Tuesday, February 10, 2026
Homeಜಿಲ್ಲಾಸುದ್ದಿಮೂಡಿಗೆರೆ:ಸಂವಿಧಾನ ಶಿಲ್ಪಿ ಅಂಬೇಡ್ಕರ್ ವಿಶ್ವಕ್ಕೆ ಸದಾ ಚಿರಂಜೀವಿ: ಮಾಜಿ ಶಾಸಕ ಬಿ.ಬಿ.ನಿಂಗಯ್ಯ

ಮೂಡಿಗೆರೆ:ಸಂವಿಧಾನ ಶಿಲ್ಪಿ ಅಂಬೇಡ್ಕರ್ ವಿಶ್ವಕ್ಕೆ ಸದಾ ಚಿರಂಜೀವಿ: ಮಾಜಿ ಶಾಸಕ ಬಿ.ಬಿ.ನಿಂಗಯ್ಯ

ಮೂಡಿಗೆರೆ: ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ಧ್ವನಿ) ಹಾಗೂ ಭೀಮಾ ಕೊರೆಂಗಾವ್ ವತಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಮೇಣದ ಬತ್ತಿ ಹಿಡಿದು ಮೆರವಣಿಗೆ ಮಾಡುವುದರ ಮೂಲಕ ಲಯನ್ಸ್ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ದಾಂಜಲಿ ಸಲ್ಲಿಸಿ ಪರಿ ನಿರ್ವಾಣ ದಿನ ಆಚರಿಸಲಾಯಿತು

ಈ ಸಂದರ್ಭದಲ್ಲಿ ಕಾರ್ಯಕ್ರಮ ಉದ್ದೇಶಿಸಿ ಮಾಜಿ ಶಾಸಕ ಬಿ. ಬಿ. ನಿಂಗಯ್ಯ ಮಾತನಾಡಿ ಪ್ರಪಂಚದಲ್ಲಿ ಅಂಬೇಡ್ಕರ್ ಅವರನ್ನು ಪೂಜಿಸುತ್ತಿದ್ದೂ ಅಂಬೇಡ್ಕರ್ ಅವರಿಗೆ ಸರಿಸಾಟಿ ವ್ಯಕ್ತಿ ಯಾರು ಇಲ್ಲ ಎಂಬುದು ಹೆಮ್ಮೆಯ ಸಂಗತಿ ಎಂದರು.

ಸಮಾಜಕ್ಕೆ ಅಂಬೇಡ್ಕರ್ ಕೊಡುಗೆ ಅಪಾರವಾದದ್ದು ಅವರು ನಮ್ಮನಗಲಿದರು ಸಹ ಭಾರತ ರಾಷ್ಟ್ರಕ್ಕೆ ಚಿರಂಜೀವಿ ಆಗಿದ್ದು ಅವರು ಒಂದು ಜನಾಂಗಕ್ಕೆ ಸೀಮಿತವಲ್ಲ ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಗಬೇಕು ಎಂದರು

11 ಲಕ್ಷ ಸಂಘಟನೆ ಇರುವ ಸಮುದಾಯದಲ್ಲಿ ಸಂಘಟನೆ ವಿಂಗಟನೆಯಾಗುತ್ತಿದ್ದು ದೊಡ್ಡ ಶಕ್ತಿಯಾಗಲು ಸಾಧ್ಯವಾಗುತ್ತಿಲ್ಲ ವೈಯಕ್ತಿಕ ಪ್ರತಿಷ್ಠೆ ಬದಿಗಿಟ್ಟು ನಾವೆಲ್ಲರೂ ಮೊದಲು ಒಂದಾಗಬೇಕು ಎಂದರು

SDPI ರಾಜ್ಯ ಕಾರ್ಯದರ್ಶಿ ಚಂದ್ರು ಅಂಗಡಿ ಮಾತನಾಡಿ ಶೋಷಿತ ಸಮುದಾಯದ ಜನಾಂಗ ಸದಾ ಒಗ್ಗಟ್ಟಿನಿಂದ ಇರಲು ಅಂಬೇಡ್ಕರ್ ತಿಳಿಸಿದ್ದು. ಕತ್ತಲೆಯ ಬದುಕಿಗೆ ಬೆಳಕು ನೀಡಿದ ಮಹಾನ್ ತ್ಯಾಗಿ ರಾಷ್ಟ್ರದ ಯೋಗಿ ಅಂಬೇಡ್ಕರ್ ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿರುವುದು ನೋವಿನ ಸಂಗತಿ.

ಈ ದಿನ ರಾಷ್ಟ್ರ ಸದಾ ನೆನಪಿಡುವ ಎರಡು ಘಟನೆಗಳೆಂದರೆ ಬಾಬ್ರಿ ಮಸೀದಿ ದ್ವಂಸ ಹಾಗೂ ಅಂಬೇಡ್ಕರ್ ನಮ್ಮನ್ನ ಅಗಲಿದ ದಿನ ವಾಗಿದ್ದು ಗೌರವ ಸಮರ್ಪಣೆ ಮಾಡುತ್ತೇವೆ ಆದರೆ ಕೋಮುವಾದಿಗಳು ರಾಜಕೀಯ ದುರುದ್ದೇಷದಿಂದ ಅಂಬೇಡ್ಕರ್ ಸಂವಿಧಾನ ಒಪ್ಪದೇ ಬಾಬ್ರಿ ಮಸೀದಿ ಕೆಡವಿದ ಈ ದಿನವನ್ನು ಸಂವಿಧಾನ ವಿರೋಧವಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎಂದರು.

ಬಿಜೆಪಿ ಮುಖಂಡರಿಗೆ ಸಂಘ ಪರಿವಾರದ ವ್ಯಕ್ತಿ ಈ ದಿನ ಶುಭಾಶಯ ಕೊರಿದ್ದು ಶ್ರದ್ದಾಂಜಲಿ ದಿನವನ್ನು ಶುಭಾಶಯ ಹೇಳುವ ಮಾನಸಿಕತೆ ಎಷ್ಟರ ಮಟ್ಟಿಗೆ ಸರಿ ಎಂದರು

ಸಮುದಾಯದ ಒಗ್ಗಟ್ಟಿಗೆ ಪರಿ ನಿರ್ಮಾಣ ಆಚರಣೆ ಯ ಉದ್ದೇಶ ತಿಳಿದು ನಮ್ಮ ವಿರೋಧಿಗಳ ಸದೆ ಬಡಿಯಲು ಒಂದಾಗಿ ನಡೆಯುತ್ತಾ ಸಾಗೋಣ ಎಂದರು

ಈ ಕಾರ್ಯಕ್ರಮದಲ್ಲಿ DSS ರಾಜ್ಯ ಸಮಿತಿ ಸದಸ್ಯೆ ಆಶಾ ಸಂತೋಷ, ಹಿರಿಯರಾದ ನಿವೃತ್ತ ಶಿಕ್ಷಕ ಹಾಲಯ್ಯ, BSP ಮುಖಂಡರ ಪಿ.ಕೆ ಮಂಜನಾಥ್, ಮರಿಯಪ್ಪ, ಅಂಗಡಿ ದೇವರಾಜ್ ಹರೀಶ್ ನಲ್ಕೆ, ಸುಂದರೇಶ್ ಕನ್ನಪುರ, ಡಿಎಸ್ಎಸ್ ಜಿಲ್ಲಾಧ್ಯಕ್ಷರ ಹೊಯ್ಸಳಲು ಸುಂದರೇಶ್, ಡಿ ಎಸ್ ಎಸ್ ತಾಲೂಕು ಅಧ್ಯಕ್ಷ ಪೂರ್ಣೇಶ್ ಬೆಟ್ಟದಮನೆ, ಚಂದ್ರೇಶ್ ಕುನ್ನಳ್ಳಿ, ಭಾನುಪ್ರಕಾಶ್, ಹೇಸಗಲ್ ಕಿರಣ್, ಚಂದ್ರಶೇಖರ್, ಸತೀಶ್, ಹರೀಶ್ ಚೇಗೂ,ಸೇರಿದಂತೆ ಅನೇಕರು ಉಪಸ್ಥಿತರಿದ್ದರು

ವರದಿ :ಪುನೀತ್ ಕಡಿದಾಳು 

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!