Friday, November 20, 2026
Homeಜಿಲ್ಲಾಸುದ್ದಿನ. 21ಕ್ಕೆ ಮೂಡಿಗೆರೆ ತಂಡದಿಂದ ರಾಜ್ಯಮಟ್ಟದ 7ರ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾಗಿ!

ನ. 21ಕ್ಕೆ ಮೂಡಿಗೆರೆ ತಂಡದಿಂದ ರಾಜ್ಯಮಟ್ಟದ 7ರ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾಗಿ!

Telegram Group
Join Now

ಚಿಕ್ಕಮಗಳೂರು: ರಾಜ್ಯಮಟ್ಟದ ಪ್ರತಿಷ್ಠಿತ 7ರ ಫುಟ್ಬಾಲ್ ಪಂದ್ಯಾವಳಿಯಾದ ಪ್ರೊ ಸಾಕರ್ ಲೀಗ್ ನಲ್ಲಿ ಮೂಡಿಗೆರೆ ಯುನೈಟೆಡ್ ಎಫ್‌ಸಿ ತಂಡ ಭಾಗವಹಿಸಲಿದೆ.

ಹೌದು ಕರ್ನಾಟಕದ ಎಂಟು ಬಲಿಷ್ಠ ತಂಡಗಳು ಭಾಗವಹಿಸಲಿರುವ ಈ ಪಂದ್ಯಾವಳಿಯಲ್ಲಿ 100ಕ್ಕೂ ಅಧಿಕ ಆಟಗಾರರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ನವೆಂಬರ್ 21ರಿಂದ ಡಿಸೆಂಬರ್ 6ರವರೆಗೆ ಪ್ರತಿ ವಾರಾಂತ್ಯದಲ್ಲಿ ಚಿಕ್ಕಮಗಳೂರಿನ ಕಲ್ಯಾಣನಗರ ಟರ್ಫ್‌ನಲ್ಲಿ ಪಂದ್ಯಾವಳಿ ನಡೆಯಲಿದೆ.

ಮೂಡಿಗೆರೆ ಯುನೈಟೆಡ್ ಎಫ್‌ಸಿ ತಂಡದ ಮಾಲೀಕರಾಗಿ ನಿಶ್ಚಿಂತ್ ಚಿನ್ನಪ್ಪ, ಪ್ರೀತಮ್ ಮೋಟಮ್ಮ, ಚರಣ್ ಡಿ.ಆರ್. ಹಾಗೂ ಆದರ್ಶ್ ಗೌಡ ಡಿ.ಎ ಕಾರ್ಯನಿರ್ವಹಿಸುತ್ತಿದ್ದಾರೆ.

ತಂಡದಲ್ಲಿ ಅನುಭವಿ ಹಾಗೂ ಪ್ರತಿಭಾವಂತ ಆಟಗಾರರ ಸಮಾಗಮವಿದ್ದು, ಪ್ರತಿಷ್ಠಿತ ಡ್ಯುರಾಂಡ್ ಕಪ್‌ನಲ್ಲಿ ಆಡಿರುವ ಪ್ರಜ್ವಲ್ ಗೌಡ ಹಾಗೂ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ಭಾಗವಹಿಸಿರುವ ಶೇಕ್ ಅರ್ಬಾಜ್ ತಂಡದ ಪ್ರಮುಖ ಆಕರ್ಷಣೆಯಾಗಿದ್ದಾರೆ. ಇವರೊಂದಿಗೆ ಶಿವಮೊಗ್ಗ ಹಾಗೂ ಹಾಸನ ಭಾಗದ ಹಲವು ಪ್ರತಿಭಾವಂತ ಆಟಗಾರರೂ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಚಿಕ್ಕಮಗಳೂರಿನ ಸ್ಥಳೀಯ ಪ್ರತಿಭೆ ಸುಭಾಷ್ ಎಂ. ತಂಡದ ನಾಯಕನಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ರಾಜ್ಯಮಟ್ಟದ ಈ ಪಂದ್ಯಾವಳಿಯಲ್ಲಿ ಮೂಡಿಗೆರೆ ಯುನೈಟೆಡ್ ಎಫ್‌ಸಿ ಬಲಿಷ್ಠ ಸ್ಪರ್ಧಿಯಾಗಿ ಹೊರಹೊಮ್ಮುವ ನಿರೀಕ್ಷೆಯಿದೆ.

ತಂಡದಲ್ಲಿ ವ್ಯವಸ್ಥಾಪಕರಾಗಿ : ವರುಣ್ ಬಸವರಾಜ್ ಜವಾಬ್ದಾರಿ ನಿವಹಿಸಲಿದ್ದು

ತಂಡದ ಆಟಗಾರರಾಗಿ
ಸುಭಾಷ್ ಎಂ. – ನಾಯಕ
ಯಶವಂತ್ – ಗೋಲ್‌ಕೀಪರ್ ಧನುಷ್ ಸಿ.ಎ.ಪ್ರಜ್ವಲ್ ಗೌಡ,ಶೇಕ್ ಅರ್ಬಾಜ್,ಮನು ಗೌಡ,ಹರ್ಷಿತ್ ನಾಯಕ್,ಶಾರ್ಗವ ಎಂ.ಆರ್.ಹೇಮಂತ್,ಆದರ್ಶ್ ಗೌಡ,ನಿಶ್ಚಿಂತ್ ಚಿನ್ನಪ್ಪ,
ಮೊಹಮ್ಮದ್ ನುಮಾನ್,
ವಚನ್‌ ಗೌಡ,ನಂದಕಿಶೋರ್‌ ಅವರುಗಳು ಅವಕಾಶ ಪಡೆದುಕೊಂಡಿದ್ದು
ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಮೂಡಿಗೆರೆ ಯುನೈಟೆಡ್ ಎಫ್‌ಸಿ ತಂಡಕ್ಕೆ ರೋಟರಿ ಸಂಸ್ಥೆ. ಮೂಡಿಗೆರೆ ಫುಟ್ ಬಾಲ್ ಕ್ಲಬ್ ಸೇರಿದಂತೆ ಆನೇಕ ಸಂಘ ಸಂಸ್ಥೆಗಳು ಹಾಗೂ ಕ್ರೀಡಾಭೀಮಾನಿಗಳು, ಸಾರ್ವಜನಿಕರು ತಂಡ ಅತ್ಯುತ್ತಮ ಪ್ರದರ್ಶನ ನೀಡಿ ವಿಜಯಶಾಲಿಯಾಗಿ ಹೊರಹೊಮ್ಮಲಿ ಎಂದು ಶುಭಾಶಯ ತಿಳಿಸಿದ್ದಾರೆ

ವರದಿ:ಪುನೀತ್ ಕಡಿದಾಳು
9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!