ಹಾಸನ: ಸಕಲೇಶಪುರ ತಾಲೂಕಿನಲ್ಲಿ ಭಾರೀ ಅವಘಡ ಸಂಭವಿಸಿದ್ದು ಬಾಳೆಗದ್ದೆ ವಿದ್ಯುತ್ ಉಪಕೇಂದ್ರದ ಎಡವಟ್ಟಿನಿಂದ ಸೆಸ್ಕ್ ಲೈನ್‌ಮ್ಯಾನ್ ಸ್ಥಿತಿ ಗಂಭೀರವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಹಾಸನದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಹೌದು .. ವಿದ್ಯುತ್ ದುರಸ್ತಿ ವೇಳೆ ಅಕಾಲಿಕವಾಗಿ ವಿದ್ಯುತ್ ಸರಬರಾಜುಗೊಂಡಿದ್ದು ಕುಶಾಲನಗರ ನಿವಾಸಿ ಗೋಪಿ (37) ಎಂಬುವರಿಗೆ ಶಾಕ್ ಹೊಡೆದು ತೀವ್ರ ಅಸ್ವಸ್ಥಗೊಂಡಿರುವ ಘಟನೆ ಹಲಸುಲಿಗೆ ಗ್ರಾಮ, ಉದೇವಾರ ಫೀಡರ್ ವ್ಯಾಪ್ತಿಯಲ್ಲಿ ನಡೆದಿದೆ.
ಶಟ್‌ಡೌನ್ ಇದ್ದರೂ ವಿದ್ಯುತ್ ಪೂರೈಕೆಯಾಗಿದ್ದು ಸಿಬ್ಬಂದಿಗೆ ವಿದ್ಯುತ್ ಪ್ರವಾಹ ಇದಕ್ಕೆಲ್ಲ ಉಪಕೇಂದ್ರದ ಗೊಂದಲವೇ ಅಪಘಾತಕ್ಕೆ ಕಾರಣ ಎನ್ನುವ ಆರೋಪ ಕೇಳಿಬಂದಿದೆ.
ಗಾಯಾಳುವನ್ನು ಮೊದಲು ಸಕಲೇಶಪುರ ಆಸ್ಪತ್ರೆಗೆದಾಖಲಿಸಿ ಆ ನಂತರ ಹಾಸನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಆದರೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಸ್ಥಳಕ್ಕೆ ಸೆಸ್ಕ್ ಎಇಇ ಹರೀಶ್ ಭೇಟಿ ನೀಡಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
