Wednesday, August 12, 2026
Homeಜಿಲ್ಲಾಸುದ್ದಿಮೂಡಿಗೆರೆ: ಧರ್ಮಸ್ಥಳ ಸಂಘದ ವತಿಯಿಂದ ಪ್ರಗತಿ ಬಂದು ತರಬೇತಿ ಕಾರ್ಯಕ್ರಮ ಆಯೋಜನೆ

ಮೂಡಿಗೆರೆ: ಧರ್ಮಸ್ಥಳ ಸಂಘದ ವತಿಯಿಂದ ಪ್ರಗತಿ ಬಂದು ತರಬೇತಿ ಕಾರ್ಯಕ್ರಮ ಆಯೋಜನೆ

Telegram Group
Join Now

ಮೂಡಿಗೆರೆ: ಜಾವಳಿ ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಾವಳಿ ವಲಯದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರವನ್ನು ಸಭಾಂಗಣದಲ್ಲಿ ಆಯೋಜಿಸಲಾಯಿತು

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಧ್ಯಕ್ಷ ಎಂ.ಪಿ.ಪ್ರದೀಪ್ “ಹನಿ ಹನಿ ಸೇರಿದರೆ ಹಳ್ಳ ತೆನೆ ತೆನೆ ಕೂಡಿದರೆ ಬಳ್ಳ” ಎಂಬ ಆಡು ಮಾತಿಗೆ ಡಾ.ವೀರೇಂದ್ರ ಹೆಗ್ಗಡೆಯವರ ಕನಸಿನ ಕೂಸಾದ ಯೋಜನೆ ಇಂದು ಕರ್ನಾಟಕದ ಹಳ್ಳಿ ಹಳ್ಳಿಯಲ್ಲೂ ತಲೆಯೆತ್ತಿದೆ. ಗ್ರಾಮಾಭಿವ್ರದ್ದಿ ಯೋಜನೆಯು ಗ್ರಾಮೀಣ ಪರಿವರ್ತನೆಗೆ ಹೊಸ ಮುನ್ನುಡಿ ಬರೆದಿದೆ.

ಗಾಂದೀಜಿಯವರ ಗ್ರಾಮ ರಾಜ್ಯದ ಪರಿಕಲ್ಪನೆ ಈ ಯೋಜನೆಯಿಂದ ಸಾಕಾರಗೊಳ್ಳುತ್ತಿದೆ. ಕೃಷಿ ಮೇಳ,ತರಬೇತಿ,ಮಾನವ ಸಂಪನ್ಮೂಲ ಬಳಕೆ ಮುಂತಾದ ವಿಷಯಗಳು ಯೋಜನೆಯ ಚಿಂತನೆಯ ವಿಷಯ. ಮಾನವ ಸಂಪನ್ಮೂಲ ಅಭಿವ್ರದ್ದಿಗಾಗಿ ಗ್ರಾಮಾಭಿವ್ರದ್ದಿ ಯೋಜನೆ ದೊಡ್ಡ ಕಾರ್ಯಕರ್ತರ ಪಡೆಯನ್ನೇ ಹೊಂದಿದೆ ಎಂದರು. ಈ ತರಬೇತಿ ಯ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು

ಈ ಕಾರ್ಯಕ್ರಮದಲ್ಲಿ ಮೂಡಿಗೆರೆ ತಾಲೂಕು ಯೋಜನಾಧಿಕಾರಿ ಸುಧೀರ್ ಜೈನ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಪರೀಕ್ಷಿತ್ ಜಾವಳಿ, ಜಾವಳಿ ಒಕ್ಕೂಟದ ಅಧ್ಯಕ್ಷ ಜಗನ್ನಾಥ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕ ಚಂದ್ರಶೇಖರ್, ಸತೀಶ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಾವಳಿ ವಲಯ ಮೇಲ್ವಿಚಾರಕ ಸಂದೇಶ್, ಸೇವಾ ಪ್ರತಿನಿಧಿಗಳಾದ ಸಂದೀಪ್, ಸೋಮಶೇಖರ್, ಕಾವ್ಯ, ಸುಮತಿ,ಗಬ್ಗಲ್ ಒಕ್ಕೂಟದ ಅಧ್ಯಕ್ಷ ಸಂತೋಷ್ ಪೂಜಾರಿ, ಕ್ರಷ್ಣ ಟೈಲರ್ ಸೇರಿದಂತೆ ಅನೇಕರು ಇದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments