Wednesday, August 12, 2026
Homeಕ್ರೈಮ್ಮೂಡಿಗೆರೆ:‌ ಬೈಕ್ - ಆಟೋ ನಡುವೆ ಡಿಕ್ಕಿ, ಕೂಲಿ ಕಾರ್ಮಿಕರಿಗೆ ಗಾಯ

ಮೂಡಿಗೆರೆ:‌ ಬೈಕ್ – ಆಟೋ ನಡುವೆ ಡಿಕ್ಕಿ, ಕೂಲಿ ಕಾರ್ಮಿಕರಿಗೆ ಗಾಯ

Telegram Group
Join Now

ಮೂಡಿಗೆರೆ: ಬೈಕ್ ಮತ್ತು ಆಟೋ ನಡುವೆ ಡಿಕ್ಕಿ ಸಂಭವಿಸಿದ್ದು ಆಟೋ ಮಗುಚಿ ಬಿದಿದ್ದು ಕೂಲಿ ಕಾರ್ಮಿಕರಿಗೆ ತೀವ್ರ ಗಾಯಗಳಾದ ಘಟನೆ ಕುಂಬರಡಿ ಗ್ರಾಮದಲ್ಲಿ ನಡೆದಿದೆ.

ಮೂಡಿಗೆರೆ ಮಾರ್ಗದಿಂದ ಬರುತ್ತಿದ್ದ ಬೈಕ್ ಹೊಸಕೆರೆ ಮಾರ್ಗದ ಕಡೆಯಿಂದ ಬರುತ್ತಿದ್ದ ಆಟೋಗೆ ಕುಂಬರಡಿ ಗ್ರಾಮದ ಬಸ್ ನಿಲ್ದಾಣದ ಸಮೀಪ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಆಟೋ ಮಗುಚಿ ಬಿದ್ದಿದ್ದು, ತೀವ್ರ ಗಾಯಗೊಂಡಿದ್ದ ಗಾಯಳುಗಳನ್ನು ಪ್ರಥಮ ಚಿಕಿತ್ಸೆಗೆ ಸತ್ತಿಗನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.


ಬೈಕ್ ಸವಾರರು ಪರಾರಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆಟೋದಲ್ಲಿದ್ದ ಕೂಲಿ ಕಾರ್ಮಿಕರಿಗೆ ತೀವ್ರ ಗಾಯಗಳಾಗಿದ್ದು, ಆಟೋ ಹಾಗೂ ಬೈಕ್ ಎರಡನ್ನು ಸಂಚಾರಿ ಪೊಲೀಸರು ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ.

ಘಟನಾ ಸಂಬಂಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments