ಚಿಕ್ಕಮಗಳೂರು: ಕಾಫಿನಾಡು ಮಲೆನಾಡು ಭಾಗದಲ್ಲಿ ಹಾರಾಡಿದ ಕಿರು ವಿಮಾನವೊಂದು ಜಿಲ್ಲೆಯಾದ್ಯಂತ ಭಾರಿ ಆತಂಕ ಮತ್ತು ಕುತೂಹಲಕ್ಕೆ ಕಾರಣವಾಗಿದೆ. ಕಳಸದಿಂದ ಬಾಳೆಹೊನ್ನೂರು ವರೆಗೆ ಅತ್ಯಂತ ಕೆಳಮಟ್ಟದಲ್ಲಿ ಹಾರಾಟ ನಡೆಸಿದ ಈ ವಿಮಾನ ಮಲೆನಾಡಿಗರ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
https://www.instagram.com/reel/DUkZiA2idnz/?igsh=YXBoemF2ZWxlNnc0
ಚಿಕ್ಕಮಗಳೂರು ಜಿಲ್ಲೆಯ ಕಳಸ ಮತ್ತು ಎನ್.ಆರ್.ಪುರ ತಾಲೂಕಿನ ಭದ್ರಾ ನದಿಯ ಸುತ್ತಮುತ್ತಲ ಪ್ರದೇಶಗಳಲ್ಲಿ ಈ ಲಘು ವಿಮಾನ ಎರಡು ಬಾರಿ ಹಾರಾಟ ನಡೆಸಿದೆ. ಹಾರಾಟ ನಡೆಸಿರುವುದನ್ನ ಅಲ್ಲಿನ ಸ್ಥಳೀಯರು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ.
ಈ ವಿಮಾನದಲ್ಲಿ ಯಾರಿದ್ದರೂ ಎಲ್ಲಿಂದ ಬಂತು ಯಾಕೆ ಬಂತು ಎಂಬುದು ಇನ್ನೂ ತಿಳಿದಿಲ್ಲ ಕಳಸದಿಂದ ಬಾಳೆಹೊನ್ನೂರು ವರೆಗೆ ಅತ್ಯಂತ ಕೆಳಮಟ್ಟದಲ್ಲಿ ಹಾರಾಟ ನಡೆಸಿ ಆ ನಂತರ ಶಿವಮೊಗ್ಗದತ್ತ ಸಾಗಿದೆ.

ಈ ಲಘು ವಿಮಾನ ಹಾರಾಟದ ಬಗ್ಗೆ ಚಿಕ್ಕಮಗಳೂರು ಪೊಲೀಸರು ಪತ್ತೆಹಚ್ಚಲು ಜಾಲ ಬೀಸಿದ್ದಾರೆ. ಆದರೆ ಈ ಕಿರು ವಿಮಾನವು ಭೂಮಿಗೆ ತೀರಾ ಹತ್ತಿರ ಎನ್ನುವಂತೆ ಕೆಳಭಾಗದಲ್ಲೇ ಸಂಚರಿಸಿರುವುದು ಜನರ ಆತಂಕಕ್ಕೆ ಗುರಿಯಾಗಿದೆ.
