Sunday, July 12, 2026
Homeಕ್ರೈಮ್ಚಿಕ್ಕಮಗಳೂರು: ನಿರ್ಮಾಣ ಹಂತದ ಮನೆಯಲ್ಲಿ 70 ಸಾವಿರ ರೂ. ಮೌಲ್ಯದ ವಿದ್ಯುತ್ ತಂತಿ ಕಳವು

ಚಿಕ್ಕಮಗಳೂರು: ನಿರ್ಮಾಣ ಹಂತದ ಮನೆಯಲ್ಲಿ 70 ಸಾವಿರ ರೂ. ಮೌಲ್ಯದ ವಿದ್ಯುತ್ ತಂತಿ ಕಳವು

Telegram Group
Join Now

ಚಿಕ್ಕಮಗಳೂರು: ನಗರದ ಬಸವೇಶ್ವರ ಬಡಾವಣೆಯಲ್ಲಿ ನಿರ್ಮಾಣ ಹಂತದ ಮನೆಯೊಂದರಲ್ಲಿ ಸುಮಾರು 70 ಸಾವಿರ ರೂಪಾಯಿ ಮೌಲ್ಯದ ವಿದ್ಯುತ್ ತಂತಿಗಳನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ. 

ವಾರ್ಡ್ ನಂಬ‌ರ್ 2, ಬ್ಲಾಕ್ ನಂಬರ್ 13ರಲ್ಲಿ ರಕ್ಷಿತ್ ಎಂಬುವವರು ನೂತನ ಮನೆ ನಿರ್ಮಿಸುತ್ತಿದ್ದು, ಕಿಡಿಗೇಡಿಗಳು ಮನೆಯ ಯುಟಿಲಿಟಿ ಬಾಗಿಲಿನ ಮೂಲಕ ಒಳನುಗ್ಗಿ ಹಾಲ್, ಮೆಟ್ಟಿಲು ಹಾಗೂ ಮೊದಲ ಮಹಡಿಯ ಗೆಸ್ಟ್ ಬೆಡ್‌ರೂಮ್‌ಗಳಲ್ಲಿ ಸ್ವಿಚ್‌ ಬೋರ್ಡ್‌ಗಳಿಗೆ ಅಳವಡಿಸಿದ್ದ ತಂತಿಗಳನ್ನು ಕಟ್ ಮಾಡಿ ಕೊಂಡೊಯ್ದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯ ಜೊತೆಗೆ ತಾಮ್ರದ ಬೆಲೆಯೂ ಗಗನಕ್ಕೇರುತ್ತಿರುವುದರಿಂದ ವಿದ್ಯುತ್ ತಂತಿನಲ್ಲಿರುವ ತಾಮ್ರದ ಆಸೆಗೆ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮನೆಯ ಮಾಲೀಕ ರಕ್ಷಿತ್ ನೀಡಿದ ದೂರಿನನ್ವಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments