Monday, August 10, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ದತ್ತಜಯಂತಿ ಹಿನ್ನೆಲೆ ಸಿ.ಟಿ ರವಿ ಅವರಿಂದ ಭಿಕ್ಷಾಟನೆ: ಏನಿದರ ವಿಶೇಷ ಇಲ್ಲಿದೆ!

ಚಿಕ್ಕಮಗಳೂರು: ದತ್ತಜಯಂತಿ ಹಿನ್ನೆಲೆ ಸಿ.ಟಿ ರವಿ ಅವರಿಂದ ಭಿಕ್ಷಾಟನೆ: ಏನಿದರ ವಿಶೇಷ ಇಲ್ಲಿದೆ!

Telegram Group
Join Now

ಚಿಕ್ಕಮಗಳೂರು: ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಜಾಗದಲ್ಲಿ ಸಂಪೂರ್ಣ ಹಿಂದೂ ಪೀಠಕ್ಕಾಗಿ ಆಗ್ರಹಿಸಿ, ದತ್ತಜಯಂತಿ ಹಿನ್ನೆಲೆಯಲ್ಲಿ ಮಾಲಾಧಾರಿಗಳು ಭಿಕ್ಷಾಟನೆ ಮೂಲಕ ಪಡಿ ಸಂಗ್ರಹಿಸುತ್ತಾರೆ. ಅದರಂತೆ ಸಿಟಿ ರವಿ ಸೇರಿದಂತೆ ದತ್ತಮಾಲಾಧಾರಿಗಳಿಂದ ಭಿಕ್ಷಾಟನೆ ನೆರವೇರಿತು.

ಚಿಕ್ಕಮಗಳೂರು ನಗರದ ನಾರಾಯಣಪುರ ಮತ್ತು ರಾಘವೇಂದ್ರ ಮಠದ ರಸ್ತೆ ಸುತ್ತಮುತ್ತ ಮನೆಗಳಿಗೆ ಮಾಲಾಧಾರಿಗಳು ತೆರಳಿ ಭಿಕ್ಷಾಟನೆ ನಡೆಸಿದರು. ಸ್ಥಳೀಯರು ಭಕ್ತಿ ಪೂರ್ವಕವಾಗಿ ಅಕ್ಕಿ ಬೆಲ್ಲ ಮತ್ತು ಕಾಯಿಗಳನ್ನು ಪಡಿಯ ರೂಪದಲ್ಲಿ ನೀಡಿದರು. ಮಾಲಾಧಾರಿಗಳು ದತ್ತ ಭಜನೆಗಳನ್ನು ಹಾಡುತ್ತಾ ಭಕ್ತಿ ಪೂರ್ವಕವಾಗಿ ಪಡಿ ಸಂಗ್ರಹಿಸಿದರು.

ಹೀಗೆ ಸಂಗ್ರಹಿಸಲಾದ ಪಡಿಯನ್ನು ಮಾಲಾಧಾರಿಗಳು ಶುಕ್ರವಾರ ದತ್ತಾತ್ರೇಯರಿಗೆ ಇರುಮುಡಿ ರೂಪದಲ್ಲಿ ಅರ್ಪಿಸಲಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments