Sunday, February 15, 2026
Homeಕ್ರೈಮ್ಮೂಡಿಗೆರೆ: ಪ.ಪಂ. ಹೊಸ ಟೆಂಡರ್ ರೂಪಿಸಲು ಪತ್ರ: ಸೂಕ್ತಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಕಿಡಿ

ಮೂಡಿಗೆರೆ: ಪ.ಪಂ. ಹೊಸ ಟೆಂಡರ್ ರೂಪಿಸಲು ಪತ್ರ: ಸೂಕ್ತಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಕಿಡಿ

ಮೂಡಿಗೆರೆ : ಪಟ್ಟಣ ಪಂಚಾಯಿತಿ ಮಳಿಗೆಗಳನ್ನು ಮೀಸಲಾತಿ ಅಡಿಯಲ್ಲಿ ಹಂಚಿಕೆ ಮಾಡುವಲ್ಲಿ ಮಹಾ ಮೋಸ ಆಗಿದೆ ಎಂದು ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗಗಳ ಹಿತರಕ್ಷಣ ಒಕ್ಕೂಟ ಆರೋಪಿಸಿದೆ

ಈ ಕುರಿತು ಪಬ್ಲಿಕ್ ಇಂಪ್ಯಾಕ್ಟ್ ಜೊತೆಗೆ ವಿಶೇಷ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಎಂ. ದೇಜಪ್ಪ ಹೊಯ್ಸಳಲು ಅವರು ಪಟ್ಟಣ ಪಂಚಾಯಿತಿಗೆ ಒಳಪಡುವ ಮಳಿಗೆಗಳಲ್ಲಿ ಹಂಚಿಕೆ ವಿಚಾರದಲ್ಲಿ ದಲಿತ ಸಮುದಾಯದವರಿಗೆ ನಂಬಿಕೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದರು

ಸರ್ಕಾರ ಮತ್ತು ನ್ಯಾಯಾಲಯದ ಆದೇಶ ಮಿರಿ ದಲಿತ ಸಮುದಾಯಕ್ಕೆ ಅನ್ಯಾಯ ಮಾಡಿರುವುದಾಗಿ ತಿಳಿಸಿದರು

ಪ. ಪಂ. ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳ ಒಟ್ಟು 56 ಮಳಿಗೆಗಳಿದ್ದು ವಾಣಿಜ್ಯ ಮಳಿಗೆಗಳನ್ನು ಬಾಡಿಗೆ ನೀಡುವ ಸಂದರ್ಭದಲ್ಲಿ ನ್ಯಾಯಾಲಯದ ಆದೇಶದಂತೆ 21.1 ಶೇಕಡಾ ಪರಿಶಿಷ್ಟರಿಗೆ ನೀಡಬೇಕಾಗಿ ಆದ್ದೇಶಿಸಿದ್ದು ಪಂಚಾಯಿತಿ ಹರಾಜು ಪ್ರಕ್ರಿಯೆ ನಡೆಸಿದ್ದು ಮೀಸಲಾತಿಯಂತೆ ಮಳಿಗೆ ನೀಡಿಲ್ಲ ಇದು ದಲಿತ ಸಮುದಾಯಕ್ಕೆ ಮಾಡಿದ ದೊಡ್ಡ ಅನ್ಯಾಯ ಎಂದರು.

ದಲಿತ ಮುಖಂಡ ಕಿರಗುಂದ ರಾಮಯ್ಯ ಮಾತನಾಡಿ ಪಟ್ಟಣದ ವಿವಿದೆಡೆ ಮಳಿಗೆಗಳಿದ್ದು ಮೀಸಲಾತಿ ಅಡಿಯಲ್ಲಿ ದಲಿತರಿಗೆ ಮಳಿಗೆ ನೀಡದೆ ತಾರತಮ್ಯ ತೋರುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರುಈ ಅನ್ಯಾಯದ ಹಿಂದೆ ಕೆಲ ರಾಜಕಾರಿಣಿಗಳ ಹಾಗೂ ಅಧಿಕಾರಿಗಳ ಕೈವಾಡವಿದೆ ಎಂದು ಆರೋಪಿಸಿದರು

ಹರಾಜಿಗೆ ಸ್ಪಷ್ಟ ನಿಯಮಗಳಿದ್ದರು ಅವುಗಳನ್ನು ಗಾಳಿಗೆ ತೂರಿ ಒಳ ಬಾಡಿಗೆ ನೀಡಲು ವ್ಯವಸ್ಥಿತ ಕೆಲ ಮಾಲೀಕರಿಗೆ ಅವಕಾಶ ಕಲ್ಪಿಸಿ ಕೋಡಲಾಗುತ್ತಿದೆ ಎಂದು ದೂರಿದರು. ಹರಾಜು ಕೂಗುವಾಗ ತಾವು ಪಡೆದ ಪರವಾನಿಗೆ ಬೇರೆ ಇದ್ದು ಈಗಿರುವ ಪರವಾನಿಗೆ ಬೇರೆ ಇದೆ ಎಂದರು

ಹೊಸ ಟೆಂಡರ್ ಪ್ರಕ್ರಿಯೆಗೆ ಪತ್ರ ಬರೆದಿದ್ದು ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದರು

ಈ ಸಂದರ್ಭದಲ್ಲಿ BSP ಮುಖಂಡ ಅಭಿಜಿತ್ ಹೆಡದಾಳು, ಪರಿಶಿಷ್ಟ ಜಾತಿ ಮತ್ತು ಪಂಗಡದ ಸದಸ್ಯ ಗಣೇಶ್ ಉಪಸ್ಥಿತರಿದ್ದರು

ವರದಿ :ಪುನೀತ್ ಕಡಿದಾಳು

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!