Saturday, February 14, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಶಿಕ್ಷಣ ಸಚಿವರು ನೋಡಲೇಬೇಕಾದ ಸ್ಟೋರಿ: ಸರ್ಕಾರಿ ಶಾಲೆಯಲ್ಲಿ ಅರೆ ಬೆಂದ ಅನ್ನ, ಮಸಾಲೆ ಇಲ್ಲದ...

ಚಿಕ್ಕಮಗಳೂರು: ಶಿಕ್ಷಣ ಸಚಿವರು ನೋಡಲೇಬೇಕಾದ ಸ್ಟೋರಿ: ಸರ್ಕಾರಿ ಶಾಲೆಯಲ್ಲಿ ಅರೆ ಬೆಂದ ಅನ್ನ, ಮಸಾಲೆ ಇಲ್ಲದ ಸಾರು!

ಚಿಕ್ಕಮಗಳೂರು: ಜಿಲ್ಲೆಯ ಕಡೂರು ಪಟ್ಟಣದ ಸರ್ಕಾರಿ ಶಾಲೆಯಲ್ಲಿ ಅಡುಗೆ ಸಿಬ್ಬಂದಿಗಳ ದರ್ಬಾರ್‌ ಜೋರಾಗಿದೆ. ಹೇಳೋರಿಲ್ಲ ಕೇಳೋರಿಲ್ಲ ಅನ್ನುವ ಪರಿಸಥಿತಿ ಬಂದೊದಗಿದೆ. ಮಕ್ಕಳು ಅನ್ನ ಬೆಂದಿಲ್ಲ, ಹುಳ ಇದೆ ಅಂದರೂ ಶಿಕ್ಷಕರು ಡೋಂಟ್‌ ಕೇರ್‌ ಎಂಬಂತೆ ವರ್ತನೆ ಮಾಡುತ್ತಿದ್ದಾರೆ.

ಹೌದು .. ಕಡೂರು ಪಟ್ಟಣದ ಪಿ.ಎಂ.ಶ್ರೀ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು ಸರ್ಕಾರದ ಬಿಸಿಯೂಟ ಯೋಜನೆಯ ಊಟದಲ್ಲಿ ಹುಳುಗಳದ್ದೇ ಕಾರುಬಾರು ನಡೆಯುತ್ತಿದೆ. ಹೀಗಾಗಿ ಪುಟ್ಟ ಮಕ್ಕಳು ಹುಳ ಇದೆ ಎಂದು ಊಟ ಬಿಟ್ರು ಕ್ರಮ ಕೈಗೊಳ್ಳದ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಹಾಗಾಗಿ ಅನ್ನದಲ್ಲಿ ಹುಳ ಕಂಡು ಮನೆಯಿಂದಲೇ ಊಟ ತರುತ್ತಿರುವ ಕೆಲ ಮಕ್ಕಳು. ಹಾಗೆ ಮಕ್ಕಳಿಗೆ ಕಳಪೆ ಗುಣಮಟ್ಟದ ಬಿಸಿಯೂಟ ನೀಡಿದ್ರು ವ್ಯವಸ್ಥೆ ಮೌನ ವಹಿಸಿದೆ.

ಊಟ ಮಾಡುವಾಗ ಬೇಯಿಸಿದ ಆಹಾರದಲ್ಲಿ ಹುಳಗಳು ಪತ್ತೆಯಾಗಿದ್ದು ಹುಳ ಕಂಡು ಊಟ ಮಾಡಲಾಗದೇ ಅನ್ನವನ್ನ ಚೆಲ್ಲಿ ಹೋಗ್ತಿರೋ ಮಕ್ಕಳು ಹೀಗಾಗಿ ಮಕ್ಕಳು ಅನುಭವಿಸ್ತಿರೋ ಸಮಸ್ಯೆಯನ್ನು ಸ್ಥಳೀಯರ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

ಶಿಕ್ಷಣ ಸಚಿವರೇ ಮಧು ಬಂಗಾರಪ್ಪನವರೇ ಹಾಗೆ ಸ್ಥಳೀಯ ಶಾಸಕರಾದ ಕೆ.ಎಸ್ ಆನಂದ್‌ ಅವರೇ ಒಮ್ಮೆ ಇತ್ತ ನೋಡಿ ಈ ಹುಡುಗರ ಸಮಸ್ಯೆಯನ್ನು ಯಾವಾಗ ಪರಿಹರಿಸುತ್ತೀರಾ ಒಂದು ಮಕ್ಕಳಿದ್ರೂ ಸರ್ಕಾರಿ ಶಾಲೆ ನಡೆಸುತ್ತೇವೆ ಎಂದು ಹೇಳುವ ನೀವು ಈ ಶಾಲೆಯ ಮಕ್ಕಳ ಬಗ್ಗೆ ಸ್ವಲ್ಪ ಗಮನ ಕೊಡಿ ಎಂದು ಪಬ್ಲಿಕ್‌ ಇಂಪ್ಯಾಕ್ಟ್‌ ಮೂಲಕ ಮನವಿಯನ್ನು ಮಾಡಲಾಗುತ್ತದೆ. ಶಿಕ್ಷಣ ಸಚಿವರು ಗಮನ ಹರಿಸುತ್ತಾರೋ ಇಲ್ವೋ ಎಂಬುದನ್ನ ನಾವು ಕಾದು ನೋಡಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!