ಹೆಜಮಾಡಿ: ಉಡುಪಿಯ ಗಡಿಭಾಗ ಹೆಜಮಾನಡಿಯಲ್ಲಿ ಕೇರಳದ ವಿದ್ಯಾರ್ಥಿಗಳು ರಾತ್ರಿ ವೇಳೆ ರಸ್ತೆಯಲ್ಲಿ ಹುಚ್ಚಾಟ ನಡೆಸಿರುವುದಕ್ಕೆ ವ್ಯಾಪಕ ಆಕ್ರೋಶಕ್ಕೆ ಉಂಟಾಗಿದೆ. ಉಡುಪಿ ಮತ್ತು ದಕ್ಷಿಣ ಕನ್ನಡದ ಗಡಿ ಭಾಗ ಹೆಜಮಾಡಿ ಟೋಲ್ ಗೇಟ್ ಸಮೀಪ ಈ ಘಟನೆ ಸಂಭವಿಸಿದೆ.
ಕೇರಳದಿಂದ ಎರಡು ಬಸ್ಸುಗಳಲ್ಲಿ ಉಡುಪಿ ಕಡೆಗೆ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳು ರಸ್ತೆಯಲ್ಲಿ ಬಸ್ಸು ನಿಲ್ಲಿಸಿ ಕುಣಿದು ಕೊಪ್ಪಳಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ರಸ್ತೆಯಲ್ಲೇ ಪಟಾಕಿ ಸೇರಿಸಿ ಹುಚ್ಚಾಟ ಮರೆದಿದ್ದಾರೆ.
ಕೇರಳ ವಿದ್ಯಾರ್ಥಿಗಳ ಈ ಹುಚ್ಛಾಟದ ವಿಡಿಯೋ ಮೊಬೈಲ್ ಗಳಲ್ಲಿ ದಾಖಲಾಗಿದ್ದು ವೈರಲ್ ಆಗುತ್ತಿದೆ. ಸೂಕ್ತ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
