ಹಾಸನ: ಶಬರಿಮಲೆಗೆ ಹೋಗಿ ಬಂದು ಪತ್ನಿಯ ಬರ್ಬರ ಹತ್ಯೆ ಮಾಡಿರುವ ಪತಿ ಈ ಘಟನೆ ಆಲೂರು ತಾಲೂಕಿನ ಯಡೂರು ಗ್ರಾಮದಲ್ಲಿ ನಡೆದಿದೆ.
ಹೌದು .. ಪತ್ನಿ ರಾಧಾಳನ್ನ(40) ಹತ್ಯೆ ಮಾಡಿ ಯಗಚಿ ನದಿಗೆ ಎಸೆದಿದ್ದ ಪತಿ ಕುಮಾರ್, ಆತನ ಮನೆಯವರು ಸೇರಿ ಹತ್ಯೆ ಮಾಡಿರುವ ಆರೋಪ ಕೇಳಿ ಬಂದಿದೆ.

ಕಳೆದ 4 ವರ್ಷಗಳಿಂದ ಪತಿಯಿಂದ ಬೇರೆ ವಾಸವಾಗಿದ್ದ ರಾಧ 2ನೇ ಮದುವೆಯಾಗಿದ್ದನ್ನ ಪ್ರಶ್ನೆ ಮಾಡಿದ್ದಕ್ಕೆ ಮೊದಲ ಪತ್ನಿಯ ಹತ್ಯೆ ಮಾಡಲಾಗಿದ್ದು ಜನವರಿ 10ರ ರಾತ್ರಿ ಮನೆಯಲ್ಲೇ ರಾಧಾ ಹತ್ಯೆ ಮಾಡಿ ಆ ನಂತರ ಆತ್ಮಹತ್ಯೆ ಎಂದು ಬಿಂಬಿಸಲು ಯಗಚಿ ನದಿಗೆ ಎಸೆದಿದ್ದ ಪಾಪಿ ಪತಿರಾಯ
ಜನವರಿ ಮೊದಲ ವಾರ ಶಬರಿಮಲೆಗೆ ತೆರಳಿದ್ದ ಕುಮಾರ್ ಇರುಮುಡಿ ಕಟ್ಟೋ ವೇಳೆ ಪತ್ನಿ ಸ್ಥಾನದಲ್ಲಿ ಬೇರೊಬ್ಬ ಮಹಿಳೆಯಿಂದ ಪೂಜೆ ಆ ನಂತರ ಇದರ ಬಗ್ಗೆ ಪತ್ನಿ ಸ್ಥಾನದಲ್ಲಿ ನಿಂತು ಪೂಜೆ ಮಾಡಿದ ಬಗ್ಗೆ ರಾಧಾಗೆ ಮಾಹಿತಿ ಈ ವಿಚಾರವಾಗಿ ಶಬರಿಮಲೆಯಿಂದ ಬಂದ ಮೇಳೆ ರಾಧಾ ಪತಿಯನ್ನು ಪ್ರಶ್ನೆ ಮಾಡಿದ್ದಳು.ಇದರಿಂದ ಸಿಟ್ಟಿಗೆದ್ದು ಪತ್ನಿಯನ್ನು ಹತ್ಯೆಗೈದು ಯಗಚಿ ನದಿಗೆ ಶವ ಬಿಸಾಡಿದ್ದನು
ಈ ಬಗ್ಗೆ ತಾನೇ ಪೊಲೀಸರಿಗೆ ಮಾಹಿತಿ ನೀಡಿದ್ದ ಕುಮಾರ್ ಇಂದು ಯಗಚಿ ನದಿಯಿಂದ ಮೃತದೇಹ ಹೊರ ತೆಗೆದ ಪೊಲೀಸರು.
ಘಟನೆ ಸಂಬಂಧ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದುವರೆದ ಶೋಧ ಕಾರ್ಯ ನಡೆಯುತ್ತಿದೆ.
