Saturday, February 7, 2026
Homeಕ್ರೈಮ್ಚಿಕ್ಕಮಗಳೂರು: ಸಖರಾಯಪಟ್ಟಣದಲ್ಲಿ ಕೈ ಕಾರ್ಯಕರ್ತ ಮರ್ಡರ್​​ ಕೇಸ್: ಬಜರಂಗ ದಳ ಕಾರ್ಯಕರ್ತ ಅರೆಸ್ಟ್!

ಚಿಕ್ಕಮಗಳೂರು: ಸಖರಾಯಪಟ್ಟಣದಲ್ಲಿ ಕೈ ಕಾರ್ಯಕರ್ತ ಮರ್ಡರ್​​ ಕೇಸ್: ಬಜರಂಗ ದಳ ಕಾರ್ಯಕರ್ತ ಅರೆಸ್ಟ್!

ಚಿಕ್ಕಮಗಳೂರು: ಸಖರಾಯಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಗಣೇಶ್​ ಕೊಲೆ ಕೇಸ್​​ನಲ್ಲಿ ಬಜರಂಗ ದಳ ಕಾರ್ಯಕರ್ತ ಮಿಥುನ್​​ ಎಂಬಾತನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು. ಪ್ರಕರಣದಲ್ಲಿ ಮಿಥುನ್ ಪಾತ್ರ ಇರೋದು ದೃಢಪಟ್ಟ ಹಿನ್ನೆಲೆ ಆತನನ್ನು ಬಂಧಿಸಲಾಗಿದ್ದು, ಚಿಕ್ಕಮಗಳೂರು ನಗರದ ನ್ಯಾಯಾಧೀಶರ ನಿವಾಸದಲ್ಲಿ ಹಾಜರುಪಡಿಸಲಾಗಿದೆ. ಆರೋಪಿಯನ್ನು ನ್ಯಾಯಾಂಗ ವಶಕ್ಕೆ ನೀಡಿ ನ್ಯಾಯಾಧೀಶರು ಆದೇಶಿಸಿದ್ದಾರೆ.

ಗಣೇಶ್ ಗೌಡ(38) ಕೊಲೆಯಾದವರು. ಇವರು ಸಖರಾಯಪಟ್ಟಣ ಗ್ರಾಪಂ ಸದಸ್ಯರಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಸಂಜಯ್, ಭೂಷಣ್, ಮಿಥುನ್ ಎಂಬವರು ಸೇರಿದಂತೆ ಬಿಜೆಪಿ, ಬಜರಂಗದಳದ ಐವರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಗಣೇಶ್ ಹತ್ಯೆಯಲ್ಲಿ‌ ಎ6 ಆಗಿರುವ ಮಿಥುನ್‌ ಎ1 ಸಂಜಯ್ ಸ್ನೇಹಿತನಾಗಿದ್ದಾನೆ. ಈತ ಆರ್’ಎಸ್ಎಸ್ ಮತ್ತು ಬಜರಂಗದಳದಲ್ಲಿ‌ ಸಕ್ರಿಯ ಕಾರ್ಯಕರ್ತನಾಗಿದ್ದಾನೆಂದು ಹೇಳಲಾಗುತ್ತಿದೆ.

ಪ್ರಕರಣ ಸಂಬಂಧ ಎ1 ಸಂಜಯ್ ಮತ್ತು ಎ3 ನಾಗಭೂಷಣ್​​ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಎ2 ನಿತಿನ್, ಎ4 ದರ್ಶನ್ ಹಾಗೂ ಅಜಯ್​​​​ಗಾಗಿ ಹುಡುಕಾಟ ಮುಂದುವರಿದಿದೆ. ಗಣೇಶ್ ಹತ್ಯೆ ಬಳಿಕ ಈ ಮೂವರು ಆರೋಪಿಗಳು ‌ತಲೆಮರೆಸಿಕೊಂಡಿದ್ದಾರೆ.

ಪ್ರಕರಣ ಸಂಬಂಧ ಎ1 ಸಂಜಯ್ ಮತ್ತು ಎ3 ನಾಗಭೂಷಣ್​​ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಎ2 ನಿತಿನ್, ಎ4 ದರ್ಶನ್ ಹಾಗೂ ಅಜಯ್​​​​ಗಾಗಿ ಹುಡುಕಾಟ ಮುಂದುವರಿದಿದೆ. ಗಣೇಶ್ ಹತ್ಯೆ ಬಳಿಕ ಈ ಮೂವರು ಆರೋಪಿಗಳು ‌ತಲೆಮರೆಸಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!