ಮೂಡಿಗೆರೆ: ಅಂಬೇಡ್ಕರ್ ಪುತ್ಥಳಿ, ನಿರ್ಮಾಣಕ್ಕಾಗಿ ಜಾಗ ಮಂಜೂರಾತಿಗೆ ಶಾಸಕಿ ನಯನಾ ಮೋಟಮ್ಮ ಅವರಿಗೆ ಮನವಿ ಸಲ್ಲಿಸಲಾಯಿತು
ಬಳಿಕ ಸುದ್ದಿಗಾರರೊಂದಿಗೆ ಸಾಮಾಜಿಕ ಹೋರಾಟಗಾರ್ತಿ ಆಶಾ ಸಂತೋಷ್, ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜಯಂತಿಯನ್ನ ಆಚರಣೆ ಮಾಡಲಾಗುತ್ತಿದೆ. ಆದರೆ, ತಾಲೂಕು ಕೇಂದ್ರದಲ್ಲಿ ಇಂದಿಗೂ ಡಾ ಅಂಬೇಡ್ಕರ್ ಪುತ್ಥಳಿಯಾಗಲಿ ನಿರ್ಮಾಣವಾಗಿಲ್ಲ, ಭಾರತ ರಾಷ್ಟ್ರಕ್ಕೆ ಅಂಬೇಡ್ಕರ್ ಕೊಡುಗೆ ಅಪಾರ ಆದ್ದರಿಂದ ತಕ್ಷಣ ತಾಲ್ಲೂಕು ಕೇಂದ್ರದಲ್ಲಿ ಅಂಬೇಡ್ಕರ್ ಪುತ್ತಳಿ ನಿರ್ಮಾಣಕ್ಕೆ ಜಾಗ ಒದಗಿಸುವಂತೆ ಆಗ್ರಹಿಸಿದರು.

ಅಂಬೇಡ್ಕರ್ ಅವರು ಕೇವಲ ಒಂದು ಜನಾಂಗದ ನಾಯಕರಲ್ಲ ಅವರು ದೇಶಕ್ಕೆ ಸಂವಿಧಾನ ನೀಡಿದ ಮಹಾನ್ ಶಿಲ್ಪಿ, ಇಂತಹವರ ಒಂದು ಪುತ್ಥಳಿ ಮೂಡಿಗೆರೆಯಲ್ಲಿ ಇಲ್ಲದಿರುವುದು ವಿಷಾದನೀಯ. ಇದು ತಾಲೂಕಿಗೆ ಶೋಭೆ ತರುವಂತದ್ದಲ್ಲ ಎಂದರು
ಇದಕ್ಕಾಗಿ ಹಿಂದಿನಿಂದಲೂ ಹೋರಾಟ ನಡೆಸಿದ ದಲಿತ ಸಂಘರ್ಷ ಸಮಿತಿ ಹಾಗೂ ಜನಾಂಗ ಬಾಂಧವರ ಹೋರಾಟಕ್ಕೆ ನಡೆಸಿದ್ದಾರೆ.
ನಿಯೋಗದ ಮನವಿಯನ್ನು ಆಲಿಸಿದ ಶಾಸಕಿ ನಯನ ಮೋಟಮ್ಮ ಅವರು ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರವೇ ಪರಿಶೀಲನೆ ನಡೆಸುವ ಭರವಸೆ ನೀಡಿದ್ದಾರೆ.
ನಮ್ಮದೇ ಸಮುದಾಯದ ನಾಯಕಿಯಾಗಿರುವ ಶಾಸಕರು ಈ ಹೋರಾಟಕ್ಕೆ ಯಶಸ್ಸು ತಂದುಕೊಡುತ್ತಾರೆ ಎಂಬ ನಂಬಿಕೆ ನಮಗಿದೆ. ಎಂದರು
ಮನವಿ ಸಲ್ಲಿಸುವ ವೇಳೆ ಶಾಸಕಿ ನಯನ ಮೋಟಮ್ಮ ಅವರೊಂದಿಗೆ ಪುತ್ಥಳಿ ನಿರ್ಮಾಣದ ಅಗತ್ಯತೆ ಹಾಗೂ ಅದಕ್ಕೆ ಪೂರಕವಾದ ಜಾಗದ ಲಭ್ಯತೆಯ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು.
ಶಾಸಕರು ನೀಡಿರುವ ಭರವಸೆಯಂತೆ ಜಾಗ ಮಂಜೂರಾತಿ ಪ್ರಕ್ರಿಯೆ ಎಷ್ಟು ಬೇಗ ನಡೆಯಲಿದೆ ಎಂಬ ನಿರೀಕ್ಷೆಯಲ್ಲಿ ತಾಲೂಕಿನ ಜನತೆ ಕಾದು ಕುಳಿತಿರುವುದು ಅಷ್ಟೇ ಸತ್ಯವಾಗಿದೆ
ಈ ಸಂದರ್ಭದಲ್ಲಿ ಜನಪರ ಹೋರಾಟಗಾರರಾದ ಹರೀಶ್ ನಲ್ಕೆ, ಖಾಲಿದ್, ಸಂತೋಷ್, ಅಭಿಜಿತ್ ಹೆಡದಾಳು ಮುಂತಾದ ಪ್ರಮುಖರು ಉಪಸ್ಥಿತರಿದ್ದರು
ವರದಿ-ಪುನೀತ್ ಕಡಿದಾಳು
9483811948
