ಮೂಡಿಗೆರೆ: ಹಿಂದೂ ಸಮೋಜೋತ್ಸವ ಆಯೋಜನ ಸಮಿತಿ ಮೂಡಿಗೆರೆ ತಾಲ್ಲೂಕು ಇವರ ಸಹಯೋಗದಲ್ಲಿ ಗೋಣಿಬೀಡು ಹೋಬಳಿಯ ಜನ್ನಾಪುರ, ಕಿರಗುಂದ, ಚಿನ್ನಿಗ ಮಂಡಲದ ವತಿಯಿಂದ ಜನ್ನಾಪುರದ ಗಣಪತಿ ದೇವಾಲಯದಲ್ಲಿ ಸಾವಿರಾರು ಹಿಂದೂ ಬಾಂಧವರ ಸಮ್ಮುಖದಲ್ಲಿ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ವನ್ನು ರಾಜಬೀದಿಗಳಲ್ಲಿ ಭವ್ಯ ಮೆರವಣಿಗೆಯೊಂದಿಗೆ ಆಚರಿಸಲಾಯಿತು

ಕಾರ್ಯಕ್ರಮ ಉದ್ಘಾಟಿಸಿ ಸಂಸ್ಕೃತಿ ಸಂಸ್ಕಾರದ ಕುರಿತು ಮಾತನಾಡಿದ ಸಮಾಜ ಚಿಂತಕಿ ಭಾಗ್ಯ ಲಕ್ಷ್ಮಣ ಗೌಡ ಮಾತನಾಡಿ ಭಾರತೀಯ ಸಂಸ್ಕೃತಿ ಕುರಿತು ಐದು ವರ್ಷಗಳು ಮಾತನಾಡಿದರು ಸಮಯ ಸಾಲದು ಅಂತಹ ಪರಂಪರೆ ನಮ್ಮದಾಗಿದೆ ಎಂದರು
ಹಿಂದೂ ಧರ್ಮದಲ್ಲಿ ಜನಿಸಿದ ನಾವುಗಳು ಪುಣ್ಯವಂತರು ಎಂದರು. ಪಾಠಗಳಲ್ಲಿ ಹೇಳಿಕೊಡದ ಗುರುವಿಲ್ಲದೆ ಕಲಿಯುವುದೇ ಸಂಸ್ಕಾರ ವಾಗಿದೆ ಎಂದರು.ತಾಯಿ ಗುರುವಾಗಿ ಸಂಬಂಧ ಗಳನ್ನು ತಿಳಿಸಿಕೊಡಬೇಕು,
ಈ ದಿನಗಳಲ್ಲಿ ಚಾಲ್ತಿಯಲ್ಲಿರುವ ಸಂಬಂಧವೆ ಇಲ್ಲದೆ ಕರೆಯುವ ಆಂಟಿ ಮತ್ತು ಸಮಯ ಪ್ರಜ್ಞೆ ಇಲ್ಲದೆ ಧರಿಸುವ ನೈಟಿ ಆಗದಿರಲಿ ನಮ್ಮಯ ಬದುಕು ಎಂಬುದಾಗಿ ಕಿವಿ ಮಾತು ಹೇಳಿದರು,
ಪಾಶ್ಚಿತಮ್ಯ ಸಂಸ್ಕೃತಿ ಬೆಳೆಸಿಕೊಳ್ಳಬಾರದು. ಅವಶ್ಯಕತೆ ಪರ ಭಾಷೆ ಕಲಿಯಿರಿ ಆದರೆ ಮಾತೃ ಭಾಷೆ ಕನ್ನಡವನ್ನು ಮರೆಯದಿರಿ ಎಂದು ತಿಳಿಸಿದರು. ಬೇರೆಯವರನ್ನು ಬದಲಾಯಿಸುವ ಬದಲು ನಮ್ಮನ್ನು ನಾವು ಬದಲಾಯಿಸಿಕೊಂಡು ದೇಶ, ಭಾಷೆ ಆರೋಗ್ಯ, ಅಚ್ಚುಕಟ್ಟಾಗಿಡಬೇಕು ಎಂದರು

ಕಾರ್ಯಕ್ರಮಕ್ಕೆ ದಿಕ್ಸುಚಿ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಹಿಂದೂ ಜಾಗರಣ ವೇದಿಕೆ ಪ್ರಾಂತ ಸಹ ಸಂಯೋಜಕ ಸತೀಶ್ ದಾವಣಗೆರೆ 1925 ಕ್ಕೆ ಆರಂಭವಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆರಂಭವಾಗಿ ನೂರು ವರ್ಷಗಳ ಬೆನ್ನಲ್ಲೇ ಸಂಘ ಆರಂಭವಾದ ಹಿನ್ನಲೆ ತಿಳಿಸುವ ವಿಚಾರ್ವಾಗಿ ಇಡಿ ಹಳ್ಳಿ ಹಳ್ಳಿ ಹಿಂದೂ ಸಮಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ
ಸಂಘದ ವಿಚಾರವಾಗಿ ಅನಗತ್ಯ ವಾಗಿ ಬೊಬ್ಬೆ ಹೊಡೆಯುವರನ್ನು ನವೆಂದು ಲೆಕ್ಕಕ್ಕೆ ಪರಿಗಣಿಸಿಲ್ಲ ಕಸವನ್ನು ಕಾಲಲ್ಲಿ ತುಳಿಯುವುದನ್ನು ಬಿಟ್ಟು ತಲೆಯಲ್ಲಿ ಇಡುವ ಅಭ್ಯಾಸ ನಮ್ಮದಲ್ಲ ಎಂದರು.
ರಾಷ್ಟೀಯ ಸ್ವಯಂ ಸೇವಕ ಸಂಘಕ್ಕೆ ಪ್ರಚಾರದ ಅವಶ್ಯಕತೆ ಇಲ್ಲಾ. ಕಾರಣ ನಮ್ಮ ಅವಿವೇಕಿ ರಾಜಕಾರಿಣಿಗಳೇ ಪ್ರಚಾರ ನೀಡುವುದು ಸಾಕು ಎಂದರು.ರಾಷ್ಟ್ರದಲ್ಲಿ ಅತ್ಯಾಚಾರ ದಬ್ಬಾಳಿಕೆ ಮಾಡಿದ 600 ವರ್ಷ ಇಸ್ಲಾಂ ಆಳ್ವಿಕೆ ಮಾಡಿದಾಗಳು ಹಿಂದೂಗಳು ಒಂದಾಗಲು ಶಿವಾಜಿ ಮಹಾರಾಜರ ಆರ್ಭಟ ಮರೆಯಲು ಸಾಧ್ಯವಿಲ್ಲ ಎಂದರು
ಸಮಾಜದಲ್ಲಿ ಲವ್ ಜಿಹಾದ್ ತಡೆಯಲು ತಾಯಂದಿರ ಜವಾಬ್ದಾರಿ ಅತ್ಯವಶ್ಯಕವಾಗಿದೆ ಎಂದರು ದೇಶವನ್ನು ಕಾಪಾಡಿದ ಕ್ರಾಂತಿಕಾರಿಗಳ. ವಿವೇಕಾನಂದ ರ ಬಗ್ಗೆ ಪೋಷಕರು ಮಕ್ಕಳಿಗೆ ತಿಳಿಸಬೇಕು.

ಮಹಿಳೆರಿಗೂ ದೇಶ ಕಾಪಾಡುವ ತಾಕತ್ತಿದೆ ಎಂಬುದನ್ನು ತೋರಿದ ಬೆಳವಾಡಿ ಮಲ್ಲಮ್ಮ,, ರಾಣಿ ಚೆನ್ನಮ್ಮ ಅಬ್ಬಕ್ಕ. ಝಾನ್ಸಿ ರಾಣಿ ಲಕ್ಷ್ಮಿ ಭಾಯಿ ರಂತಹ ವೀರ ಮಹಿಳೆಯರನ್ನು ಸ್ಮರಿಸುವ ಹುಟ್ಟು ಹಾಕುವ ಸಾಮರ್ಥ್ಯ ಮಾತೆಯರಿಗಿದೆ ಎಂದರು
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಪೂಜ್ಯಶ್ರೀ ಸ್ವಂತತ್ರ್ಯ ಬಸವಲಿಂಗ ಶಿವಯೋಗಿ
ಸ್ವಾಮೀಜಿ ಸಮಾಜಕ್ಕಾಗಿ ಹಲವರ ತ್ಯಾಗ, ಬಲಿದಾನ,ರೋಚಕ ಇತಿಹಾಸವನ್ನು ಸ್ಮರಿಸುತ್ತ. ಕೆಲವೊಂದರಲ್ಲಿ ಸೊತಿದ್ದರು ಸತ್ತಿಲ್ಲ ಎಂಬ ನೆನಪುಗಳನ್ನು ಹಿರಿಯರು ಮಾಡಿದ್ದಾರೆ.
ಬಿಗ್ ರಿಯಲಿಟಿ ಶೋ ಗಳನ್ನು ನೋಡುವ ದೇಶದ ಚಿಂತನೆ ಇಲ್ಲದ, ಮಕ್ಕಳ ಬಗ್ಗೆ ಜವಾಬ್ದಾರಿ ಇಲ್ಲದೆ ದುಡಿದು ಬಂದ ಗಂಡನ ನೆನಪಿಲ್ಲದೆ ಟಿವಿ ಮುಂದೆ ಟೈಟ್ ಆಗಿ ಮೈ ಮರೆತು ಕುರುವಂತವರಿಗೆ ಶೋ ಗಳ ಹೆಸರು ನೆನಪಿರುತ್ತದೆ ಆದ್ರೆ ಹಿಂದೂ ಧರ್ಮ, ಸಂಸ್ಕೃತಿ, ಭಾಷೆ, ಬಗ್ಗೆ ಮಾತ್ರ ಅರಿವಿಲ್ಲದಿರುವುದೇ ನೋವಿನ ಸಂಗತಿ, ಇಂತಹ ವರನ್ನ ಬಡಿದೇಬ್ಬಿಸುವ ಕೆಲಸ ಮಾಡುವುದೇ ಹಿಂದೂ ಕಾರ್ಯಕ್ರಮ ಎಂದರು
ನಾಗರಿಕ ಜವಾಬ್ದಾರಿ ಗಳನ್ನು ಮರೆತು ಜವಾಬ್ದಾರಿಗಳಿಂದ ವಿಮುಖ ರಗುತ್ತಿದ್ದೇವೆ. ತಾಯಂದಿರು ಮಕ್ಕಳನ್ನು ಸಮಾಜಕ್ಕೆ ಪೂರಕವಾಗಿ ಬೆಳೆಸಬೇಕು ಮೊದಲು ಅದರ ಪರಿಜ್ಞಾನ ನೀವು ಕಲಿಯಿರಿ ಎಂದರು
ಹಿಂದೂ ಹೆಣ್ಣು ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ ಅಕೌಂಟ್ ಗಳ ಬಗ್ಗೆ ಎಚ್ಚರಿಕೆ ವಹಿಸಿ,
ಮಕ್ಕಳಿಗೆ ವಿದ್ಯಾಭ್ಯಾಸದ ಹೊರತಾಗಿ ಮೊಬೈಲ್ ಬಳಕೆ ಕಮ್ಮಿ ಮಾಡಲು ಪೋಷಕರು ಗಮನ ಹರಿಸಬೇಕು ಎಂದರು
ಮಕ್ಕಳ ಚಟುವಟಿಕೆ ಗಳ ಬಗ್ಗೆ ಪೋಷಕರು ಗಮನ ಹರಿಸಬೇಕು,ಮಕ್ಕಳಿಗೆ ಹಣ, ಅನ್ನ,ದುಡಿಮೆ, ಸಂಸ್ಕಾರ, ಸೇವೆ, ಮಹತ್ವ ವನ್ನು ನಾವುಗಳು ತಿಳಿಸಿಕೊಡಬೇಕುನಮ್ಮ ಜವಾಬ್ದಾರಿ ಸರಿಯಾಗಿ ನಿಭಾಯಿಸದೆ ಇದ್ದರೆ ಸಾಮಾಜಿಕ ವ್ಯವಸ್ಥೆ ದಾರಿ ತಪ್ಪುತ್ತದೆ ಎಂದರು
ಇತ್ತೀಚಿನ ದಿನಗಳಲ್ಲಿ ಬಿಟ್ಟಿ ಭಾಗ್ಯ ಗಳಿಂದ ರಾಜ್ಯ ದಿವಾಳಿ ಆಗುತ್ತಿದ್ದು ಉತ್ತಮ ರಾಜಕಾರಿಣಿ ಗಳನ್ನು ಆರಿಸುವುದು ನಿಮ್ಮ ಜವಾಬ್ದಾರಿ ಹಾಗೂ ಸಾಮಾಜಿಕ ಶಿಷ್ಟಾಚಾರವಾಗಿದೆ ಬಿಟ್ಟಿ ಭಾಗ್ಯಗಳಿಗೆ ಬಲಿಯಾಗಿ ಮಕ್ಕಳ ಮುಂದಿನ ಭವಿಷ್ಯ ಹಾಳು ಮಾಡಬೇಡಿ ಎಂದರು
ಹಿಂದೂ ಕಾರ್ಯಕ್ರಮ ಗಳಲ್ಲಿ ಪೊಲೀಸ್ ಇಲಾಖೆಗೋ ರಕ್ಷಣೆ ಮಾಡುವ ಬಜರಂಗದಳ ಕಾರ್ಯಕರ್ತರನ್ನು ವಿವಿಧ ಕೇಸ್ ಹಾಕುವ ನೀವು ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚುವ ಕಾರ್ಯಕರ್ತರನ್ನು ಮೂಲೆ ಗುಂಪು ಮಾಡುವ ನೀವು ನಮ್ಮ ರಕ್ಷಣೆಗೆ ಮುಂದಾಗಿದ್ದು ಹಾಸ್ಯಸ್ಪದ ವಾಗಿದೆ.
ಮೊದಲು ನಿಮ್ಮ ರಕ್ಷಣೆಯ ಕಡೆ ಗಮನ ಹರಿಸಿ ಏಕೆಂದರೆ ದಾವಣಗೆರೆ ಹಾಗೂ ಡಿಜೆ ಹಳ್ಳಿ ನಡೆದ ಘಟನೆಗಳು ನಿಮ್ಮ ಪೊಲೀಸ್ ಠಾಣೆಗೆ ಬೆಂಕಿ ಇಟ್ಟಿರುವುದನ್ನು ಪ್ರತಿ ದಿನ ನೆನಪಿರಲಿ, ಇಂತಹ ಹೇಯ ಕೃತ್ಯ. ಮಾಡುವವರಿಗೆ ರಾಜತಿತ್ಯ ನೀಡಿದವರು ನೀವೇ ಅಲ್ಲವೇ ಎಂದರು..
ವಿಶ್ವ ಹಿಂದೂ ಪರಿಷತ್ತು, ಬಜರಂಗದಳ, ಹಿಂದೂ ಜಾಗರಣ ವೇದಿಕೆ ಹಿಂದೂ ಸಂಘಟನೆ ಕಾರ್ಯಕರ್ತರು ಎಂದಿಗೂ ದೇಶ ಧರ್ಮ ಕಾಪಾಡುವ ಕೆಲಸ ಮಾಡುತ್ತಾರೆ ವಿನ್ಹ ದೇಶ ದ್ರೋಹ ಕೆಲಸ ಮಾಡುವರಲ್ಲ ಎಂದರು
ಈ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ಕಾಫಿ ಬೆಳೆಗಾರರು ಉಮೇಶ್ ಹೊಯ್ಸಳಲು ವಹಿಸಿದ್ದರು,ಆಯೋಜನ ಸಮಿತಿ ಅಧ್ಯಕ್ಷ ಜಯಂತ್,ವೇದಿಕೆಯಲ್ಲಿ ಉಪಸ್ಥಿತರಿದ್ದರುವಿಧಾನ ಪರಿಷತ್ ಉಪ ಸಭಾಪತಿ ಎಂ ಕೆ.ಪ್ರಾಣೇಶ್ ಭಾಗಿಯಾಗಿದ್ದರು,
ಸ್ಥಳೀಯ ಬಿಜೆಪಿ ಮುಖಂಡರಾದ ರಘು ಜನ್ನಾಪುರ, ಸುನಿಲ್ ನಿಡಗೋಡು, ವೀರೇಂದ್ರ ಪಟೇಲ್, ಭರತ್, ಪ್ರಹ್ಲಾದ್ ಪಲ್ಲು ಅವಿನಾಶ್ ಜನ್ನಾಪುರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು
ವಿಶ್ವ ಹಿಂದೂ ಪರಿಷತ್ ಸಂಘಟನೆಯ ತಾಲೂಕು ಅಧ್ಯಕ್ಷ ಸುಧೆವ್ ಗುತ್ತಿ, ಸಾಲುಮರ ಮಹೇಶ್, ಪ್ರಶಾಂತ್ ಹಂಡಗುಳಿ, ಅಭಿ ಉಗ್ಗೇಹಳ್ಳಿ ಸೇರಿದಂತೆ ಹಿಂದೂ ಸಂಘಟನೆಯ ಸಂತೋಷ್ ಶುಭನಗರ, ಶಶಿ ಕಿತ್ತಲೇ ಗಂಡಿ, ಅಭಿ ಡೈರಿ,ಇದ್ದರು
ವರದಿ :ಪುನೀತ್ ಕಡಿದಾಳು
9483811948
