Tuesday, August 11, 2026
Homeಜಿಲ್ಲಾಸುದ್ದಿಮೂಡಿಗೆರೆ: ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದ ಸಣ್ಣಮ್ಮರಿಗೆ ವ್ಹೀಲ್ ಚೇರ್ ವಿತರಣೆ

ಮೂಡಿಗೆರೆ: ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದ ಸಣ್ಣಮ್ಮರಿಗೆ ವ್ಹೀಲ್ ಚೇರ್ ವಿತರಣೆ

Telegram Group
Join Now

ಮೂಡಿಗೆರೆ : ತಾಲೂಕಿನ ಜಿ ಹೊಸಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ವತಿಯಿಂದ ಅಂಗವಿಕಲ ಫಲಾನುಭವಿಗಳಿಗೆ ವ್ಹೀಲ್ ಚೇರ್ ವಿತರಿಸಲಾಯಿತು.

ಗ್ರಾಮೀಣ ಅಭಿವೃದ್ಧಿ ಹಾಗೂ ಸಬಲೀಕರಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ ಎಂದು ಟ್ರಸ್ಟ್‌ನ ತಾಲ್ಲೂಕು ಯೋಜನಾಧಿಕಾರಿ ಸುಧೀರ್ ಜೈನ್ ಹೇಳಿದರು.

ತಾಲ್ಲೂಕಿನ ಜಿ ಹೊಸಹಳ್ಳಿ ಗ್ರಾಮದಲ್ಲಿ ಇಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ವತಿಯಿಂದ ವೀಲ್ ಚೇರ್ ವಿತರಿಸಿ ಮಾತನಾಡಿದರು.

‘ಸಂಸ್ಥೆಯು ವಿವಿಧ ಕ್ಷೇತ್ರದಲ್ಲಿ ಹಲವಾರು ಕಾರ್ಯಗಳನ್ನು ಮಾಡುವ ಮೂಲಕ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ ಎಂದರು.

ಈ ಸಂಧರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ವಲಯ ಮೇಲ್ವಿಚಾರಕರು ದೀಪಕ್, ಜಿ ಹೊಸಹಳ್ಳಿ ಒಕ್ಕೂಟ ಅಧ್ಯಕ್ಷ ರಂಜಿತ್, ವಿಪತ್ತು ನಿರ್ವಹಣಾ ಘಟಕದ ರವಿ, ಸತೀಶ್, ಸೇವಾಪ್ರತಿನಿಧಿ ಕುಸುಮ, ಹೇಮಾ ಹಾಗೂ ಗುರುಮೂರ್ತಿ ಇದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments