Wednesday, August 12, 2026
Homeಕ್ರೈಮ್ಚಿಕ್ಕಮಗಳೂರು: ಜಿಲ್ಲಾಸ್ಪತ್ರೆಗೆ ಪರಿಷತ್ ಸದಸ್ಯ ಸಿ.ಟಿ.ರವಿ ದಿಢೀರ್ ಭೇಟಿ, ಪರಿಶೀಲನೆ!

ಚಿಕ್ಕಮಗಳೂರು: ಜಿಲ್ಲಾಸ್ಪತ್ರೆಗೆ ಪರಿಷತ್ ಸದಸ್ಯ ಸಿ.ಟಿ.ರವಿ ದಿಢೀರ್ ಭೇಟಿ, ಪರಿಶೀಲನೆ!

Telegram Group
Join Now

ಚಿಕ್ಕಮಗಳೂರು: ಜಿಲ್ಲಾಸ್ಪತ್ರೆಗೆ ಪರಿಷತ್ ಸದಸ್ಯ ಸಿ.ಟಿ.ರವಿ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ಇಡೀ ಆಸ್ಪತ್ರೆಯನ್ನ ಸುತ್ತಾಡಿ ನೀರನ್ನ ಚೆಕ್ ಮಾಡಲು ವಾಶ್ ರೂಮಿಗೂ ಹೋಗಿ ಪರಿಶೀಲನೆ ನಡೆಸಿದರು.

ಹೌದು .. ನೀರಿನ ಸಮಸ್ಯೆ, ಆಸ್ಪತ್ರೆ ನೀಟ್ ಇಲ್ಲ, ಡಯಾಲಿಸೀಸ್ ಇಲ್ಲ, ಮಾತ್ರೆಗಳಿಗೆ ಹೊರಗಡೆ ಬರೆದುಕೊಡ್ತಾರೆ, ವೈದ್ಯರು ಸರಿಯಾಗಿ ಚಿಕಿತ್ಸೆ ನೀಡಲ್ಲ ಎಂದು ದೂರು ಬಂದಿದ್ದವು. ದೂರು ಬಂದ ಹಿನ್ನೆಲೆಯಲ್ಲಿ ಇಂದು ಪರಿಷತ್ ಸದಸ್ಯ ಸಿಟಿ ರವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ವಿಶೇಷವಾಗಿತ್ತು.

ಕೆಲ ತಿಂಗಳ ಹಿಂದೆ ಹಿಮ್ಸ್ ಗೆ ಹೋಗಿ ಪರಿಶೀಲನೆ ನಡೆಸಿದ್ದು ತಮ್ಮಯ್ಯ ಹಾಗೂ ಸಿಟಿ ರವಿ ಮಧ್ಯೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಇಬ್ಬರು ನಾಯಕರು ಪರಸ್ಪರ ವಾಗ್ದಾಳಿ ನಡೆಸಿದ್ರು. ಇದೀಗ ಜಿಲ್ಲಾಸ್ಪತ್ರೆಗೆ ಸಿಟಿ ರವಿ ಅವರು ಭೇಟಿ ನೀಡಿರೋದು ಯಾವ ರೀತಿಯ ಚರ್ಚೆಯನ್ನ ಹುಟ್ಟು ಹಾಕುತ್ತೆ ಅನ್ನೋದನ್ನ ಕಾದು ನೋಡಬೇಕು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments