Friday, March 27, 2026
Homeಆರೋಗ್ಯಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ? ಇಲ್ಲಿವೆ ಅಗತ್ಯ ಪೋಷಕಾಂಶಗಳು ಮತ್ತು ಟಿಪ್ಸ್‌ಗಳು

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ? ಇಲ್ಲಿವೆ ಅಗತ್ಯ ಪೋಷಕಾಂಶಗಳು ಮತ್ತು ಟಿಪ್ಸ್‌ಗಳು

ಚಳಿಗಾಲ ತಂಪು ಗಾಳಿ ಮತ್ತು ಕಡಿಮೆ ಸೂರ್ಯನ ಬೆಳಕನ್ನು ಹೊತ್ತು ತರುತ್ತದೆ. ಈ ಅವಧಿಯಲ್ಲಿ ನಮ್ಮ ದೇಹವು ಶೀತ, ಕೆಮ್ಮು ಮತ್ತು ಫ್ಲೂ ಅಂತಹ ಸೋಂಕುಗಳ ವಿರುದ್ಧ ಹೋರಾಡಲು ಹೆಚ್ಚು ಶ್ರಮಿಸಬೇಕಾಗುತ್ತದೆ. ಸೂರ್ಯನ ಬೆಳಕಿನ ಕೊರತೆಯಿಂದ ವಿಟಮಿನ್ ಡಿ ಮಟ್ಟ ಕಡಿಮೆಯಾಗುತ್ತದೆ ಮತ್ತು ಶುಷ್ಕ ಗಾಳಿಯಿಂದಾಗಿ ವೈರಸ್‌ಗಳು ಸುಲಭವಾಗಿ ದೇಹವನ್ನು ಸೇರುತ್ತೆ. ಆದ್ದರಿಂದ, ಈ ಸಮಯದಲ್ಲಿ ನಮ್ಮ ಆಹಾರಕ್ರಮದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಅತ್ಯಗತ್ಯ.

ರೋಗನಿರೋಧಕ ಶಕ್ತಿ ಹೆಚ್ಚಿಸುವ ಪ್ರಮುಖ ಪೋಷಕಾಂಶಗಳು:

1. ವಿಟಮಿನ್ ಸಿ (Vitamin C): ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಆಂಟಿ-ಆಕ್ಸಿಡೆಂಟ್ ಆಗಿ ಕಾರ್ಯನಿರ್ವಹಿಸಿ ಜೀವಕೋಶಗಳ ಹಾನಿಯನ್ನು ತಡೆಯುತ್ತದೆ. ಕಿತ್ತಳೆ, ನಿಂಬೆ, ಸೀಬೆಕಾಯಿ, ನೆಲ್ಲಿಕಾಯಿ (ಅಮ್ಲಾ), ಬ್ರೊಕೋಲಿ, ಎಳ್ಳಿಕಾಯಿ, ಚಕ್ಕೋತ್ತ ಅಥವಾ ದ್ರಾಕ್ಷಿಹಣ್ಣು, ಸ್ಟ್ರಾಬೆರಿ, ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿ ದೊರೆಯುತ್ತದೆ.

2. ವಿಟಮಿನ್ ಡಿ (Vitamin D): ಸೂರ್ಯನ ಬೆಳಕಿನ ಕೊರತೆಯಿಂದ ಚಳಿಗಾಲದಲ್ಲಿ ಇದರ ಮಟ್ಟ ಕುಸಿಯುತ್ತದೆ. ಇದು ಸೋಂಕುಗಳ ವಿರುದ್ಧ ಹೋರಾಡುವ ಆಂಟಿ-ಮೈಕ್ರೋಬಿಯಲ್ ಪೆಪ್ಟೈಡ್‌ಗಳ ಉತ್ಪಾದನೆಗೆ ಸಹಕಾರಿ. ಸೂರ್ಯನ ಬೆಳಕು, ಮೊಟ್ಟೆ, ಮೀನು ಮತ್ತು ಫೋರ್ಟಿಫೈಡ್ ಹಾಲು ಸೇವಿಸಿ. ಅಗತ್ಯವಿದ್ದಲ್ಲಿ ವೈದ್ಯರ ಸಲಹೆಯಂತೆ ಸಪ್ಲಿಮೆಂಟ್‌ಗಳನ್ನು ತೆಗೆದುಕೊಳ್ಳಬಹುದು.

3. ಸತು (Zinc): ರೋಗನಿರೋಧಕ ಜೀವಕೋಶಗಳ ಬೆಳವಣಿಗೆ ಮತ್ತು ಕಾರ್ಯನಿರ್ವಹಣೆಗೆ ಸತು ಅತ್ಯಗತ್ಯ. ಸತುವಿನ ಕೊರತೆಯು ಸೋಂಕುಗಳಿಗೆ ಬೇಗ ತುತ್ತಾಗುವಂತೆ ಮಾಡುತ್ತದೆ. ಒಣ ದ್ರಾಕ್ಷಿ, ಬೀಜಗಳು (Nuts & Seeds), ಕಾಳುಗಳು, ಧಾನ್ಯಗಳು ಮತ್ತು ಮಾಂಸಹಾರಿ ಆಹಾರಗಳಲ್ಲಿ ಇದು ಹೇರಳವಾಗಿರುತ್ತೆ.

4. ಆಂಟಿ-ಆಕ್ಸಿಡೆಂಟ್‌ಗಳು ಮತ್ತು ಫೈಟೊಕೆಮಿಕಲ್ಸ್: ಶುಂಠಿ, ಬೆಳ್ಳುಳ್ಳಿ ಮತ್ತು ಅರಿಶಿನವು ಉರಿಯೂತ ವಿರೋಧಿ (Anti-inflammatory) ಗುಣಗಳನ್ನು ಹೊಂದಿವೆ. ಅರಿಶಿನದಲ್ಲಿರುವ ‘ಕುರ್ಕುಮಿನ್’ ವೈರಸ್ ವಿರೋಧಿ ಹೋರಾಟಕ್ಕೆ ಹೆಸರುವಾಸಿ. ಹಸಿರು ತರಕಾರಿಗಳು, ಶುಂಠಿ, ಅರಿಶಿನ, ಬೆಳ್ಳುಳ್ಳಿ ಮತ್ತು ಗ್ರೀನ್ ಟೀಯನ್ನು ದಿನನಿತ್ಯ ಬಳಸಿ.

5. ಪ್ರೋಬಯಾಟಿಕ್ಸ್ (Probiotics): ನಮ್ಮ ದೇಹದ ರೋಗನಿರೋಧಕ ಶಕ್ತಿಯ ಶೇ. 70 ರಷ್ಟು ಭಾಗವು ಕರುಳಿನ ಆರೋಗ್ಯದ ಮೇಲೆ ಅವಲಂಬಿತವಾಗಿದೆ. ಪ್ರೋಬಯಾಟಿಕ್ಸ್ ಕರುಳಿನ ಮೈಕ್ರೋಬಯೋಮ್ ಅನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಮೊಸರು, ಮಜ್ಜಿಗೆ, ಇಡ್ಲಿ, ದೋಸೆ ಮತ್ತು ಉಪ್ಪಿನಕಾಯಿಯಂತಹ ಹುದುಗಿಸಿದ (Fermented) ಆಹಾರಗಳನ್ನು ಸೇವಿಸಿ.

6. ಪ್ರೋಟೀನ್ (Protein): ಪ್ರೋಟೀನ್‌ಗಳು ರೋಗನಿರೋಧಕ ವ್ಯವಸ್ಥೆಯ ಬಿಲ್ಡಿಂಗ್ ಬ್ಲಾಕ್ಸ್ ಇದ್ದಂತೆ. ಇವು ಪ್ರತಿಕಾಯಗಳ (Antibodies) ಉತ್ಪಾದನೆಗೆ ಅತ್ಯಗತ್ಯ. ಮೊಟ್ಟೆ, ಬೇಳೆಕಾಳುಗಳು, ಡೈರಿ ಉತ್ಪನ್ನಗಳು, ಸೋಯಾ ಮತ್ತು ಮಾಂಸ ಸೇವನೆಯನ್ನು ಸರಿಯಾದ ಕ್ರಮದಲ್ಲಿ ಮಾಡಿ.

ಆರೋಗ್ಯ ಕಾಪಾಡಿಕೊಳ್ಳಲು ದೈನಂದಿನ ಹವ್ಯಾಸಗಳು:

  • ಹೈಡ್ರೇಶನ್: ಬಾಯಾರಿಕೆ ಕಡಿಮೆಯಿದ್ದರೂ ದಿನವಿಡೀ ಸಾಕಷ್ಟು ನೀರು ಕುಡಿಯಿರಿ. ಹರ್ಬಲ್ ಟೀ ಅಥವಾ ಸೂಪ್‌ಗಳ ಸೇವನೆ ಉತ್ತಮ.
  • ದೈಹಿಕ ಚಟುವಟಿಕೆ: ಪ್ರತಿದಿನ ಸ್ವಲ್ಪ ಸಮಯದ ನಡಿಗೆ ಅಥವಾ ವ್ಯಾಯಾಮವು ರಕ್ತ ಪರಿಚಲನೆ ಮತ್ತು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ.
  • ಉತ್ತಮ ನಿದ್ರೆ: ದೇಹವು ತನ್ನನ್ನು ತಾನು ರಿಪೇರಿ ಮಾಡಿಕೊಳ್ಳಲು ದಿನಕ್ಕೆ 7 ರಿಂದ 8 ಗಂಟೆಗಳ ಕಾಲ ಗುಣಮಟ್ಟದ ನಿದ್ರೆ ಅಗತ್ಯ.
  • ನೈರ್ಮಲ್ಯ: ಸೋಂಕು ಹರಡುವುದನ್ನು ತಡೆಯಲು ಆಗಾಗ ಕೈ ತೊಳೆಯುವ ಅಭ್ಯಾಸವನ್ನಿಟ್ಟುಕೊಳ್ಳಿ.

ರೋಗನಿರೋಧಕ ಶಕ್ತಿಯು ಯಾವುದೇ ಒಂದು ಶಾರ್ಟ್‌ಕಟ್‌ನಿಂದ ಬರುವುದಿಲ್ಲ. ಸಮತೋಲಿತ ಆಹಾರ, ಸರಿಯಾದ ನಿದ್ರೆ, ಮತ್ತು ಸಕ್ರಿಯ ಜೀವನಶೈಲಿಯನ್ನು ರೂಢಿಸಿಕೊಂಡರೆ ಮಾತ್ರ ನಾವು ಚಳಿಗಾಲದ ಕಾಯಿಲೆಗಳಿಂದ ದೂರವಿರಲು ಸಾಧ್ಯ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!