲಕಿ ಭಾರತಿ ದಿನಕರ್ ಮಾದರಿ: ಎಂ. ಕೆ....

ಮೂಡಿಗೆರೆ :ಶ್ರಮದ ಬದುಕಿಗೆ ತಾಲೂಕಿನ ಪ್ರಥಮ ಆಟೋ ಚಾಲಕಿ ಭಾರತಿ ದಿನಕರ್ ಮಾದರಿ: ಎಂ. ಕೆ. ಪ್ರಾಣೇಶ್

ಮೂಡಿಗೆರೆ : ಶ್ರಮದ ಬದುಕಿಗೆ ತಾಲೂಕಿನ ಪ್ರಥಮ ಆಟೋ ಚಾಲಕಿ ಭಾರತಿ ದಿನಕರ್ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಅವರು ತಿಳಿಸಿದ್ದಾರೆ.

ರಾಜ್ಯೋತ್ಸವ ಆಚರಣ ಸಮಿತಿ ಹಾಗೂ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ 70 ನೇ ಕನ್ನಡ ರಾಜ್ಯೋತ್ಸವವನ್ನು ಪಟ್ಟಣದ ಅಡ್ಯಾಂತಯ ರಂಗಮಂದಿರದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.

ಪ್ರಾಸ್ತವಿಕ ನುಡಿಗಳನ್ನು ಆಡಿದ ಆಟೋ ಚಾಲಕ ಹಾಗೂ ಮಾಲೀಕರ ಸಂಘದ ಗೌರವ ಅಧ್ಯಕ್ಷ ಮತ್ತು ಪತ್ರಕರ್ತರಾದ ಅಮರನಾಥ್ ಕುವೆಂಪು ಬರೆದ ಸಾಲುಗಳು ಬಾರಿಸು ಕನ್ನಡ ದಿಂಡಿಮವ ಓ ಕರ್ನಾಟಕ ಹೃದಯ ಶಿವ, ಸತ್ತಂತೆ ಇರುವರನ್ನು ಬಡಿದೇಚ್ಚರಿಸು ಕಚ್ಚಡುವರನ್ನು ಕುಡಿಸಿ ಬೆಳೆಸು ಹೊಟ್ಟೆ ಕಿಚ್ಚ್ಗೆ ಕಣ್ಣೀರು ಸುರಿಸು ಒಟ್ಟಿಗೆ ಬಾಳುವರ ನೆರದಲಿ ಹರಸು ಸಾಲುಗಳು ಎಷ್ಟರ ಮಟ್ಟಿಗೆ ಸೂಕ್ತ ವಾಗಿತ್ತೋ ಗೊತ್ತಿಲ್ಲ ಆದರೆ ಈ ದಿನ ತುಂಬಾ ಅವಶ್ಯಕತೆ ಇದೆ ಎಂದರು.


ಕನ್ನಡ ಸಂಸ್ಕೃತಿ ಅಕ್ರಮಣಕ್ಕೆ ತುತ್ತಾಗುತ್ತಿದ್ದೂ ಭಾಷೆ ಮರೆತರೆ ಸಂಸ್ಕೃತಿ ಮರೆತಂತೆ ಎಂದರು
ಮಲೆನಾಡಿಗೆ ಕಂಟಕ ವಾಗುತ್ತಿರುವ ವಲಸಿಗರ ವಿರುದ್ದ ಗುಡುಗಿದರು. ಅಸ್ಸಾಂ ರಾಜ್ಯದವರೆಂಬ ಸೋಗಿನಲ್ಲಿ ಬಾಂಗ್ಲಾ ದೇಶದವರ ಹಾವಳಿ ಹೆಚ್ಚುತ್ತಿದ್ದೂ ಎಸ್ಟೇಟ್ ಮಾಲೀಕರ ದಾಳಿಗಳು ಪ್ರತ್ಯಕ್ಷ ಸಾಕ್ಷಿಯಾಗಿದೆ.

ನಾವು ಜಾಗೃತರಗದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಪೆಟ್ಟು ಕಟ್ಟಿಟ್ಟ ಬುತ್ತಿ ಎಂದರುಹಿರಿಯರು ಬರೆದ ಲೇಖನಗಳನ್ನು ನಮ್ಮ ಬದುಕಿನಲ್ಲಿ ಅಳವಡುಸಿಕೊಳ್ಳಬೇಕು. ಮೊಬೈಲ್ ಯುಗದಿಂದ ತಲೆ ತಗ್ಗಿಸಿ ಬದುಕುತ್ತಿದ್ದೂ ತಲೆ ಎತ್ತುವ ಕೆಲಸ ಆಗಬೇಕು ಎಂದರು

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಪಸಭಾಪತಿಗಳಾದ ಶ್ರೀ ಎಂ. ಕೆ. ಪ್ರಾಣೇಶ್ ಬದುಕಿನಲ್ಲಿ ಯಶಸ್ಸು ಸಾದಿಸಲು ಶ್ರಮ ಅತ್ಯವಕಾಶ. ಈ ಶ್ರಮದಿಂದ ಅಚ್ಚುಕಟ್ಟಾದ ಬದುಕು ಕಟ್ಟಿಕೊಳ್ಳಲು ನಗರದ ಪ್ರಥಮ ಆಟೋ ಚಾಲಕಿ ಭಾರತಿ ದಿನಕರ್ ಅವರು ಎಲ್ಲರಿಗೂ ಮಾದರಿ ಎಂದರು.

ಆಟೋ ಸಂಘಗಳ ಏಳಿಗೆಗಾಗಿ ಕ್ಷೇಮ ನಿಧಿ ಸ್ಥಾಪಿಸಿದ್ದು ಇದರ ಸದುಪಯೋಗ ಎಲ್ಲರು ಪಡೆಯಬೇಕು,ನನ್ನ ಇವತ್ತಿನ ಈ ಸ್ಥಾನಕ್ಕೆ ಆಟೋ ಸಂಘದ ನಿಕಟ ಸಂಪರ್ಕ ಪ್ರಮುಖವಾಗಿದೆಬದುಕನ್ನು ಕಟ್ಟಿಕೊಳ್ಳಲು ಅನೇಕರು ಆಟೋ ಚಾಲನೆ ಕಾರಣವಾಗಿದೆ. ಇಂತಹ ಕಾರ್ಯಕ್ರಮ ಕ್ಕೆ ನನ್ನನ್ನು ಆಹ್ವಾನಿಸಿದ್ದು ನನ್ನ ಪುಣ್ಯ ಎಂದರು.ಉತ್ತಮ ನಡವಳಿಕೆಯೊಂದಿಗೆ ಎಲ್ಲರ ವಿಶ್ವಾಸ ಪಡೆದಿದ್ದು ಜನಸ್ಪಂದನೆ ಮುಂದುವರೆಸಿಕೊಂಡು ಹೋಗುವಂತೆ ತಿಳಿಸಿದರು.

ನಾನು ಎಂಬುದು ಅಹಂಕಾರ ನಾವು ಸಹಕಾರ ಆಗಿದೆ ಒಟ್ಟಾಗಿದ್ದು ನಿರಂತರವಾಗಿ ಮುಂದುವರೆಸಿಕೊಂಡು ಹೋಗುವಂತೆ ವಿನಂತಿಸಿದರು.ನಾನು ಎಂಬುದು ಅಹಂಕಾರ ನಾವು ಸಹಕಾರ ಆಗಿದೆ ಒಟ್ಟಾಗಿದ್ದು ನಿರಂತರವಾಗಿ ಮುಂದುವರೆಸಿಕೊಂಡು ಹೋಗುವಂತೆ ವಿನಂತಿಸಿದರು

ರಾಜ್ಯೋತ್ಸವ ವನ್ನು ಎಲ್ಲರು ಸೇರಿ ಮನೆಯ ಹಬ್ಬದಂತೆ ಕನ್ನಡ ಹಬ್ಬವನ್ನು ಆಚರಿಸುವ ಆಟೊ ಚಾಲಕರ ಭಾಷಾ ಪ್ರೇಮ ಮರೆಯಲಾಗದು’ ಎಂದು ಹೇಳಿದರು ಕಷ್ಟವಿದ್ದರೂ ಸ್ವಾವಲಂಬಿ ಬದುಕಿಗೆ ಚಾಲಕರಾಗಿದ್ದಾರೆ. ನವೆಂಬರ್‌ ತಿಂಗಳಲ್ಲಿ ಸಡಗರದಿಂದ ಮಾತೃಭಾಷೆ, ನಾಡು–ನುಡಿಯನ್ನು ಸ್ಮರಿಸುವ ಇವರ ಸತ್ಕಾರ್ಯವನ್ನು ಬುದ್ಧಿಜೀವಿಗಳು ಅನುಸರಿಸಬೇಕು’ ಎಂದರು.

ಕೆಲವು ಪ್ರದೇಶದಲ್ಲಿ ಕನ್ನಡ ಭಾಷೆ ಹೆಚ್ಚು ಬಳಕೆಯಲ್ಲಿದೆ. ಸ್ವಂತ ಹಣದಲ್ಲಿ ಮನೆಯ ಹಬ್ಬದಂತೆ ಆಚರಿಸುವ ಚಾಲಕರ ಮಾತೃಭಾಷೆ ಪ್ರೇಮ ಮರೆಯಲಾಗದು’ ಎಂದು ಸ್ಮರಿಸಿದರು.ಇವರ ಹೃದಯ ಸಿರಿವಂತಿಕೆ ಮೆಚ್ಚಬೇಕಿದೆ. ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರಾರಾಗಿ ಭಾಗವಹಿಸಿ ಮಾತನಾಡಿದ ಸಾಹಿತಿ ಸಂಪತ್ ಬೆಟ್ಟಗೆರೆ . ಆಟೋ ಚಾಲಕರು ಕನ್ನಡ ಭಾಷಾಭಿಮಾನ ಕಾಪಾಡಿ. ಕನ್ನಡ ಭಾಷೆ ಉಳಿಸಲು ಚಾಲಕ ರ ಪಾತ್ರ ದೊಡ್ಡದು ಎಂದು ಹೇಳಿದರು.

ಕನ್ನಡ ಅತ್ಯಂತ ಪ್ರಾಚೀನ ಭಾಷೆಯಾಗಿದ್ದು, ಕನ್ನಡ ಭಾಷೆ ಉಳಿಸಲು ಪ್ರತಿಯೊಬ್ಬರು ಕಂಕಣ ಬದ್ಧರಾಗಬೇಕೆಂದು ತಿಳಿಸಿದರು.

ಆಟೋ ಚಾಲಕರಿಗೆ ಕನ್ನಡ ಭಾಷೆ ಬಗ್ಗೆ ಅಪಾರ ಗೌರವವಿದ್ದು, ಕನ್ನಡ ಭಾಷೆ ಉಳಿಸುವ ನಿಟ್ಟಿನಲ್ಲಿಆಟೋ ಚಾಲಕರು ಆಟೋಗಳ ಮೇಲೆ ಕನ್ನಡ ಭಾಷಾಭಿಮಾನ ಮೂಡಿಸುವ ಬರಹಗಳನ್ನು ಹಾಕಿಕೊಂಡು ಕನ್ನಡದ ರಾಯಬಾರಿಗಳಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಆನೇಕ ವಿಚಾರಗಳ ಬಗ್ಗೆ ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಮೆರವಣಿಗೆ ವೇಳೆಯಲ್ಲಿ ಕನ್ನಡಾಂಭೆ ಧ್ವಜ ಹಾರಿಸಿ, ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಲಾಯಿತು. ಚಾಲಕರು ಪಟ್ಟಣದ ಪ್ರಮುಖ ಬೀದಿಯಲ್ಲಿ ಆಟೊಗಳಿಗೆ ಕನ್ನಡ ಬಾವುಟ, ಹಳದಿ, ಕೆಂಪು ಹೂವುಗಳಿಂದ ಅಲಂಕರಿಸಿ ಕನ್ನಡಾಂಬೆಗೆ ಜೈಕಾರ ಹಾಕುತ್ತ ಮೆರವಣಿಗೆಯಲ್ಲಿ ಸಾಗಿದರು. ಸಿಹಿ ತಿನಿಸು, ಅನ್ನ ದಾಸೋಹ ಏರ್ಪಡಿಸಲಾಗಿತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಹಾಗೇನೇ ಆರ್ಕೆಸ್ಟ್ರಾ ಕಾರ್ಯಕ್ರಮ ಜರುಗಿತು

ಈ ಸಂದರ್ಭದಲ್ಲಿ ಕಾರ್ಯಕ್ರಮ ಅಧ್ಯಕ್ಷತೆ ಪ್ರಕಾಶ್ ಘಟ್ಟದಹಳ್ಳಿ, ಸಮಾಜ ಸೇವಕ ರುದ್ರೇಶ್ ಕಹಳೆ, ಕರ್ತವ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್, ಆಟೋ ಸಂಘದ ಅಧ್ಯಕ್ಷ ನಾಗೇಶ್, ಭಾರತಿ ದಿನಕರ್, ಸೇರಿದಂತೆ ಪದಾಧಿಕಾರಿಗಳು ಆಟೋ ಚಾಲಕರು, ಮಾಲೀಕರು ವಿವಿಧ ರಾಜಕೀಯ ಮುಖಂಡರು ವಿವಿಧ ಆಟೋ ಚಾಲಕ ಸಂಘದ ಅಧ್ಯಕ್ಷರು ಸ್ಥಳೀಯರು ಭಾಗವಹಿಸಿದ್ದರು.

ವರದಿ :ಪುನೀತ್ ಕಡಿದಾಳು 

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!