Saturday, February 14, 2026
Homeಜಿಲ್ಲಾಸುದ್ದಿಮೂಡಿಗೆರೆ ಯುವಕನ ಹೊಸ ಉದ್ಯಮಕ್ಕೆ ಶುಭ ಹಾರೈಸಿದ ಹೆಚ್. ಡಿ. ಕುಮಾರಸ್ವಾಮಿ

ಮೂಡಿಗೆರೆ ಯುವಕನ ಹೊಸ ಉದ್ಯಮಕ್ಕೆ ಶುಭ ಹಾರೈಸಿದ ಹೆಚ್. ಡಿ. ಕುಮಾರಸ್ವಾಮಿ

ಮೂಡಿಗೆರೆ:ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಧ್ಯಕ್ಷರಾಗಿದ್ದ ದಿವಂಗತ ಉಮಾಪತಿ ಗೌಡ ಅವರ ಸುಪುತ್ರ ಸೂರಜ್ ಅವರು ದೆಹಲಿಯಲ್ಲಿ ಹೋಟೆಲ್ ಉದ್ಯಮ ಆರಂಭಿಸಿದ್ದು ಇವರಿಗೆ ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರು ಶುಭ ಹಾರೈಸಿದ್ದಾರೆ.

ಹೌದು .. ದಿವಂಗತ ಉಮಾಪತಿ ಗೌಡ ಅವರ ಸುಪುತ್ರ ಸೂರಜ್ ಅವರು ದೆಹಲಿಯಲ್ಲಿ ಹೋಟೆಲ್ ಉದ್ಯಮ ಆರಂಭಿಸಿದ್ದು ನೂತನ ಹೋಟೆಲ್ ಗೆ ಆಗಮಿಸಿ ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರು ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಭೇಟಿ ನೀಡಿ ಹೊಸ ಹೋಟೆಲ್ ಉದ್ಯಮ ಯಶಸ್ಸು ತರಲಿ ಎಂದು ಶುಭ ಹಾರೈಸಿದ್ದಾರೆ

ಈ ಕುರಿತು ಮಾತನಾಡಿದ ಸೂರಜ್ ಉಮಾಪತಿ ಗೌಡ ಹೊಸ ಉದ್ಯಮ ಆರಂಭಿಸಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿಗಳು ಭೇಟಿ ನೀಡಿ ಆರ್ಶೀವಾದ ಮಾಡಿದ್ದೂ ಸಂತಸ ತಂದಿದೆ ಎಂದರು

ಸೂರಜ್ ಅವರ ಹೊಸ ಉದ್ಯಮಕ್ಕೆ ಕುಟುಂಬಸ್ಥರು, ಸ್ನೇಹಿತರು, ಗ್ರಾಮಸ್ಥರು ಶುಭಕೋರಿದ್ದಾರೆ.

ಒಕ್ಕಲಿಗರ ಸಮುದಾಯದಿಂದ ಬಂದಿರುವ ಸೂರಜ್ ಅವರು ಬೆಂಗಳೂರಿನಲ್ಲೂ ಉಧ್ಯಮ ಕ್ಷೇತ್ರದಲ್ಲೂ ಜನಪ್ರಿಯತೆ ಗಳಿಸಿದ್ದಾರೆ. ಹಾಗೆ ಅವರು ಉತ್ತಮ ಕಾಫಿ ಬೆಳೆಗಾರರಾಗಿಯೂ ಸಹ ಗುರುತಿಸಿಕೊಂಡಿದ್ದಾರೆ.

ವರದಿ:ಪುನೀತ್ ಕಡಿದಾಳು
9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!