ಚಿಕ್ಕಮಗಳೂರು: ರವಿ ಹಂಜ್ ಬರೆದ ‘ ಬಸವ ಮಂಟಪ ’ ಕೃತಿಯಲ್ಲಿ ರಂಭಾಪುರಿ ಪೀಠ ಮತ್ತು ಪಂಚಾಚಾರ್ಯ ಪೀಠಗಳ ಇತಿಹಾಸದ ಕುರಿತ ಉಲ್ಲೇಖಗಳು ಸೇರಿದಂತೆ ಬಸವಣ್ಣನವರ ಬಗೆಗಿನ ಹೇಳಿಕೆಗಳು ತೀವ್ರ ವಿವಾದಕ್ಕೆ ಕಾರಣವಾಗಿವೆ.

ಹೌದು .. ವರದಿಯ ಪ್ರಕಾರ ಪುಸ್ತಕದಲ್ಲಿ ರಂಭಾಪುರಿ ಪೀಠ ಮತ್ತು ಪಂಚಾಚಾರ್ಯ ಪೀಠಗಳ ಇತಿಹಾಸದ ಬಗ್ಗೆ ಮಾಡಿರುವ ಕೆಲವು ಉಲ್ಲೇಖಗಳು ಚರ್ಚೆ ಮತ್ತು ಆಕ್ರೋಶ ಹುಟ್ಟುಹಾಕಿವೆ. ಹಾಗೆ ರಂಭಾಪುರಿ ಪೀಠವು ಈ ಹಿಂದೆ ನಾಥ ಸಂಪ್ರದಾಯಕ್ಕೆ ಸೇರಿತ್ತು ಮತ್ತು ನಂತರ ಅದನ್ನು ವಶಪಡಿಸಿಕೊಳ್ಳಲಾಯಿತು ಎಂಬಂತಹ ವಿವರಣೆಗಳು ವಿವಾದಕ್ಕೆ ಗ್ರಾಸವಾಗಿವೆ.
ಕುಮಾರ ಚೆನ್ನನಬಸವ ತನ್ನ ಬಸವ ಪುರಾಣದ ಶರಣರ ಕಥೆಗಳು ಕೃತಿಯಲ್ಲಿ ತನ್ನ ಪೀಠ ಪರಂಪರೆಯ ಮುಕ್ತಿಮುನಿನಾಥರನ್ನ, ಕಲ್ಯಾಣದ ಶರಣರನ್ನ ನೆನೆದಿದ್ದಾರೆ ಹೊರತು ರೇವಣಾರಾಧ್ಯರನ್ನ ನೆನೆದಿಲ್ಲ. ಕುಮಾರ ಚೆನ್ನಬಸವ ಕಾಲದ ವರೆಗೂ ರೇವಣಾರಾಧ್ಯಪೀಠ ರಂಭಾಪುರಿಯಲ್ಲಿ ಅಸ್ತಿತ್ವಕ್ಕೆ ಬಂದಿಲ್ಲ.
ಕರ್ನಾಟಕ ಸಚಿವ ಸಂಪುಟವು ಪುಸ್ತಕದ ಪ್ರತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಒಪ್ಪಿಗೆ ನೀಡಿದೆ. ಲೇಖಕ ರವಿ ಹಂಜ್ ಮತ್ತು ಪ್ರಕಾಶಕ ವಿಶ್ವೇಶ್ವರ ಭಟ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
