Tuesday, August 11, 2026
Homeಕ್ರೈಮ್ಶಿವಮೊಗ್ಗ: ಮಂಗನ ಕಾಯಿಲೆಗೆ 29 ವರ್ಷದ ಯುವಕ ಸಾವು!

ಶಿವಮೊಗ್ಗ: ಮಂಗನ ಕಾಯಿಲೆಗೆ 29 ವರ್ಷದ ಯುವಕ ಸಾವು!

Telegram Group
Join Now

ಶಿವಮೊಗ್ಗ: ಕ್ಯಾಸನೂರು ಫಾರೆಸ್ಟ್ ಡಿಸೀಸ್ (ಕೆಎಫ್​ಡಿ) ಎಂದೇ ಕರೆಯಲಾಗುವ ಮಂಗನ ಕಾಯಿಲೆ ತಗುಲಿದ್ದ ಯುವಕನೋರ್ವ ಮೃತಪಟ್ಟ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಟಗಾರು ಗ್ರಾಮದಲ್ಲಿ ಬುಧವಾರ ನಡೆದಿದೆ.

ಕಟಗಾರು ಗ್ರಾಮದ 29 ವರ್ಷದ ಯುವಕ ಮೃತಪಟ್ಟವರು. ಇವರಿಗೆ ಕೆಎಫ್​ಡಿ ಪಾಸಿಟಿವ್ ಬಂದಿತ್ತು. ಜನವರಿ‌ 21ರಂದು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಯುವಕನನ್ನು ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಜನವರಿ‌ 22ಕ್ಕೆ ಕೆಎಫ್​ಡಿ ಪಾಸಿಟಿವ್ ವರದಿ ಬಂದಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್​ಗೆ ರವಾನೆ ಮಾಡಲಾಗಿತ್ತು. ಅಲ್ಲಿಯೂ ಕೂಡ ಚಿಕಿತ್ಸೆ ಫಲಿಸದೆ ಬುಧವಾರ ಬೆಳಗಿನಜಾವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮೃತ ಯುವಕನ ಗ್ರಾಮದಲ್ಲಿ ಇದುವರೆಗೂ ಯಾರಲ್ಲೂ ಸಹ ಕೆಎಫ್​ಡಿ ಲಕ್ಷಣಗಳು ಹಾಗೂ ಜ್ವರ ಕಂಡು ಬಂದಿಲ್ಲ.‌ ಆದರೆ, ಇವರಿಗೆ ಹೇಗೆ ಜ್ವರ ಬಂತು ಎಂಬುದು ಇನ್ನೂ ಪತ್ತೆಯಾಗಬೇಕಿದೆ.

ಜಿಲ್ಲಾ ಆರೋಗ್ಯ ಇಲಾಖೆಯು ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಕಟಗಾರು ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಜ್ವರದ ಲಕ್ಷಣವಿರುವವರ ತಪಾಸಣೆಗೆ ಸೂಚಿಸಿದೆ. ಮಂಗಗಳು ಸತ್ತಿರುವುದು ಕಂಡುಬಂದಲ್ಲಿ ಕೂಡಲೇ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments