ಕರ್ನಾಟಕ ರಾಜ್ಯ ಬರಹಗಾರ ಸಂಘ (ರಿ) ಹೂವಿನ ಹಡಗಲಿ ಜಿಲ್ಲಾ ಘಟಕ ಬೆಳಗಾವಿ ಮತ್ತು ಡಾಕ್ಟರ್ ಬಾಬುರಾವ್ ನಡೋಣಿ ರಾಷ್ಟ್ರೀಯ ಪ್ರತಿಷ್ಠಾನ (ರಿ ) ರಾಯಭಾಗ ಇವರ ಸಹಯೋಗದೊಂದಿಗೆ ನಡೆದ ರಾಜ್ಯಮಟ್ಟದ ಕನ್ನಡ ನುಡಿ ವೈಭವ 2026ರ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಬೆಳಗಾವಿ ನಗರದ ಮಹಾಂತೇಶ ನಗರದ ಮಹಾಂತ ಭವನದಲ್ಲಿ ಬಹಳ ಅದ್ದೂರಿಯಿಂದ ನಡೆಯಿತು.
ರಾಜ್ಯ ಉಪ್ಪಾರ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಸಾಹಿತಿಗಳು ಶ್ರೀಮತಿ ಹೇಮಾವತಿ ಸೊನೊಳ್ಳಿ ಸರ್ವಾಧ್ಯಕ್ಷತೆ ವಹಿಸಿದ್ದರು.
ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶ್ರೀ ಮಧುನಾಯಕ್ ಲಂಬಾಣಿ ಅವರ ಅಧ್ಯಕ್ಷತೆಯಲ್ಲಿ ಕನ್ನಡ ನುಡಿ ವೈಭವ ಕಾರ್ಯಕ್ರಮದಲ್ಲಿ 2026 ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಕಲಾವಿದರಿಗೆ ಪ್ರತಿವಾರ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದು.ಅದರಂತೆ ಸಂಗೀತ ಕ್ಷೇತ್ರದ ಗಾಯನ ಸ್ಪರ್ಧೆಯನ್ನು ಮಾಡಲಾಗಿತ್ತು. ಈ ಸ್ಪರ್ಧೆಗಳಲ್ಲಿ ಕರ್ನಾಟಕ ಹಾಗೂ ಹೊರ ರಾಜ್ಯದಿಂದ ವಿವಿಧ ಸ್ಪರ್ಧಿಗಳು ಭಾಗವಹಿಸಿದ್ದರು.
ಅಂತಿಮವಾಗಿ 22 ಜನ ರಾಜ್ಯ ಮಟ್ಟದ ಕರುನಾಡ ಕೋಗಿಲೆ 2026ಕ್ಕೆ ಆಯ್ಕೆಯಾಗಿದ್ದರು. ಅದರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಿಂದ ಡಾ. ವಿದ್ಯಾ. ಕೆ ರಾಷ್ಟ್ರೀಯ ಉತ್ತಮ ಶಿಕ್ಷಕರ ಪ್ರಶಸ್ತಿ ವಿಜೇತರು, ಉತ್ತಮ ಕಲಾವಿದರು, ಗಾಯಕರು ಸಾಹಿತಿಗಳು ಆಯ್ಕೆಯಾಗಿದ್ದು. ಇದು ಚಿಕ್ಕಮಗಳೂರು ಜಿಲ್ಲೆಗೆ ಒಂದು ಹೆಮ್ಮೆಯ ವಿಚಾರವಾಗಿದೆ. ಇವರು ಬಹುಮುಖ ಪ್ರತಿಭೆ ಕೂಡ ಆಗಿದ್ದು, ಇವರಿಗೆ ಇನ್ನೂ ಹಲವಾರು ಪ್ರಶಸ್ತಿಗಳು ಬಂದು ಚಿಕ್ಕಮಗಳೂರು ಜಿಲ್ಲೆಗೆ ಕೀರ್ತಿಯನ್ನು ತರಲೆಂದು ಕುಟುಂಬಸ್ಥರು,ಸ್ನೇಹಿತರು, ಅಭಿಮಾನಿಗಳು ಹಾರೈಸಿದ್ದಾರೆ
