Wednesday, March 25, 2026
Homeಕ್ರೈಮ್ಆಲ್ದೂರು: ಸ್ಕೂಟಿಗೆ ಡಿಕ್ಕಿಯಾಗಿ ಮಹಿಳೆ ಮೇಲೆ ಹರಿದ ಟಿಟಿ ವಾಹನ: ಮುಗಿಲು ಮುಟ್ಟಿದ ಸಂಬಂಧಿಕರ ಆಕ್ರಂದನ

ಆಲ್ದೂರು: ಸ್ಕೂಟಿಗೆ ಡಿಕ್ಕಿಯಾಗಿ ಮಹಿಳೆ ಮೇಲೆ ಹರಿದ ಟಿಟಿ ವಾಹನ: ಮುಗಿಲು ಮುಟ್ಟಿದ ಸಂಬಂಧಿಕರ ಆಕ್ರಂದನ

ಆಲ್ದೂರು: ಸ್ಕೂಟಿಗೆ ಡಿಕ್ಕಿಯಾಗಿ ಮಹಿಳೆ ಮೇಲೆ ಟಿಟಿ ವಾಹನ ಹರಿದು ಆಕೆ ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪಟ್ಟಣದಲ್ಲಿ ನಡೆದಿದೆ.

ಹೌದು .. ನವಮಿ( 26) ಸ್ಥಳದಲ್ಲೇ ಮೃತಪಟ್ಟ ಮಹಿಳೆ. ಆಲ್ದೂರು ಸೊಸೈಟಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಟಿಟಿ ವಾಹನ KSRTC ಬಸ್ ಓವರ್ ಟೇಕ್ ಮಾಡಲು ಹೋಗಿ ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದು ನೋಡ ನೋಡ್ತಿದ್ದಂತೆ ಮಹಿಳೆ ಟಿಟಿ ಅಡಿ ಸಿಲುಕಿ ಕೊನೆಯುಸಿರು ಎಳೆದಿದ್ದಾರೆ.

ಈ ಘಟನೆ ಬಳಿಕ ಟಿಟಿ ಚಾಲಕ ಪರಾರಿಯಾಗಿದ್ದು KA 44, A4141 ನೋಂದಣಿಯ ಟಿಟಿ ವಾಹನ ಪೊಲೀಸರು ಚಾಲಕನನ್ನು ಹಿಡಿಯಲು ಬೆನ್ನಟ್ಟಿದ್ದಾರೆ.

ಹುಣಸೆ ಮಕ್ಕಿಯ ವಿಕಾಸ್ ಎಂಬುವರ ಪತ್ನಿ ನವಮಿ ಆಗಿದ್ದು ಜೀವ ತೆಗೆದ ಟಿಟಿ ಚಾಲಕನ ವಿರುದ್ಧ ಸಂಬಂಧಿಕರ ಆಕ್ರೋಶ ವ್ಯಕ್ತಪಡಿಸಿದ್ದು ಸಿ.ಟಿ ರವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!