Saturday, February 7, 2026
Homeಸ್ಪೋರ್ಟ್ಸ್8 ವರ್ಷಗಳ ಕಾಲ ಕೋಮಾದಲ್ಲಿದ್ದು ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ಕ್ರಿಕೆಟಿಗ ಅಕ್ಷು ನಿಧನ!

8 ವರ್ಷಗಳ ಕಾಲ ಕೋಮಾದಲ್ಲಿದ್ದು ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ಕ್ರಿಕೆಟಿಗ ಅಕ್ಷು ನಿಧನ!

ಶ್ರೀಲಂಕಾದ ಯುವ ಕ್ರಿಕೆಟಿಗ ಅಕ್ಷು ಫೆರ್ನಾಂಡೊ (34) ಅವರ ಎಂಟು ವರ್ಷಗಳ ಸುದೀರ್ಘ ಹೋರಾಟ ಕೊನೆಗೊಂಡಿದೆ. 2018ರಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದ ಕಾರಣ ಅವರು ಕೋಮಾ (Coma) ಸ್ಥಿತಿಗೆ ತಲುಪಿದ್ದರು. ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

2018ರ ಡಿಸೆಂಬರ್ ತಿಂಗಳಲ್ಲಿ ಅಕ್ಷು ಫೆರ್ನಾಂಡೊ ಅವರು ಮೌಂಟ್ ಲವಿನಿಯಾ ಬೀಚ್ ಬಳಿ ಗೆಳೆಯರೊಂದಿಗೆ ಅಭ್ಯಾಸ ಮುಗಿಸಿ ರೈಲ್ವೆ ಹಳಿ ದಾಟುತ್ತಿದ್ದಾಗ ವೇಗವಾಗಿ ಬಂದ ರೈಲು ಅವರಿಗೆ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಅವರ ತಲೆಗೆ ಗಂಭೀರ ಪೆಟ್ಟಾಗಿತ್ತು. ಅಂದಿನಿಂದ ಸುಮಾರು 2,500ಕ್ಕೂ ಹೆಚ್ಚು ದಿನಗಳ ಕಾಲ ಅವರು ಆಸ್ಪತ್ರೆಯ ಹಾಸಿಗೆಯ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲೇ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರು. ಕುಟುಂಬದವರು ಮತ್ತು ವೈದ್ಯರು ಸತತ 7 ವರ್ಷಗಳ ಕಾಲ ಚಿಕಿತ್ಸೆ ನೀಡಿದರೂ ಯಾವುದೇ ಫಲ ಸಿಗಲಿಲ್ಲ.

ಅಕ್ಷು ಫೆರ್ನಾಂಡೊ ಶ್ರೀಲಂಕಾ ಕ್ರಿಕೆಟ್‌ನ ಉದಯೋನ್ಮುಖ ತಾರೆ ಎನಿಸಿಕೊಂಡಿದ್ದರು. ಅವರು 2010ರ ಅಂಡರ್-19 ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡವನ್ನು ಪ್ರತಿನಿಧಿಸಿದ್ದರು. ಆ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 52 ರನ್ ಗಳಿಸುವ ಮೂಲಕ ಮಿಂಚಿದ್ದರು. ಶ್ರೀಲಂಕಾದ ದೇಶೀಯ ಕ್ರಿಕೆಟ್‌ನಲ್ಲಿ ಅವರು ಹಲವು ಪ್ರಮುಖ ಕ್ಲಬ್‌ಗಳ ಪರವಾಗಿ ಆಡಿದ್ದರು.

ಗಣ್ಯರ ಸಂತಾಪ

ಅಕ್ಷು ಅವರ ನಿಧನಕ್ಕೆ ಶ್ರೀಲಂಕಾದ ಮಾಜಿ ಕ್ರಿಕೆಟಿಗರು ಮತ್ತು ಕಾಮೆಂಟೇಟರ್ ರೋಷನ್ ಅಬೆಸಿಂಘೆ ಸೇರಿದಂತೆ ಇಡೀ ಕ್ರಿಕೆಟ್ ಜಗತ್ತು ಕಂಬನಿ ಮಿಡಿದಿದೆ. “ಒಬ್ಬ ಪ್ರತಿಭಾವಂತ ಕ್ರಿಕೆಟಿಗನ ಬದುಕು ವಿಧಿಯ ಆಟದಿಂದ ಹೀಗೆ ಅಂತ್ಯವಾಗಿದ್ದು ದುರದೃಷ್ಟಕರ” ಎಂದು ಅಭಿಮಾನಿಗಳು ಶೋಕ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!