ಕೊಲೆಯಾದ ಪ್ರಿಯತಮನನ್ನು ಮದುವೆಯಾದ ವಿಚಿತ್ರ ಘಟನೆಯೊಂದು ಮಹಾರಾಷ್ಟ್ರದ ನಂದೇಡ್ ಜಿಲ್ಲೆಯಲ್ಲಿ ನಡೆದಿದೆ. ಅಂಚಲ್ ಎಂಬ ಯುವತಿ ಅನ್ಯಕೋಮಿನ 20 ವರ್ಷದ ಸಕ್ಷಮ್ ಟೇಟ್ ಎಂಬ ಯುವಕನನ್ನು ಪ್ರೀತಿ ಮಾಡುತ್ತಿದ್ದಳು. ವಿಷಯ ತಿಳಿದ ಕುಟುಂಬಸ್ಥರು ಜಾತಿ ಭೇದದ ಕಾರಣಕ್ಕೆ ಹಲ್ಲೆ ನಡೆಸಿ, ಕಲ್ಲಿನಿಂದ ತಲೆಗೆ ಹೊಡೆದು, ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ವಿಷಯ ತಿಳಿದ ಯುವತಿ ಯುವಕನ ಮನೆಗೆ ತೆರಳಿ ಮೃತ ಯುವಕನ ಕೈ ಹಿಡಿದು ಕುಂಕುಮವನ್ನು ಹಣೆಗೆ ಹಚ್ಚಿಕೊಳ್ಳುವ ಮೂಲಕ ಮದುವೆಯಾಗಿದ್ದಾಳೆ. ಅಲ್ಲದೆ, ಮುಂದಿನ ಜೀವನವನ್ನು ಸಕ್ಷಮ್ ಟೇಟ್ ಮನೆಯಲ್ಲೇ ಕಳೆಯುವುದಾಗಿ ಶಪಥ ಮಾಡಿದ್ದಾಳೆ.
ಘಟನೆ ಸಂಬಂಧ ಯುವತಿಯ ತಮ್ಮ, ತಂದೆ, ತಾಯಿ ಸೇರಿದಂತೆ ಐವರು ಬಂಧಿಸಿ, ವಿಚಾರಣಗೆ ಒಳಪಡಿಸಲಾಗಿದೆ.
ಯುವತಿ ಆಂಚಲ್ ತಮ್ಮನ ಮೂಲಕ ಕೊಲೆಯಾದ ಯುವಕ ಸಕ್ಷಮ್ ಟೇಟ್ ಪರಿಚಯವಾಗಿತ್ತು. ಸಕ್ಷಮ್ ಆಗಾಗ ಆಂಚಲ್ ಅವರ ಮನೆಗೆ ಬರುತ್ತಿದ್ದ. ಸ್ನೇಹ ಪ್ರೀತಿಯಾಗಿ ತಿರುಗಿತ್ತು. ೩ ವರ್ಷದ ಬಳಿಕ ಮನೆಯವರಿಗೆ ಈ ವಿಚಾರ ತಿಳಿದಿದೆ. ಆಗ ಜಾತಿ ಭೇದದ ಕಾರಣಕ್ಕೆ ಮದುವೆ ಮಾಡಲು ಮನೆಯವರು ನಿರಾಕರಿಸಿದ್ದಾರೆ.
ಆಂಚಲ್ ಕುಟುಂಬ ಆಕೆಯ ಮೇಲೆ ಎಷ್ಟೆ ಒತ್ತಡ ಹಾಕಿದರೂ ಸಕ್ಷಮ್ ಜೊತೆಯಿರುವ ಸಂಬಂಧವನ್ನು ಕಡಿದುಕೊಳ್ಳಲು ಆಕೆ ಮುಂದಾಗಿಲ್ಲ. ಇದರಿಂದ ಕೋಪಗೊಂಡ ಆಂಚಲ್ ತಂದೆ ಮತ್ತು ತಮ್ಮ ಹಳೆಯ ಗಾಂಜ್ ಪ್ರದೇಶದಲ್ಲಿ ತಮ್ಮ ಸ್ನೇಹಿತರೊಂದಿಗೆ ಇದ್ದಾಗ ಸಕ್ಷಮ್‌ನನ್ನು ಹೊಡೆದು, ಗುಂಡು ಹೊಡೆದು ಕೊಂಡಿದ್ದಾರೆ.
ಪ್ರಿಯತಮನನ್ನು ಮನೆಯವರು ಕೊಂದಿರುವ ವಿಷಯ ತಿಳಿದು ಆತನ ಮನೆಗೆ ತೆರಳಿ ವಿವಾಹವಾಗಿದ್ದಾರೆ. ಈ ವೇಳೆ “ನಮ್ಮ ಪ್ರೀತಿ ಗೆದ್ದಿದೆ, ನನ್ನ ತಂದೆ ಮತ್ತು ತಮ್ಮ ಸೋತಿದ್ದಾರೆ. ಟೇಟ್ ಸತ್ತರೂ ಆತನ ಪ್ರೀತಿ ಇನ್ನೂ ಜೀವಂತವಾಗಿದೆ. ಹತ್ಯೆಗೆ ಸಂಬಂಧಿಸಿದ ಆರೋಪಿಗಳಿಗೆ ಶಿಕ್ಷೆಯನ್ನು ನೀಡಿ” ಎಂದು ಅಂಚಲ್ ಬೇಡಿಕೊಂಡಿದ್ದಾಳೆ.
