ಸುಬ್ರಹ್ಮಣ್ಯ: ಮಾರ್ಚ್ ತಿಂಗಳು ಸಂಭವಿಸುವ ಚಂದ್ರಗ್ರಹಣ ಹಿನ್ನೆಲೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ದರ್ಶನ ಸೇವೆಗಳ ಸಮಯದಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ ಎಂದು ದೇವಾಲಯ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ.

ಅಧಿಕೃತ ಪ್ರಕಟಣೆಯಂತೆ, ದಿನಾಂಕ 02-03-2026 ಹಾಗೂ 03-03-2026ರಂದು ದೇವಾಲಯದಲ್ಲಿ ಸರ್ಪಸಂಸ್ಕಾರ ಪೂಜೆಗಳನ್ನು ನಡೆಸಲಾಗುವುದಿಲ್ಲ. ಚಂದ್ರಗ್ರಹಣದ ಕಾರಣದಿಂದಾಗಿ 03-03-2026 ರಂದು ಯಾವುದೇ ಸೇವೆಗಳು ಇರುವುದಿಲ್ಲ ಎಂದು ತಿಳಿಸಲಾಗಿದೆ.

ಚಂದ್ರಗ್ರಹಣ ಹಿನ್ನೆಲೆ, ದೇವಸ್ಥಾನದಲ್ಲಿ ಭಕ್ತರಿಗೆ ದರ್ಶನ ಹಾಗೂ ಸೇವೆಗಳ ಸಮಯದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ. ಭಕ್ತರು ದೇವಸ್ಥಾನಕ್ಕೆ ಆಗಮಿಸುವ ಮುನ್ನ ಬದಲಾದ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಸಹಕರಿಸುವಂತೆ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮನವಿ ಮಾಡಿದೆ. ಅಧಿಕೃತ ಪ್ರಕಟಣೆಯಂತೆ, ದಿನಾಂಕ 2-03-2026 ಹಾಗೂ 3-03-2026ರಂದು ದೇವಸ್ಥಾನದಲ್ಲಿ ಸರ್ಪಸಂಸ್ಕಾರ ಪೂಜೆಗಳನ್ನು ನಡೆಸಲಾಗುವುದಿಲ್ಲ. ಚಂದ್ರಗ್ರಹಣದ ಕಾರಣದಿಂದ 3-03-2026ರಂದು ಯಾವದೇ ಸೇವೆಗಳು ಇರುವುದಿಲ್ಲ ಎಂದು ತಿಳಿಸಲಾಗಿದೆ.

ಮಾರ್ಚ್ 3ರಂದು ದೇವಸ್ಥಾನದ ಮಹಾಪೂಜೆಯನ್ನು ಬೆಳಗ್ಗೆ 8 ಗಂಟೆಗೆ ನಡೆಸಲಾಗುವುದು. ಬಳಿಕ ಬೆಳಗ್ಗೆ 9 ಗಂಟೆಗೆ ದೇವಸ್ಥಾನದ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ರಾತ್ರಿ 7 ಗಂಟೆಯ ನಂತರ ದೇವಸ್ಥಾನದಲ್ಲಿ ಪೂಜೆ ನಡೆಯಲಿದೆ. ಗ್ರಹಣ ಮುಗಿದ ನಂತರ ರಾತ್ರಿ 9 ಗಂಟೆಗೆ ದೇವಸ್ಥಾನವು ಮತ್ತೆ ಭಕ್ತರ ದರ್ಶನಕ್ಕೆ ತೆರೆಯಲಾಗುತ್ತದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.
ವರದಿ: ಚೇತನ್ ಸುಬ್ರಹ್ಮಣ್ಯ
