Wednesday, August 12, 2026
Homeಜಿಲ್ಲಾಸುದ್ದಿಮೂಡಿಗೆರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ವತಿಯಿಂದ ಕೆರೆ ಹೂಳು ತೆರವು ಕಾರ್ಯ

ಮೂಡಿಗೆರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ವತಿಯಿಂದ ಕೆರೆ ಹೂಳು ತೆರವು ಕಾರ್ಯ

Telegram Group
Join Now

ಮೂಡಿಗೆರೆ: ಸೋಮವಾರದಂದು ಕಳೆದ ವರ್ಷ 2024ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ವತಿಯಿಂದ ನಮ್ಮ ಊರು ನಮ್ಮ ಕೆರೆ ಯೋಜನೆಯ ಅಡಿಯಲ್ಲಿ ಗೋಣಿಬೀಡು ಹೋಬಳಿಯ ಜಿ ಹೊಸಹಳ್ಳಿಯ ದಿಣ್ಣೆಕೆರೆ ಗ್ರಾಮದಲ್ಲಿ ಹೂಳು ಎತ್ತುವ ಕಾರ್ಯಕ್ರಮವನ್ನು ಗ್ರಾಮಸ್ಥರ ಸಹಕಾರದಿಂದ ಸುಮಾರು 4 ಲಕ್ಷ ಅಧಿಕ ವೆಚ್ಚದಲ್ಲಿ ಹೂಳು ಎತ್ತುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಒಂದು ವರ್ಷ ನಂತರ ಕೆರೆಯ ಸುತ್ತಮುತ್ತಲು ಕಾಡು ಬೆಳೆದು ಕೆರೆಯೇ ಕಾಣದಂತಗಿದ್ದು ಸೋಮವಾರ ಶೋರ್ಯ ವಿಪತ್ತು ನಿರ್ವಾಣ ಘಟಕ ಗೋಣಿಬೀಡಿನ ಸ್ವಯಂ ಸೇವಕರ ತಂಡ ಕೆರೆಯ ಸುತ್ತಮುತ್ತಲಿನ ಕಾಡು, ಕಸ ಪ್ಲಾಸ್ಟಿಕ್ ಎಲ್ಲವನ್ನು ಸ್ವಚ್ಛಗೊಳಿಸಿದರು.

ಈ ಸಂದರ್ಭದಲ್ಲಿ ಶೋರ್ಯ ಘಟಕದ ಸಯೋಜಕರು ಉದಯ ಕಸ್ಕೆಬೈಲ್, ಜಿ ಹೊಸಹಳ್ಳಿ ಒಕ್ಕೂಟದ ಅಧ್ಯಕ್ಷ ರಂಜಿತ್, ವಲಯ ಮೇಲ್ವಿಚಾರಕ ದೀಪಕ್, ಸೇವಾಪ್ರತಿನಿಧಿಗಳಾದ ಕುಸುಮ, ಹೇಮಾ, ದರ್ಶನ್, ನಿತಿನ್, ಜೆಸಿಐ ಗೋಣಿಬೀಡು, ಹೊಯ್ಸಳ ಸಂಸ್ಥೆಯ ಅಧ್ಯಕ್ಷ ಜಗತ್, ರವಿ, ರವೀಂದ್ರ, ಸತೀಶ್, ಸುನಿಲ್ ಹೊಸಪುರ, ಪೂರ್ಣೇಶ್, ಇಂದಿರಾ, ಪ್ರವೀಣ್, ಸುಮನ್ ಮತ್ತಿತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments