Wednesday, March 25, 2026
Homeಕ್ರೈಮ್ಕಳಸ :ಜನ ವಿರೋಧಿ ಅರಣ್ಯ ಕಾನೂನುಗಳನ್ನು ರದ್ದುಪಡಿಸಬೇಕು: ರೈತ, ಕಾರ್ಮಿಕ ಹಿತ ರಕ್ಷಣಾ ಸಮಿತಿ ಪ್ರತಿಭಟನೆ

ಕಳಸ :ಜನ ವಿರೋಧಿ ಅರಣ್ಯ ಕಾನೂನುಗಳನ್ನು ರದ್ದುಪಡಿಸಬೇಕು: ರೈತ, ಕಾರ್ಮಿಕ ಹಿತ ರಕ್ಷಣಾ ಸಮಿತಿ ಪ್ರತಿಭಟನೆ

ಕಳಸ: ಮಲೆನಾಡಿನ ರೈತರು ಹಾಗೂ ವಾಸಿಸುವ ಜನರಿಗೆ ಅರಣ್ಯ ಕಾನೂನುಗಳ ಕಾರಣಗಳಿಂದ ಕೃಷಿ ಜಮೀನುಗಳಿಗೆ ಹಾಗೂ ವಾಸದ ಮನೆಗಳಿಗೆ ಹಕ್ಕುಪತ್ರ ಪಡೆಯಲು ತೊಡಕಾಗಿರುತ್ತದೆ. ಸೆಕ್ಷನ್ 4 ಹಾಗೂ ಸೆಕ್ಷನ್ 17 ಮಾಡುವುದರಿಂದ ಮುಂದೆ ಸಾರ್ವಜನಿಕ ಉದ್ದೇಶಗಳಿಗೆ ಹಾಗೂ ವಸತಿ ರಹಿತರಿಗೆ ಭೂಮಿ ಅಗತ್ಯವಿರುವದರಿಂದ ಇಂತಹ ಕಾನೂನುಗಳು ಸರಕಾರಕ್ಕೆ ಹಾಗೂ ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿದೆ.

ಜನವಿರೋಧಿ ಕಾನೂನುಗಳನ್ನು ಜಾರಿ ಮಾಡಬಾರದು ಹಾಗೆಯೇ, ಈಗಾಗಲೇ ಕೃಷಿ ಮಾಡಿರುವ ಹಾಗೂ ವಾಸ ಮಾಡುತ್ತಿರುವ ಜಮೀನು ಮತ್ತು ಮನೆಗಳಿಗೆ ಹಕ್ಕುಪತ್ರ ಕೊಡಬೇಕಾಗಿ ಪ್ರತಿಭಟನೆ ಹಾಗೂ ಧರಣಿಯ ಮೂಲಕ ಆಗ್ರಹ ಮಾಡುತ್ತಿದ್ದೇವೆಂದು ರೈತ, ಕಾರ್ಮಿಕ ಹಿತ ರಕ್ಷಣಾ ಸಮಿತಿ ವತಿಯಿಂದ ಕಳಸ ತಾಲೂಕಿನಲ್ಲಿ ಪ್ರತಿಭಟನೆ ನಡೆಸಿದರು.

ಹಕ್ಕೋತ್ತಾಯಗಳು: ಈಗ ಫಹಣಿಗಳಲ್ಲಿ ಲಭ್ಯವಿರುವ ಗೋಮಾಳ ಭೂಮಿಯನ್ನು (ಕಂದಾಯ) ಮೀಸಲು ಅರಣ್ಯವಾಗಿ ಘೋಷಿಸಬಾರದು.
2) 2001-02ರಲ್ಲಿ ಅಂದಿನ ಜಿಲ್ಲಾಧಿಕಾರಿಗಳು ಅರಣ್ಯ ಎಂದು ಘೋಷಿಸಿರುವ ಸರ್ವೆ ನಂಬರುಗಳಲ್ಲಿ ಆಗಲೇ ಕೃಷಿ ಭೂಮಿಗಳಿದ್ದು, ಇವುಗಳ ಮಂಜೂರಾತಿಗೆ ಸಮಸ್ಯೆಯಾಗಿರುವುದರಿಂದ ಮತ್ತೆ ಈ ಭೂಮಿಗಳನ್ನು ಕಂದಾಯ ಭೂಮಿಗಳನ್ನಾಗಿ ಘೋಷಿಸಬೇಕು.
3) ಫಾರಂ. ನಂ. 50, 53, 57 ಹಾಗೂ 94 ಸಿ ಅಡಿಯಲ್ಲಿ ಅರ್ಜಿ ಹಾಕಿದ ಎಲ್ಲಾ ಅರ್ಹ ಫಲಾನುಭವಿಗಳಿಗೆ ಕೂಡಲೇ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳಬೇಕು.
4) ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ 10 ಎಕರೆ ಭೂಮಿಯನ್ನು ನಿವೇಶನಕ್ಕಾಗಿ ಮೀಸಲಿಡಬೇಕು.
5) ಫಾರಂ ನಂ. 57ರ ಮಂಜೂರಾತಿಗೆ ವಾಣಿಜ್ಯ ಬೆಳೆಗಳನ್ನು ಹೊರಗಿಟ್ಟಿರುವುದರಿಂದ ಮಲೆನಾಡಿಗರಿಗೆ ಅನ್ಯಾಯವಾಗುತ್ತಿದ್ದು, ಇದನ್ನು ಸರಿ ಪಡಿಸಬೇಕು.
6) ಅರಣ್ಯ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಹಾಗೆ ಕೇಂದ್ರ ಸರ್ಕಾರ ಅರಣ್ಯ ಕಾಯ್ದೆಗೆ ತಿದ್ದುಪಡಿ ತರಲು ಸಂಸತ್ತಿನಲ್ಲಿ ಕಾನೂನು ರೂಪಿಸಬೇಕು.
7) ಪ್ರಕ್ರಿಯೆ ನಡೆಯುತ್ತಿದ್ದು, ಈ ಪಟ್ಟಿಯಲ್ಲಿ ಅರ್ಹ ಫಲಾನುಭವಿಗಳಿಗೆ ನ್ಯಾಯ ದೊರಕಿಸಿಕೊಡಬೇಕು. ಈಗಾಗಲೇ ಬೇರೆ ಬೇರೆ ಕಾರಣಗಳಿಂದ ಕೆಲವರ ಫಹಣಿಗಳು ರದ್ದಾಗಿದ್ದು, ಅರ್ಹ ರೈತರ ಫಹಣಿಗಳನ್ನು ಪುನಃ ಚಾಲನೆಗೊಳಿಸಬೇಕು.
8) ಅರಣ್ಯ ಹಕ್ಕು ಕಾಯ್ದೆಯಲ್ಲಿ ಪರಿಶಿಷ್ಟ ಪಂಗಡದವರಿಗೆ ಇರುವ ಕಾಲಮಿತಿಯನ್ನು ಅರಣ್ಯ ವಾಗಿ
9) ಗ್ರಾಮಗಳ ಅಭಿವೃದ್ಧಿಗೆ ಅರಣ್ಯ ಇಲಾಖೆ ಅಡಚಣೆ ಮಾಡುವುದನ್ನು ನಿಲ್ಲಿಸಬೇಕು.
10) ಗ್ರಾಮೀಣ ಭಾಗದ ರಸ್ತೆಗಳನ್ನು ಕಾಂಕ್ರೀಟಿಕರಣಗೊಳಿಸಿ, ಸರ್ವಋತು ರಸ್ತೆಗಳನ್ನಾಗಿ ಮಾಡಬೇಕು. ಈಗಾಗಲೇ 94ಸಿ ಅಡಿಯಲ್ಲಿ ಅರ್ಜಿ ಹಾಕಿ ವಜಾ ಆದವುಗಳನ್ನು ಮರು ಪರಿಶೀಲಿಸಬೇಕು ಹಾಗೂ
11) ಅರಣ್ಯವೆಂಬ ನೆಪವೊಡ್ಡಿ ಯಾವುದೇ ಬಡವರ, ರೈತರ ಹಕ್ಕುಪತ್ರಗಳನ್ನು ವಜಾ ಮಾಡಬಾರದು ಹಾಗೂ ತೆರವುಗೊಳಿಸಬಾರದು.ಹಾಗೂ ಮತ್ತಷ್ಟು ಹಾಕ್ಕೋತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!